ಶ್ರೀನಿವಾಸಪುರ, ಅಡ್ಡಗಲ್ ಗ್ರಾಮದ ಶಾಸಕ ಕೆ.ಆರ್.ರಮೇಶ್ಕುಮಾರ್ರವರ ನಿವಾಸಕ್ಕೆ ಶನಿವಾರ ಜೈ ಭಾರತ್ ಕಾರ್ಯಕ್ರಮದ ಕುರಿತು ಚರ್ಚೆ ಮಾಡಲು ಬಂದಿರುವೆ ತಿಳಿಸುತ್ತಾ, ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸರ್ಜೆವಾಲಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದೇಶದಲ್ಲಿ ಭ್ರಷ್ಟಾಚಾರವು ತಾಂಡವಾಡುತ್ತಿದೆ. ದೇಶದ ಹಣವನ್ನು ಲೂಟಿ ಮಾಡಿರುವವರು ಬಹುತೇಕರು ಗುಜರಾತ್ ರಾಜ್ಯದವರೇ ಜಿತಿನ್ ಮೆಹ್ತಾ, ಸಂದೇಶರಾಜ್ , ನೀರವ್ಮೋದಿ, ನಿಶ್ಚಲ್ ಮೋದಿ, ಅಮಿಲ್ ಮೋದಿ, ರಿಶಿಅಗರವಾಲ್ ಇವರೆಲ್ಲರೂ ಗುಜರಾತ್ ರಾಜ್ಯದವರೇ, ಹಾಗೂ ಲಲಿತ್ ಮೋದಿ ರಾಜಸ್ಥಾನದವರು.
ಇವರೆಲ್ಲರೂ ದೇಶದಲ್ಲಿನ ಬ್ಯಾಂಕ್ ಮತ್ತು ಜನರ ಹಣವನ್ನು ಹಣವನ್ನು ಲೂಟಿ ಮಾಡಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಸರಿ ಸಮಾರು ೫ಲಕ್ಷ ಕೋಟಿ ಹಣವನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ.
ದೇಶದ ಹಣವನ್ನು ಲೂಟಿ ಮಾಡಿರುವವರು ಬಹುತೇಕರು ಗುಜರಾತ್ ರಾಜ್ಯದವರೇ, ಸಂದೇಶರಾಜ್ , ನೀರವ್ಮೋದಿ, ನಿಶ್ಚಲ್ ಮೋದಿ, ಅಮಿಲ್ ಮೋದಿ, ರಿಶಿಅಗರವಾಲ್ ಇವರೆಲ್ಲರೂ ಗುಜರಾತ್ ರಾಜ್ಯದವರೇ. ಲಲಿತ್ ಮೋದಿ ರಾಜಸ್ಥಾನದವರು.
ಬಡವರು ಹಾಗೂ ರೈತರು ಬ್ಯಾಂಕ್ನಲ್ಲಿ ಕೂಡಿಟ್ಟ ಹಣವನ್ನೆಲ್ಲಾ ಭ್ರಷ್ಟರು ಬ್ಯಾಂಕ್ಗಳಲ್ಲಿನ ಹಣವನ್ನು ಲೂಟಿ ಮಾಡಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಬ್ಯಾಂಕ್ನಲ್ಲಿನ ಹಣವನ್ನು ಲೂಟಿ ಮಾಡಿದ್ದು, ಆ ಹಣ ಯಾವ ರೀತಿ ಬರಲು ಸಾಧ್ಯ. ಬ್ಯಾಂಕ್ ಹಣವನ್ನು ಲೂಟಿ ಮಾಡಿರುವವರು ಕಳ್ಳರಲ್ಲದೇ ಮತ್ತೆ ಇನ್ನೇನು ಎಂದು ಪ್ರಶ್ನಿಸಿದರು. ?
