ಕೋಲಾರ, ಕೋಲಾರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ದಿನವಾದ ಸೋಮವಾರ ೨೧ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು ೩೬ ನಾಮಪತ್ರಗಳು ಸಲ್ಲಿಕೆಯಾಗಿವೆ.
ಜಿಲ್ಲೆಯ ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಜುನಾಥ್ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಶೀಗೇಹಳ್ಳಿ ಸುಂದರ್‌ರವರು ನಾಮಪತ್ರ ಸಲ್ಲಿಸಿದ್ದಾರೆ.
ಶ್ರೀನಿವಾಸಪುರ ವಿಧಾನಸಭಾ ಮತಕ್ಷೇತ್ರದಿಂದ ಇಂದು ಆಮಾದ್ಮಿ ಪಕ್ಷದಿಂದ ಡಾ. ವೈ ವಿ ವೆಂಕಟಾಚಲ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಕೋಲಾರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ವರ್ತೂರು ಪ್ರಕಾಶ್, ಹಾಗೂ ಜೆಡಿಎಸ್ ಅಭ್ಯರ್ಥೀ ಸಿ ಎಂ ಆರ್ ಶ್ರೀನಾಥ್ ಅವರು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ್ದಾರೆ.
ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್‌ಎನ್ ನಾರಾಯಣಸ್ವಾಮಿ ಕೆ ಎನ್ ಜೆಡಿಎಸ್ ಅಭ್ಯರ್ಥಿಯಾಗಿ ಎಂ ಮಲ್ಲೇಶಬಾಬು ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಎಂ ನಾರಾಯಣಸ್ವಾಮಿ ರವರು ನಾಮಪತ್ರ ಸಲ್ಲಿಸಿದ್ದಾರೆ.
ಮಾಲೂರು ವಿಧಾನಸಭಾ ಕ್ಷೇತ್ರದಿಂದ ಜೆ ಡಿ ಎಸ್ ಅಭ್ಯರ್ಥಿಯಾಗಿ ರಶ್ಮಿ ಎಸ್, ಜೆ ಡಿ ಎಸ್ ಅಭ್ಯರ್ಥಿಯಾಗಿ ಜಿ ಈ ರಾಮೇಗೌಡ ಮತ್ತೊಮ್ಮೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ ವೈ ನಂಜೇಗೌಡ, ಬಿಜೆಪಿ ಅಭ್ಯರ್ಥಿಯಾಗಿ ಕೆ ಎಸ್ ಮಂಜುನಾಥಗೌಡ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ನಾರಾಯಣಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಸಿಪಿಐ(ಎಂ) ಅಭ್ಯರ್ಥಿಯಾಗಿ ತಂಗರಾಜ್.ಪಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ರೂಪಕಲಾ ಎಂ ಮತ್ತೊಮ್ಮೆ, ಸಿ ಪಿ ಐ ಅಭ್ಯರ್ಥಿಯಾಗಿ ಜೋತಿಬಾಷ್, ಬಿಜೆಪಿ ಅಭ್ಯರ್ಥಿಯಾಗಿ ಅಶ್ವಿನಿ ಎಸ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ವೆಂಕಟೇಶಲು ಎಂ ನಾಮಪತ್ರ ಸಲ್ಲಿಸಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ಇಂದು ಬಂಗಾರಪೇಟೆಯಲ್ಲಿ ೧೦, ಶ್ರೀನಿವಾಸಪುರದಲ್ಲಿ ೪, ಮಾಲೂರಿನಲ್ಲಿ ೧೦, ಮುಳಬಾಗಿಲಿನಲ್ಲಿ ೧, ಕೆಜಿಎಫ್ ನಲ್ಲಿ ೬ ಹಾಗೂ ಕೋಲಾರದಲ್ಲಿ ೫ ಉಮೇದುವಾರಿಕೆಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಸಲು ಏಪ್ರಿಲ್ ೨೦ ಕೊನೆ ದಿನವಾಗಿದೆ. ಏಪ್ರಿಲ್ ೨೧ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ ೨೪ ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಮೇ ೧೦ ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿರುತ್ತಾರೆ.