ಜಿಲ್ಲೆ ರಾಜಕಾಣದಲ್ಲಿ ಆಸಕ್ತಿ ಇಲ್ಲ-ಪ್ರಚಾರದಲ್ಲೂ ಪಾಲ್ಗೊಳ್ಳಲ್ಲ-ಸುದರ್ಶನ್ಜವಾಬ್ದಾರಿಯುತ ಮತದಾರನಾಗಿ ಕಾಂಗ್ರೆಸ್‌ಗೆ ಮತ ನೀಡಲು ಮನವಿ ಮಾಡುವೆ

ಕೋಲಾರ:-ಕೋಲಾರ ಜಿಲ್ಲೆಯ ರಾಜಕಾರಣದಲ್ಲಿ ನನಗೆ ಆಸಕ್ತಿಯೂ ಇಲ್ಲ, ನಾನು ಇಲ್ಲಿ ಪ್ರಚಾರದಲ್ಲೂ ಪಾಲ್ಗೊಳ್ಳುವುದಿಲ್ಲ ಆದರೆ ಓರ್ವ ಜವಾಬ್ದಾರಿಯುತ ಮತದಾರನಾಗಿ ರಾಜ್ಯದ ಅಭಿವೃದ್ದಿಯ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡುತ್ತೇನೆ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿದ ಅವರು, ವೈಯಕ್ತಿಕ ಅಭಿಪ್ರಾಯ ಮತ್ತು ಹಿತಾಸಕ್ತಿಗಿಂತ ರಾಜ್ಯದ ಹಿತ ಮುಖ್ಯ ಆದ್ದರಿಂದ ಜನತೆಯನ್ನು ಕಾಂಗ್ರೆಸ್‌ಗೆ ಮತ ನೀಡುವಂತೆ ಮನವಿ ಮಾಡುತ್ತೇನೆ, ಪಕ್ಷ ರಾಜ್ಯದ ಬೇರೆ ಕಡೆ ಪ್ರಚಾರಕ್ಕೆ ಕರೆದರೆ ಹೋಗುವ ಕುರಿತು ಆಲೋಚನೆ ಮಾಡುತ್ತೇನೆ ಎಂದರು.
ಕೋಲಾರದಲ್ಲಿ ಏಕೆ ಪ್ರಚಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಹೇಳಲು ಸಕಾಲವಲ್ಲ, ಗೊಂದಲ ಸೃಷ್ಟಿಸಲು ನಾನು ಸಿದ್ದನಿಲ್ಲ, ಸಿದ್ದರಾಮಯ್ಯ ಕೋಲಾರಕ್ಕೆ ಬರುವುದಿಲ್ಲ ಎಂದರೆ ಸ್ಥಳೀಯರಿಗೆ ನೀಡಿ ಎಂದು ಮನವಿ ಮಾಡಿದ್ದೆ ಆದರೆ ಈಗ ಅದೆಲ್ಲಾ ಅಪ್ರಸ್ಥುತ ಎಂದ ಅವರು, ಪಕ್ಷ ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಿದೆ, ಅವರು ಹಿಂದೆ ಮುಳಬಾಗಿಲು ಶಾಸಕರೂ ಆಗಿದ್ದರು, ಅವರಿಗೆ ಮತ ನೀಡಿ ಎಂದು ಜನತೆಗೆ ಮನವಿ ಮಾಡುವೆ ಎಂದರು.
ಸಿದ್ದರಾಮಯ್ಯ ಬರುವುದಾಗಿ ಹೇಳಿದ ನಂತರ ಅನಿಲ್‌ಕುಮಾರ್, ನಸೀರ್‌ಅಹಮದ್ ನಾನು ಮತ್ತಿತರ ಮುಖಂಡರು, ನ ಗರಸಭಾ ಸದಸ್ಯರು ಕೋಲಾರ ನಗರ, ಗ್ರಾಮಾಂತರ ಪ್ರದೇಶದಲ್ಲಿ ಬೂತ್ ಕಮಿಟಿ ರಚಿಸಿ ಪಕ್ಷ ಗಟ್ಟಿಗೊಳಿಸುವ ಕೆಲಸ ಮಾಡಿದ್ದೆವು, ಹಲವು ಪಕ್ಷಗಳಿಂದ ಸೇರ್ಪಡೆ ಕಾರ್ಯಕ್ರಮವೂ ನಡೆದಿತ್ತು ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆಗೆ ಮೋದಿ ಮೇನಿಯಾ ನಡೆಯೋದಿಲ್ಲ, ಆದರೆ ಲೋಕಸಭಾ ಚುನಾವಣೆಗೆ ನಡೆಯುತ್ತದೆಯೋ ಏನೋ ಗೊತ್ತಿಲ್ಲ, ರಾಜ್ಯ,ಕೇಂದ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ವಿಫಲವಾಗಿದೆ, ಮಾಜಿ ಪ್ರಧಾನಿ ಚಂದ್ರಶೇಖರ್ ನಡೆಸಿದ ಪಾದಯಾತ್ರೆ ನಂತರ ಇದೀಗ ರಾಹುಲ್‌ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿದೆ ಎಂದ ಅವರು,ನೂರೆಂಟು ಅವಾಂತರಗಳ ಬಿಜೆಪಿ ಸರ್ಕಾರ ಬದಲಾವಣೆ ಜನ ಬಯಸಿದ್ದಾರೆ ಎಂದರು.