ರಾಹುಲ್ಗಾಂದಿ ರವರು ಜನರ ದುಡ್ಡನ್ನು ಮಾಡಿದವರನ್ನ ಮೋದಿ ರವರು ಯಾವ ರೀತಿಯಲ್ಲಿ ಹಣವನ್ನು ದೇಶಕ್ಕೆ ತರುತ್ತಾರೆ ಎಂದು ಪ್ರಶ್ನಿಸಿರುವುದು ಅಪರಾದವೇ?
ಮೋದಿಜಿವರು ನಾನು ಹಣವನ್ನು ಅಕ್ರಮ ಹಣ ತಿನ್ನುವುದಿಲ್ಲ, ಬೇರೆಯವರನ್ನು ತಿನ್ನಲು ಬಿಡುವುದಿಲ್ಲ. ಹೇಳಿದ ವಾಕ್ಯಕ್ಕೆ ವ್ಯತಿರಕ್ತವಾಗಿ ನಡೆದುಕೊಳ್ಳತ್ತಿದ್ದಾರೆ.
ಬಿಜೆಪಿಯ ಹಾಗೆ ಒಡೆದ ಮನೆ ಕಾಂಗ್ರೆಸ್ ಅಲ್ಲ. ಬಿಎಸ್ವೈ , ಈಶ್ವರಪ್ಪ ಮೂಲೆಗುಂಪು ಮಾಡಿದ್ದಾರೆ. ಬಿಜೆಪಿ ಪಕ್ಷವು ಭ್ರಷ್ಟ ಪಕ್ಷವಾಗಿದೆ ಮಾಜಿ ಡಿಸಿಎಂ ಲಕ್ಷö್ಮಣ ಸವಧಿ ರವರು ಬಿಜೆಪಿ ಪಕ್ಷ ಬಿಟ್ಟು ನಿನ್ನೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
೭೦ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಬರುತಿದ್ದಾರೆ. ಬಿಜೆಪಿ ಮುಳಗುತ್ತಿದೆ.ಕಾಂಗ್ರೆಸ್ ಪಕ್ಷ ಬಲಿಷ್ಟವಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ. ರಮೇಶ್ಕುಮಾರ್ ರವರು ಕೋಪ ( ಮುನಿಸಿಕೊಂಡಿಲ್ಲ) ಮಾಡಿಕೊಂಡಿಲ್ಲ. ಅವರು ನಮ್ಮ ತಂದೆಯ ಸ್ಥಾನದಲ್ಲಿ ನೋಡುತ್ತಿರುವೆ. ಅವರಿಂದ ಕಲಿಯುವುದು ಸಾಕಷ್ಟಿದೆ. ಅವರು ಕೆಲ ವಿಷಯಗಳ ಬಗ್ಗೆ ನಮ್ಮ ಬಗ್ಗೆ ಕೋಪ ಮಾಡಿಕೊಳ್ಳುತ್ತಾರೆ. ಆದ್ರೆ ನಮ್ಮ ಮನೆ ಹೊಡೆಯುವ ಕೆಲಸ ಮಾಡಿಲ್ಲ.
ಸಿದ್ದು ಸ್ಪರ್ಧೆ ವಿಚಾರವಾಗಿ ಮಾತನಾಡಿ ಈ ವಿಚಾರವಾಗಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ನಾಳೆಯ ಪಟ್ಟಿ ಬಿಡುಗಡೆ ಆಗಬಹುದು ಇದರ ಬಗ್ಗೆ ಮಾತನಾಡಲು ಆಗುವುದಿಲ್ಲ. ಉತ್ತಮ ಸಮಾಜ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಸಿ ಎಂದರು.
ಈ ಸಮಯದಲ್ಲಿ ಶಾಸಕ ಕೆ.ಆರ್.ರಮೇಶ್ಕುಮಾರ್, ಶಾಸಕ ಬೈರತಿ ಸುರೇಶ್ ತಾಲೂಕಿನ ಹಲವು ಮುಖಂಡರು ಇದ್ದರು.