ಕೋಲಾರ,ವಿಧಾನಸಭಾ ಚುನಾವಣೆಯ ಪ್ರಯುಕ್ತ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಏಪ್ರಿಲ್ ೩೦ ರಂದು ಕೋಲಾರ ಜಿಲ್ಲೆಗೆ ಆಗಮಿಸುತ್ತಿದ್ದು, ಬಿಜೆಪಿ ಸಮಾವೇಶ ಕಾರ್ಯಕ್ರಮ ಬೆಳಿಗ್ಗೆ ೧೧:೩೦ ರಿಂದ ೧೨:೩೦ ರವರಿಗೆ ಕೋಲಾರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ೭೫ ರ ಪಕ್ಕದಲ್ಲಿರುವ ಕೆಂದಟ್ಟಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಕ್ಕೆ ಹಲವಾರು ಕಡೆಯಿಂದ ಜನರು ವಾಹನಗಳಲ್ಲಿ ಬರುವುದರಿಂದ ವಾಹನ ದಟ್ಟಣೆ ಆಗುವುದರಿಂದ ಬೆಂಗಳೂರು ಕಡೆಯಿಂದ ಮುಳಬಾಗಿಲು ಕಡೆಗೆ ಬರುವಂತಹ ಮತ್ತು ಹೋಗುವಂತಹ ವಾಹನಗಳಿಗೆ ಬದಲಿ ರಸ್ತೆ ವ್ಯವಸ್ಥೆ ಕಲ್ಪಿಸಿದೆ. ಬೆಂಗಳೂರು ಮುಖಾಂತರ ಬರುವಂತಹ ವಾಹನಗಳು ಬೆಳ್ಳೂರು ಗ್ರಾಮದ ಕಡೆಯಿಂದ ನರಸಾಮರ ವೇಮಗಲ್, ಕೋಲಾರ ನಗರ, ಟಮಕ ಮಾರ್ಗವಾಗಿ ಮುಳಬಾಗಿಲಿಗೆ, ಮುಳಬಾಗಿಲು ಮುಖಾಂತರ ಬೆಂಗಳೂರಿಗೆ ಹೋಗುವಂತಹ ವಾಹನಗಳು ಕೋಲಾರ ನಗರದ ಹೊರವಲಯದ ಪವನ್ ಕಾಲೇಜು ಸರ್ವೀಸ್ ರಸ್ತೆ ಮುಖಾಂತರ ಅಮ್ಮೇರಹಳ್ಳಿ ಗ್ರಾಮ, ವಕ್ಕಲೇರಿ ಗ್ರಾಮ ದೊಡ್ಡಶಿವಾರದ ಕಡೆಯಿಂದ ನರಸಾಪುರ ರಾಷ್ಟ್ರೀಯ ಹೆದ್ದಾರಿ, ಮಾರ್ಗವಾಗಿ ಹೋಗಲು ವಾಹನಗಳನ್ನು ಬೆಳಿಗ್ಗೆ ೬ ಗಂಟೆಯಿoದ ಸಮಾರಂಭ ಮುಗಿಯವರೆಗೂ ಸಂಚಾರ ಮಾಡುವಂತೆ ಅಧಿಕೃತ ಪ್ರಕಟಣೆ ತಿಳಿಸಿದೆ.