ಕೋಲಾರ, ಕೋಲಾರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ೬ ವಿಧಾನಸಭಾ ಕ್ಚೇತ್ರಗಳಾದ ಕೋಲಾರ, ಮಾಲೂರು, ಶ್ರೀನಿವಾಸಪುರ, ಕೆ.ಜಿ.ಎಫ್, ಬಂಗಾರಪೇಟೆ ಮತ್ತು ಮುಳಬಾಗಿಲು ಕ್ಷೇತ್ರಗಳಲ್ಲಿ ೧೦ನೇ ಮೇ೨೦೨೩ ರಂದು ನಡೆಯಿಲಿರುವ ಮತದಾನ ಹಾಗೂ ಮೇ ೧೩ ರಂದು ನಡೆಯಲಿರುವ ಮತ ಎಣಿಕೆಯ ಪ್ರಯುಕ್ತ ಚುನಾವಣೆಯನ್ನು ಶಾಂತ, ನ್ಯಾಯಯುತ ಮತ್ತು ಮುಕ್ತವಾಗಿ ನಡೆಸಲು ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮತದಾನದ ೪೮ ಗಂಟೆಗಳ ಮೊದಲು ೮ ನೇ ಮೇ ೨೦೨೩ರ ಸಂಜೆ ೦೬ ರಿಂದ ೧೦ ನೇ ಮೇ ೨೦೨೩ ರ ಮಧ್ಯರಾತ್ರಿಯವರೆಗೆ ಹಾಗೂ ಮತ ಎಣಿಕೆ ಪ್ರಯುಕ್ತ ೧೩ ನೇ ಮೇ ೨೦೨೩ ರಂದು ಬೆಳಗ್ಗೆ ೦೬ ರಿಂದ ಮಧ್ಯರಾತ್ರಿವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಟ ಹಾಗೂ ಸಾಗಾಣಿಕೆಯನ್ನು ನಿರ್ಬಂಧಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಶ್ರೀ ವೆಂಕಟ್ ರಾಜಾ ರವರು ಆದೇಶಿಸಿ ಅಧಿಸೂಚನೆ ಹೊರಡಿಸಿರುತ್ತಾರೆ.