ಅರಸು,ಹೆಗಡೆ ನಂತರ ಯಾರೂ ಸತತ ಎರಡನೇ ಬಾರಿ ಮುಖ್ಯಮಂತ್ರಿಗಳಾಗುವ ಅವಕಾಶ ಸಿಗಲಿಲ್ಲ, ಹೆಗಡೆ ನಂತರ ಯಾವುದೇ ಸಿಎಂಗೂ ಜನರು ಆಶೀರ್ವಾದ ಮಾಡಿಲ್ಲ ಆದ್ದರಿಂದ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದರು.
ಕೋಲಾರ ಜನತೆಯ ಕ್ಷಮೆ ಕೋರುವೆ
ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ಇಲ್ಲಿನ ಅಭಿವೃದ್ದಿ ಸಾಧ್ಯ ಎಂದು ಜಿಲ್ಲೆಗೆ ಪ್ರತ್ಯೇಕ ಪ್ರಣಾಳಿಕೆ ತಯಾರಿಸಿದ್ದೆ, ಅವರನ್ನು ಆಹ್ವಾನಿಸಿ ಮೊದಲು ಪತ್ರ ಬರೆದಿದ್ದವನೇ ನಾನು, ಅವರ ರಾಜಕೀಯ ಅನುಭವ ಬಳಸಿ ಜಿಲ್ಲೆ ಅಭಿವೃದ್ದಿಗೆ ಸಾಕಾರ ನೀಡಬಹುದು ಎಂದು ಭಾವಿಸಿದ್ದೆ, ಜನರ ಆಶಯವೂ ಆದೇ ಆಗಿತ್ತು.
ಸಿದ್ದರಾಮಯ್ಯ ಬಂದಿದ್ದರೆ ೨೫ ಸಾವಿರ ಮತಗಳಿಂದ ಗೆಲ್ಲುತ್ತಿದ್ದರು. ಆದರೆ ಅವರು ಬಾರದೇ ಮತದಾರರಿಗೆ ನಿರಾಸೆಯಾಗಿದ್ದು, ನಾನು ಕೋಲಾರ ಕ್ಷೇತ್ರದ ಜನರ ಕ್ಷಮೆ ಕೋರುವೆ ಎಂದ ಅವರು, ಈ ರೀತಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮುಂದೆ ಮರುಕಳಿಸದಂತೆ ಪಕ್ಷ ಎಚ್ಚರವಹಿಸಬೇಕು ಮತ್ತು ಇಂತಹ ನಿಲುವು ತೆಗೆದುಕೊಳ್ಳುವಾಗ ನಾವೂ ಎಚ್ಚರಿಕೆ ವಹಿಸಬೇಕು ಎಂದರು.
ನಾನು ೨೦೧೩ ರ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದೆ, ನಂತರ ೨೦೧೮ರ ಚುನಾವಣೆಯಲ್ಲಿ ಕೋಲಾರ ಆಕಾಂಕ್ಷಿಯಾಗಿದ್ದೆ ಆದರೆ ಈ ಬಾರಿ ಸಿದ್ದರಾಮಯ್ಯ ಬರುವುದಾಗಿ ತಿಳಿಸಿದ ಮೇಲೆ ನಾನು ಆಕಾಂಕ್ಷಿ ಎಂದು ಹೇಳಲಿಲ್ಲ,ಸಿದ್ದತೆಯೂ ಮಾಡಿಕೊಳ್ಳಲಿಲ್ಲ, ಆದರೆ ನಾನು ಶಾಸನ ಸಭೆಗೆ ಬರಬೇಕು ಎಂಬುದು ನನ್ನ ಬೆಂಬಲಿಗರ ಮತ್ತು ಜನರ ಒತ್ತಾಯವಾಗಿತ್ತು ಎಂದರು.
