ತಿರುಪತಿ ಧರ್ಮಸ್ಥಳ ನಂಜನಗೂಡು ಪ್ರಮಾಣಕ್ಕೆ ನಾನು ರೆಡಿ ಜಿ ಕೆ ವಿ ರೆಡ್ಡಿಗೆ ಸ್ವಾಮಿ ಆಹ್ವಾನ, ನಿನ್ನ ಅಡ್ರೆಸ್ ಎಲ್ಲಿ ನೀನು ಇರೋದು ಎಲ್ಲಿ ಆಹಾ ನಿನ್ನ ಅಭಿವೃದ್ಧಿ ಏನಪ್ಪಾ ಜಿಕೆ ವೆಂಕಟಶಿವಾರೆಡ್ಡಿ ಮಿಸ್ಟರ್ ರಮೇಶ್ ಕುಮಾರ್ ಅಂದ್ರೆ ನನ್ನ ಮೊಮ್ಮಕ್ಕಳು ಬಿಚ್ಚಿ ಬೀಳ್ತಾರೆ

ಗುಡಿಸಿ ವಾರಪಲ್ಲಿ ಅಡ್ರೆಸ್ ಐದು ವರ್ಷಕ್ಕೊಮ್ಮೆ ಬೇಟಿ ನೀನು ಇರುವುದು ಬೆಂಗಳೂರಿನಲ್ಲಿ ಆದರೆ ಕೇವಲ ಮತ ಕೇಳಲು ಮಾತ್ರ ನಿನಗೆ ಅಡ್ರೆಸ್ ಬೇಕೆ? ಜನರ ಕಷ್ಟ ಸುಖಗಳಿಗೆ ಪಾಲುದಾರನಾಗಲು ನೀನು ಎಲ್ಲಿ ಸಿಗುತ್ತೀಯಪ್ಪ ನಿನಗೆ ಮತದಾರರು ಹೇಗೆ ಮತ ನೀಡಬೇಕು ಎಂದು ಶಾಸಕ ಕೆಆರ್ ರಮೇಶ್ ಕುಮಾರ್ ರವರು ಮಾಜಿ ಶಾಸಕ ಹಾಗೂ ಹಾಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಜಿ ಕೆ ವೆಂಕಟಶಿವಾರೆಡ್ಡಿ ರವರ ಬಗ್ಗೆ ವ್ಯಂಗ್ಯ ಮಾಡಿದರು.
ನಾನು ನನ್ನ ಮನೆಯಲ್ಲಿ ಬೇಕಾದಷ್ಟು ಹಣ ಸಂಪಾದನೆ ಮಾಡಿ ಮಡಗಿದ್ದೇನೆ ಬೇಕಾದರೆ ನೀವು ಬಂದು ನನ್ನ ಮನೆಯಲ್ಲಿ ತೆಗೆದುಕೊಂಡು ಹೋಗಬಹುದು ನಾನು ಸದಾ ಬಾಗಿಲನ್ನು ತೆಗೆದು ಇರುತ್ತೇನೆ ನನ್ನ ಮನೆಯಲ್ಲಿ ಕೇವಲ ಎರಡು ಟವಲ್ ಎರಡು ಕರ್ಚಿಫು ಮುರಿದಿರುವ ಕುರ್ಚಿಗಳು ಮಾತ್ರ ಸಿಗುತ್ತದೆ ವಿನಹ ಇನ್ನೇನು ಊಹಿಸಲು ಸಾಧ್ಯ ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಟಾಂಗ್ ನೀಡಿದರು
ನಾನು ಬೆಳಗಾದರೆ ನನ್ನ ಸ್ವಂತ ಗ್ರಾಮದಲ್ಲಿ ನನ್ನ ಅಜ್ಜ ಅಜ್ಜಿ ಹಾಗೂ ನಮ್ಮ ತಂದೆ ತಾಯಿ ಮತ್ತು ನಾನು ಇರುವುದು ಸಹ ಅಡ್ಗಲ್ ನಲ್ಲಿ ನನ್ನ ಎಲ್ಲ ಸಂಪೂರ್ಣ ದಾಖಲೆಗಳು ಅಡ್ಗಲ್ ನಲ್ಲಿಯೇ ಇರುತ್ತದೆ ನಾನು ಸದಾ ಜನ ಸೇವಕನಾಗಿ ಜನರಿಗೆ ಸಿಗಲು ನಮ್ಮ ಗ್ರಾಮದಲ್ಲಿ ಇರುತ್ತೇನೆ ವಿನಹ ಬೇರೆ ಕಡೆ ಇರುವುದಿಲ್ಲ.
ನಾನು ನನ್ನ ಮತದಾರರಿಗೆ ಮತ್ತು ನನ್ನ ಕ್ಷೇತ್ರದ ಸದಾ ಕಾಲ ಹತ್ತಿರವಿರಲು ನನ್ನ ಸ್ವಗ್ರಾಮದಲ್ಲಿ ಇರುತ್ತೇನೆ ಆದರೆ ಬೇರೆ ಕಡೆ ಹೋಗಲ್ಲ
ಜಿ ಕೆ ವೆಂಕಟಶಿವಾರೆಡ್ಡಿರವರೇ ನೀವು ಬನ್ನಿ ನಾನು ಬರುತ್ತೇನೆ ತಿರುಪತಿ ಧರ್ಮಸ್ಥಳ ನಂಜನಗೂಡು ನೀನು ಎಲ್ಲಿಗಾದರೂ ಕರೆ ಅಲ್ಲಿಗೆ ನಾನು ಬರುವೆ, ಇಬ್ಬರು ಎದೆಯ ಮೇಲೆ ಕೈ ಹಾಕಿಕೊಂಡು ಆತ್ಮಸಾಕ್ಷಿಯಾಗಿ ನಮಗೆ ಮತ ಹಾಕಿದ ಜನರಿಗೆ ಸಹಕಾರ ನೀಡಿದ್ದೇವೆ ಮತ್ತು ಅವರ ಪರ ಧ್ವನಿಯೆತ್ತಿದ್ದೇವೆ ಎಂದು ಪ್ರಮಾಣ ಮಾಡೋಣ ಎಂದು ಆಹ್ವಾನ ನೀಡಿದರು.
ಶ್ರೀನಿವಾಸಪುರ ಪಟ್ಟಣದಲ್ಲಿ ಕೆ ಸಿ ವ್ಯಾಲಿ ನೀರನ್ನು ಹರಿಯಲು ರಸ್ತೆಗಳನ್ನು ಹಗೆಯಬೇಕಾಗಿದೆ ಆದರೆ ಹಗೆದಾಗ ಧೂಳು ಬರುವುದು ಸಹಜ ಆದರೆ ಪುರಸಭೆಯಿಂದ ನೀರನ್ನು ಹಾಯಿಸಲು ನಾನು ಸಲಹೆಯನ್ನು ನೀಡಿದ್ದೇನೆ ಅದರಂತೆ ಮುಖ್ಯ ಅಧಿಕಾರಿ ನೀರನ್ನು ಹಾಯ್ಸುತಿದ್ದಾರೆ
ನಾನು ಸದಾ ಜನಪರವಾಗಿ ಧ್ವನಿ ಎತ್ತಿ ಜನರ ಸೇವಕನಾಗಿ ನಿರಂತರ ಪ್ರಜೆಗಳಿಗೆ ದ್ರೋಹ ಮಾಡದೆ ನನ್ನ ಕರ್ತವ್ಯ ಮಾಡುತ್ತಿದ್ದೇನೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *