ಮುಳಬಾಗಿಲು, ಗ್ರಾಮೀಣ ಪ್ರದೇಶಗಳಲ್ಲಿ ಆಕ್ರಮ ಮದ್ಯ ಮಾರಾಟ ಜೂಜಾಟ ನಿಷೇದ ಮಾಡಲು ದೈರ್ಯ ಮಾಡುವ ಆಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಸಲಹೆ ನೀಡಿದರು.
ನಗರದ ಹೊರವಲಯದ ಉದ್ಯಾನವನದಲ್ಲಿ ಕರೆದಿದ್ದ ಮಹಿಳಾ ರೈತ ಸಂಘದ ಸಭೆಯಲ್ಲಿ ಮಾತನಾಡಿದ ರವರು ಐದು ವರ್ಷಕ್ಕೊಮ್ಮೆ ಚುನಾವಣೆ ಬರುತ್ತದೆ ಆದರೆ ಐದು ಗ್ರಾಮೀಣ ಪ್ರದೇಶಗಳಲ್ಲಿ ಕೂಲಿಕಾರ್ಮಿಕರ ಸ್ವಾಭಿಮಾನದ ಬದುಕನ್ನು ಕಸಿಯುತ್ತಿರುವ ಆಕ್ರಮ ಮದ್ಯ ಮಾರಾಟ ಜೂಜಾಟದಿಂದ ಬಡವರ ಬದುಕನ್ನು ರಕ್ಷಣೆ ಮಾಡುವಲ್ಲಿ ಯಾವುದೇ ರಾಜಕೀಯ ಪಕ್ಷದ ಅಭ್ಯರ್ಥಿಗಳು ಮುಂದಾಗದೆ ಚುನಾವಣೆ ಬಂದಾಗ ಕಾಲಿಗೆ ಚಕ್ರ ಕಟ್ಟಿಕೊಂಡು ಅಮಾಯಕ ಮತ ಬಾಂಧವರ ಮತ ಸೆಳೆಯಲು ಪುಕ್ಕಟೆ ಯೋಜನೆಗಳನ್ನು ಜಾರಿ ಮಾಡುತ್ತೇವೆಂದು ಹೇಳುವ ರಾಜಕೀಯ ಪಕ್ಷಗಳಿಗೆ ಬುದ್ದಿ ಕಲಿಸಲು ಸರಿಯಾದ ಸಮಯ ಇದನ್ನು ಉಪಯೋಗಿಸಿಕೊಂಡು ನಮ್ಮ ಬದುಕನ್ನು ಬೀದಿಗೆ ತಳ್ಳುತ್ತಿರುವ ಆಕ್ರಮ ಮದ್ಯ ಮಾರಾಟ ನಿಷೇಧ ಮಾಡುವ ದೈರ್ಯ ತೋರುವ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಎಂದು ಮನವಿ ಮಾಡಿದರು.
ದಿನದ ೨೪ ಗಂಟೆ ದುಡಿದ ಹಣವನ್ನು ಸಂಜೆ ಸರ್ಕಾರಕ್ಕೆ ಆದಾಯ ತರುವ ಮದ್ಯದಂಗಡಿಗೆ ಹಣವನ್ನು ಸುರಿದು ಕುಡಿದು ಸಂಜೆ ತೂರಾಡಿಕೊಂಡು ಮನೆಗೆ ಬಂದು ಹೆಂಡತಿ ಮಕ್ಕಳ ಮೇಲೆ ದೌರ್ಜನ್ಯ ದಬ್ಬಾಳಿಕೆ ಕೊಲೆ ಪ್ರಕರಣಗಳು ನಡೆಯುತ್ತಿದ್ದರೂ ಯಾವುದೇ ರಾಜಕೀಯ ಪಕ್ಷದವರು ಅಕ್ಕಿ ಕೊಡುತ್ತೇವೆ, ವಿದ್ಯುತ್ ಕೊಡುತ್ತೇವೆ, ೨ ಸಾವಿರ ಕೊಡುತ್ತೇವೆಂದು ಹೇಳುತ್ತಾರೆಯೇ ಹೊರತು ಬದಕನ್ನು ಕಸಿಯುತ್ತಿರುವ ಮದ್ಯ ನಿಷೇದ ಮಾಡುವ ದೈರ್ಯ ಏಕೆ ತೋರುತ್ತಿಲ್ಲ. ಪ್ರತಿ ಹೆಣ್ಣು ಹಳ್ಳಿಗಳಿಗೆ ಮತ ಕೇಳಲು ಬರುª ಆಭ್ಯರ್ಥಿಗಳಿಗೆ ಮದ್ಯ ನಿಷೇದ ಮಾಡಿ ನಮ್ಮ ಮತ ನಿಮಗೆ ಬಹಿರಂಗವಾಗಿ ನೀಡುತ್ತೇವೆಂದು ಗಟ್ಟಿ ದ್ವನಿಯಲ್ಲಿ ಕೇಳುವ ದೈರ್ಯ ಮಾಡಬೇಕೆಂದರು
ಮಹಿಳಾ ಮುಖಂಡರಾದ ಶೈಲಜ ಮಾತನಾಡಿ ಹಳ್ಳಿಗಳಿಗೆ ಬರುವ ಅಭ್ಯರ್ಥಿಗಳಿಗೆ ಕೆಲವು ನಾಯಕರು ಎಲ್ಲಾ ಮತಗಳು ನಮ್ಮ ಹಿಡಿತದಲ್ಲಿವೆ ಎಂದು ಅಪಪ್ರಚಾರ ಮಾಡಿಕೊಂಡು ಡೋಲು ಹಲಗೆ ಸಮೇತ ಹೂವಿನ ಅಭಿಷೇಕ ಮಾಡಿ ಮೇಲೆ ಎತ್ತಿಕೊಂಡು ಮೆರವಣಿಗೆ ಮಾಡುವ ನಾಯಕರೇ ಜೂನ್ ತಿಂಗಳಲ್ಲಿ ಪ್ರಾರಂಭವಾಗುವ ಶಾಲಾ ಮಕ್ಕಳ ಶುಲ್ಕ ಹಾಗೂ ವಯಸ್ಸಾದ ತಂದೆ ತಾಯಿಗಳ ಆರೋಗ್ಯಕ್ಕೆ ಖರ್ಚಾಗುವ ಹಣವನ್ನು ಯಾರು ಸ್ವಾಮಿ ಕೊಡುತ್ತೀರಾ ಈಗ ೫೦೦ ರೂ ಕೊಟ್ಟು ಹಳ್ಳಿಗಳಲ್ಲಿ ಮಹಿಳೆಯರನ್ನು ಯಾಮಾರಿಸುವುದು ಬಿಟ್ಟು ನಮ್ಮ ಮತಕ್ಕೂ ಬೆಲೆ ಇದೆ ಹಣಕ್ಕೆ ನಮ್ಮ ಮತ ಮಾರಾಟವಿಲ್ಲ ಎಂದು ದೈರ್ಯವಾಗಿ ಅಭ್ಯರ್ಥಿಗಳಿಗೆ ಸವಾಲು ಹಾಕಬೇಕೆಂದು ಮಹಿಳೆಯರಲ್ಲಿ ಆತ್ಮಸ್ಥೆರ್ಯ ತುಂಬಿದರು.
ಒoದು ಕಡೆ ಆಕ್ರಮ ಮದ್ಯ ಮಾರಾಟದಿಂದ ಮಾಂಗಲ್ಯ ಕಳೆದುಹೋಗುತ್ತಿದ್ದರೆ ಮತ್ತೊಂದು ಕಡೆ ಎಲ್ಲಾ ನಡೆಯುತ್ತಿರುವ ಜೂಜಾಟಕ್ಕೆ ಬದುಕಿ ಬಾಳಿ ದೇಶದ ಕುಟುಂಬ ಭವಿಷ್ಯ ರೂಪಿಸಬೇಕಾದ ಮನೆ ಮಕ್ಕಳು ಐ.ಪಿ.ಎಲ್ , ಇಸ್ಪೀಟ್ ದಂದೆಗೆ ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಯುವ ಪೀಳಿಗೆಯನ್ನು ಉಳಿಸುವ ತಾಕತ್ತು ಇರುವ ನಿಷ್ಠಾವಂತರಿಗೆ ಮತ ಚಲಾಯಿಸಿ ಸಂವಿದಾನದ ಆಶಯ ಪ್ರಜಾಪ್ರಭುತ್ವ ಉಳಿಸಬೇಕೆಂದು ಸಭೇಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಿದರು.
ಸಭೆಯಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಕೋಟೆ ಮಂಜುಳಾಮ್ಮ, ಚೌಡಮ್ಮ, ಪಾರುಕ್ಪಾಷ, ಬಂಗಾರಿ ಮಂಜು, ಸುನಿಲ್ ಕುಮಾರ್, ರಾಜೇಶ್, ಭಾಸ್ಕರ್, ವಿಜಯ್ಪಾಲ್, ನಾಗರತ್ನ, ಮುನಿರತ್ನ, ಮುಂತಾದವರಿದ್ದರು .