ಅಂಬೇಡ್ಕರ್ ರವರ ಆದರ್ಶಗಳನ್ನು ಅರಿತುಕೊಳ್ಳಬೇಕು : ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್

ಶ್ರೀನಿವಾಸಪುರ, ಅಂಬೇಡ್ಕರ್ ರವರ ಆದರ್ಶಗಳನ್ನು ಯುವ ಪೀಳಿಗೆ ಕಾಲಕಾಲಕ್ಕೆ ಅರಿತುಕೊಳ್ಳಬೇಕು ಎಂದು ಜಿ.ಪಂ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಯುವಕರಿಗೆ ಸಲಹೆ ನೀಡಿದರು.
ಪಟ್ಟಣದ ದಯಾನಂದ ರಸ್ತೆಯಲ್ಲಿ ಶುಕ್ರವಾರ ಸಂಜೆ ದಯಾನಂದ ಯುವಕ ಬಳಗದ ವತಿಯಿಂದ ೧೩೨ ನೇ ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು . ಅಂಬೇಡ್ಕರ್ ರವರು ಕೇಲವ ನಮ್ಮ ಸಮುದಾಯಕ್ಕೆ ಸೀಮಿತವಲ್ಲ ಎಲ್ಲಾ ಸಮುದಾಯಗಳ ಏಳಿಗಾಗಿ ಶ್ರಮಿಸಿದವರು. ಅವರ ತತ್ವ , ಆದರ್ಶಗಳನ್ನು ಎಲ್ಲರೂ ಮೈಗೋಡಿಸಿಕೊಳ್ಳಬೇಕು . ಮುಂದಿನ ದಿನಗಳಲ್ಲಿ ಜಗಜೀವನಪಾಳ್ಯ, ಅಂಬೇಡ್ಕರ್ ಪಾಳ್ಯದಲ್ಲಿ ಅಂಬೇಡ್ಕರ್‌ರವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಲಾಗುವುದು ಎಂದರು.
ಭೀಮ ಸೇನೆ ರಾಜ್ಯಾಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ ಮಾತನಾಡಿ ವಿಶೇಷವಾಗಿ ಮಹಿಳೆಯರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಿ , ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸ ಬೇಕು.
ಮಕ್ಕಳು ಮನೆಗಳಲ್ಲಿ ಟಿವಿ.ಮೊಬೈಲ್‌ನೋಡು ಚಟಗಳನ್ನು ಬಿಟ್ಟು , ಪುಸ್ತಕಗಳನ್ನು ಓದುವ ಹವ್ಯಾಸ ಬೇಳಸಿಕೊಳ್ಳಬೇಕು. ಅಂಬೇಡ್ಕರ್‌ರವರು ಪುಸ್ತಕ ಪ್ರೇಮಿಗಳು ಆಗಿದ್ದರು. ಈ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳಸಬೇಕು. ಸಂವಿಧಾನವನ್ನು ಪ್ರತಿಯೊಬ್ಬರು ಓದ ಬೇಕು ಅದರಲ್ಲಿನ ಮತದಾನ ಮಹತ್ವವನ್ನು ಅರಿಯಬೇಕು .
ದಯಾನಂದ ರಸ್ತೆಯ ಮನೆಗಳಿಗೆ ಮಾಲಾಶ್ರೀ ೩೫೦ ಅಂಬೇಡ್ಕರ್‌ರವರ ಭಾವ ಚಿತ್ರಗಳನ್ನು ಉಚಿತವಾಗಿ ವಿತರಿಸಿದರು. ಪುರಸಭೆ ಸದಸ್ಯೆ ನೀಲಾವತಿ ಶ್ರೀನಿವಾಸ್ ಭೀಮ ಸೇನೆ ರಾಜ್ಯ ಉಪಾಧ್ಯಕ್ಷ ವಿನೋಧ, ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಟಿ.ವಿ.ವಿಜಯಕುಮಾರ್, ಮುಖಂಡರಾದ ಆಂಜಪ್ಪ, ಎಂ.ಮೋಹನ್, ಎಸ್.ಹರ್ಷ,.ವಿ.ಆಜಂಪ್ಪ, ಬಾಲಕೃಷ್ಣ, ಶ್ರೀನಿವಾಸ್, ಸುಬ್ರಮಣಿ, ಪುನೀತ್‌ಕುಮಾರ್, ಬಂಡೆ ಎಂ. ಮಂಜುನಾಥ್ ಇದ್ದರು .

Leave a Reply

Your email address will not be published. Required fields are marked *