ನಾವೆಲ್ಲರೂ ಶಂಕರಾಚರ‍್ಯರ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು : ಕೆ.ಸತೀಶ್‌ಶಾಸ್ತಿ

ಅಧ್ವೆತ ಸಿದ್ದಾಂತವನ್ನು ಪ್ರತಿಪಾದಿಸಿದ ಶಂಕರಚರ‍್ಯರು ದೇಶವನ್ನೆಲ್ಲಾ ಮೂರು ಬಾರಿ ಸುತ್ತಿ, ಹಿಂದು ಪುನರುತ್ಥಾನಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಿಂದು ಧರ್ಮ ಪ್ರಚಾರದಲ್ಲಿ ತೊಡಗಿದರು ಎಂದು ಅರ್ಚಕ ಮತ್ತು ಪುರೋಹಿತರ ಸಂಘದ ತಾಲೂಕು ಅಧ್ಯಕ್ಷ ಕೆ.ಸತೀಶ್‌ಶಾಸ್ತಿ ಹೇಳಿದರು.
ಪಟ್ಟಣದ ಶಂಕರಮಠದಲ್ಲಿ ಮಂಗಳವಾರ ಶಂಕರ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಶಂಕರಜಯAತಿ ಅಂಗವಾಗಿ ಮೂಲ ಮೂರ್ತಿಗೆ ಅಭಿಷೇಕ, ಅಲಂಕಾರ, ಉತ್ಸವಮೂರ್ತಿಯು ರಥಬೀದಿಯಲ್ಲಿ ಮೆರವಣಿಗೆ ನಡೆಯಿತು. ನಂತರ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ,
ಇದರ ಹಿನ್ನೆಲೆಯಲ್ಲಿ ದೇಶದ್ಯಾಂತ ಚಾತುರಾಮ್ನಾಯ ಮಠ ಸ್ಥಾಪಿಸಿದರು. ವಿಶೇಷವಾಗಿ ರಾಜ್ಯದ ಶೃಂಗೇರಿ ಮಠವನ್ನು ಮುಖ್ಯಮಠವಾಗಿ ಸ್ಥಾಪಿಸಿರುವುದು ನಮ್ಮ ರಾಜ್ಯಕ್ಕೆ ಒಂದು ಹೆಮ್ಮೆಯ ವಿಚಾರವಾಗಿದ್ದು,ನಾವೆಲ್ಲರೂ ಶಂಕರಾಚರ‍್ಯರ ಸಂದೇಶಗಳನ್ನು ನಾವೆಲ್ಲರರೂ ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದರು.
ಸತ್ಸoಗದ ತಾಲೂಕು ನಿರ್ದೇಶಕಿ ಮಂಗಳ ಸತ್ಯಮೂರ್ತಿ ಮಾತನಾಡಿ ಆಖಂಡ ಭಾರತದಲ್ಲಿ ಹಿಂದೂ ಧರ್ಮ ಅವನತಿಯ ಹಾದಿ ಹಿಡಿದ ಸಂದರ್ಭದಲ್ಲಿ ಶ್ರೀ ಶಂಕರರು ತಮ್ಮ ತತ್ವ ಪ್ರತಿಪದಾನೆ ಮೂಲಕ ಧರ್ಮ ಸ್ಥಾಪನೆಯೊಂದಿಗೆ ರಾಷ್ಟದ ಏಕತೆಗೆ ತಳಹದಿ ಹಾಕಿಕೊಟ್ಟರು.
ಹಿಂದೂ ಧರ್ಮದಲ್ಲಿದ್ದ ಅನೇಕ ಮೌಡ್ಯಾಚರಣೆಯಿಂದ ಬೇಸತ್ತಿದ್ದ ಜನರು ,ಭಿನ್ನಮತಗಳಿಂದ ದೂರ ದೂರ ಆಗುತ್ತಿದ್ದ ಸಂದರ್ಭದಲ್ಲಿ ಶಂಕರರು ಸೈದ್ಧಾಂತಿಕ ವಾದಗಳು ,ತಾರ್ಕಿಕ ವಿಚಾರ ಮಂಡನೆಗಳಿoದ ಚಾರ್ವಾಕರನ್ನು ಆಸ್ತಿಕರಾಗುವಂತೆ ಆಕರ್ಷಿಸಿದರು. ವೇದೋಪನಿಷತ್ತುಗಳ ಭಾಷ್ಯಗಳ ಮೂಲಕ ಮತ್ತೊಮ್ಮೆ ಜನರಿಗೆ ನಮ್ಮ ಆಚಾರ ವಿಚಾರಗಳ ಬಗ್ಗೆ ಹೆಮ್ಮೆ ಮಾಡುವಂತೆ ಮಾಡಿದ ಮಹಾನ್ ದಾರ್ಶನಿಕರು ಶ್ರೀ ಶಂಕರರು . ಇಂತಹ ಮಹಾಪುರುಷರ ತತ್ವ ಸಿದ್ದಾಂತಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ನಂತರ ರಾಮಮಂದಿರದಲ್ಲಿ ಗಣಪತಿ, ದತ್ತಾತ್ರೇಯ ಹೋಮ, ದುರ್ಗಾ ಹೋಮ, ರುದ್ರಹೋಮ, ಗಾಯತ್ರಿ ಮೂಲ ಮಂತ್ರ ಹೋಮ, ಹಾಗೂ ಸೌಂದರ್ಯ ಲಹರಿ, ಶಿವಾನಂದ ಲಹರಿ, ಭಜನೆ ಕಾರ್ಯಕ್ರಮಗಳು ನಡೆಯಿತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಆಗಮಿಕರಾದ ಕುಮಾರಮಾಕಲಪಲ್ಲಿ ಪ್ರಕಾಶ್‌ಶರ್ಮ, ಸಂತೋಷಕುಮಾರ್‌ಶರ್ಮ, ಪ್ರಧಾನ ಅರ್ಚಕರಾದ ಸುಬ್ರಮಣ್ಯಶಾಸ್ತಿ, ನಾಗೇಶ್, ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಮಠದ ವ್ಯವಸ್ಥಾಪಕರಾದ ಶ್ರೀನಿವಾಸ್, ನಿರ್ದೇಶಕರಾದ ಕೃಷ್ಣ, ಜೆ.ಕೆ.ಮಂಜುನಾಥ್, ಸತೀಶ್ , ಸತ್ಸಂಗದ ತಾಲೂಕು ಅಧ್ಯಕ್ಷ ಸತ್ಯಮೂರ್ತಿ , ಸಮುದಾಯದ ಮುಖಂಡರಾದ ದಿನೇಶ್, ಮದ್ವೇಶ್, ಶ್ರೀನಿವಾಸಶಾಸ್ತೀ, ಹರೀಶ್, ಸುರ್ದಶನ, ಚಿಂತಾಮಣಿ ಅಶ್ವತನಾರಾಯಣಶಾಸ್ತಿ , ಮಂಜುನಾಥ್, ಶೇಷಗಿರಿ, ವಾಸುದೇವ್ ಇದ್ದರು.

Leave a Reply

Your email address will not be published. Required fields are marked *