ನಾನು ಜೆಪಿ ಆಂದೋಲದಿoದ ಬಂದವನು, ೧೯೭೬-೭೭ ರಲ್ಲಿ ರಾಜಕಾರಣಕ್ಕೆ ಬಂದೆ, ಜನತಾ ಪಕ್ಷದ ರಾಜ್ಯ ಯುವ ಅಧ್ಯಕ್ಷನಾಗಿ, ವಿಧಾನಪರಿಷತ್ ಸದಸ್ಯನಾಗಿ ಹೆಗಡೆ ನೆರಳಲ್ಲಿ ಬೆಳೆದವನು, ನಂತರ ಬಂಗಾರಪ್ಪನವರ ಸಹಕಾರದೊಂದಿಗೆ ಕಾಂಗ್ರೆಸ್‌ಗೆ ಬಂದೆ, ಇಲ್ಲೂ ಅನೇಕ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ, ರಾಜ್ಯ ನೀರಾವರಿ ಎಕ್ಸ್ಫರ್ಟ್ಸ್ ಕಮಿಟಿಯಲ್ಲಿ ಕೆಲಸ ಮಾಡಿದ್ದೇನೆ, ಸಾರ್ವಜನಿಕ ಜೀವನದಲ್ಲಿ ಅನೇಕ ಹುದ್ದೆಗಳಲ್ಲಿ ಕೆಲಸ ಮಾಡಿರುವೆ, ರಾಷ್ಟçಪತಿಗಳಾಗಿದ್ದ ಕಲಾಂ , ವಿವಿಧ ರಾಜ್ಯಪಾ¯ರುಗಳೊಂದಿಗೆ ಸಮಾಲೋಚನ ಸಭೆಯಲ್ಲಿ ಪಾಲ್ಗೊಂಡಿದ್ದೆ ಎಂದು ತಿಳಿಸಿದರು.
ನಾನು ಸಕ್ರಿಯ ರಾಜಕಾರಣದಿಂದ ದೂರವಾಗುವೆ ಎಂದು ಹೇಳಿದ್ದರೂ ನಾನು ನಿವೃತ್ತಿ ಘೋಷಣೆ ಎಂಬ ಸುದ್ದಿ ತಪ್ಪಾಗಿ ಹೊರ ಬಂದ ಹಿನ್ನಲೆಯಲ್ಲಿ ಸುರ್ಜೇವಾಲ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್,ಅನಿಲ್‌ಕುಮಾರ್ ಮತ್ತಿತರರು ದೂರವಾಣಿಯಲ್ಲಿ ಮಾತನಾಡಿ,ರಾಜಕಾರಣದಲ್ಲಿ ಸಕ್ರಿಯವಾಗಿರಿ, ಪಕ್ಷದ ಅಭಿವೃದ್ದಿಗೆ ನಿಮ್ಮ ಅನುಭವ ಹಂಚಿ ಎಂದು ಸಲಹೆ ನೀಡಿದ್ದು, ನಾನು ಚುನಾವಣಾ ರಾಜಕಾರಣದಿಂದ ದೂರವಿದ್ದು, ಜನಪರ ಹೋರಾಟ,ಅಭಿವೃದ್ದಿಪರ ಚಟುವಟಿಕೆಗಳಲ್ಲಿ, ಸಾರ್ವಜನಿಕ ಮಹತ್ವವಿರುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿರುವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಎಂಟಿಬಿ ಶ್ರೀನಿವಾಸ್, ಅಲ್ತಾಫ್, ಪ್ರವೀಣ್, ವಕೀಲ ವೆಂಕಟೇಶಗೌಡ,ವಿ.ಮುನಿವೆoಕಟೇಶಪ್ಪ ಈಡಿಗರ ರವಿಚಂದ್ರ, ಶಶಿಕುಮಾರ್, ನಾಗೇಶ್, ಆರಿಫ್‌ಉಲ್ಲಾಖಾನ್, ನಿವೃತ್ತ ಬ್ಯಾಂಕ್ ಮ್ಯಾನೇಜರ್ ರಾಧಾಕೃಷ್ಣ, ಸಿಂಗಹಳ್ಳಿ ಕೃಷ್ಣಪ್ಪ, ಕುರುಬರಪೇಟೆ ನಾರಾಯಣಸ್ವಾಮಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *