ಶ್ರೀನಿವಾಸಪುರ ತಾಲೂಕಿನ ಹ ರಳಕುಂಟೆ ಗ್ರಾಮದಲ್ಲಿ ಗ್ರಾಮದ ಆಸುಪಾಸಿನಲ್ಲಿ ಕಷ್ಟಪಟ್ಟು ಸುಂದರವಾದ ಮನೆಯನ್ನು ನಿರ್ಮಾಣ ಮಾಡಿ ಬೆಂಗಳೂರಿಗೆ ಕೆಲಸದ ನಿಮಿತ್ತ ಹೋಗಿದ್ದರು ಇದನ್ನೇ ಅವಕಾಶವಾಗಿಸಿಕೊಂಡು ಪಕ್ಕದ ಜಮೀನಿಲ್ಲಿ ಇರುವ ಬಂಡೆಯನ್ನು ಜಿಲೆಟಿನ್ ಹಾಗೂ ಸಿಡಿಮದ್ದುಗಳಿಂದ ಸ್ಪೋಟಿಸಿದ ಕಾರಣ ಸುಂದರವಾದ ಮನೆ ಈಗ ಬಿರುಕುಗಳು ಬಿಟ್ಟು ಆತಂಕದಲ್ಲಿ ಮಾಲೀಕರು ಪರಿತಪಿಸುವಂತಾಗಿದೆ
ಶ್ರೀನಿವಾಸಪುರ ಪಟ್ಟಣದಿಂದ ಕೇವಲ ಹದಿನೈದು ಕಿಲೋಮೀಟರ್ ದೂರದಲ್ಲಿರುವ ಹರಳಕುಂಟೆ ಗ್ರಾಮದಲ್ಲಿ ಗೋಪಾಲಕೃಷ್ಣ ಕುಟುಂಬದವರು ಮನೆಯನ್ನು ನಿರ್ಮಾಣ ಮಾಡಿ ಕೇವಲ ೪-೫ ವರ್ಷ ಗಳಾಗಿದೆ ಆದರೆ ಮನೆಯ ಪಕ್ಕದಲ್ಲಿ ಸುಮಾರು ೨೦ರಿಂದ ೩೦ ಅಡಿಗಳ ಅಂತರದಲ್ಲಿ ಪಕ್ಕದ ಜಮೀನಿನ ವ್ಯಕ್ತಿ ಸಿಪಿ ವೆಂಕಟರಮಣಪ್ಪ ಚನ್ನಪಲ್ಲಿ ಗ್ರಾಮದ ವ್ಯಕ್ತಿಯಾಗಿದ್ದು ಈ ವ್ಯಕ್ತಿಯು ಕಳೆದ ಜುಲೈ ತಿಂಗಳಿನಲ್ಲಿ ಸ್ಪೋಟಿಸಿ ಆ ಘಟನೆಯಿಂದ ಗೋಡೆ ಬಿರುಕುಗಳು ಬಿಟ್ಟು ಕಿಟಕಿ ಗಾಜುಗಳು ಸಹ ಪುಡಿಪುಡಿಯಾಗಿದ್ದವು ಈ ಘಟನೆ ನಡೆದ ನಂತರ ಗ್ರಾಮದಲ್ಲಿ ರಾಜಿ ಪಂಚಾಯತಿ ಮಾಡಿ ಅಲ್ಪ ಸ್ವಲ್ಪ ಸರಿಪಡಿಸಿ ಗಾಜುಗಳನ್ನು ಹಾಕಿಸಿಕೊಟ್ಟಿದ್ದರು
ಆಗಲೇ ಮನೆ ಮಾಲೀಕರು ಈ ರೀತಿಯ ಘಟನೆಯ ಮರುಕಳಿಸದಂತೆ ಹಾಗೂ ಮನೆಯ ಬಳಿ ಮತ್ತೊಮ್ಮೆ ಬಂಡೆಗಳನ್ನು ಸ್ಪೋಟಿಸಬಾರದು ಎಂದು ಪಂಚಾಯತಿದಾರರ ಮುಖಾಂತರ ತಿಳಿ ಹೇಳಿದ್ದರು
ಆದರೆ ಈ ಸಿಪಿ ವೆಂಕಟರಮಣಪ್ಪ ಎಂಬುವರು ಇದೇ ತಿಂಗಳ ೨೨ ನೇ ತಾರೀಕಿನಂದು ರಾತ್ರಿ ಸುಮಾರು ಆರು ಗಂಟೆಯಿಂದ ಏಳು ಗಂಟೆ ಸಮಯದಲ್ಲಿ ಮನೆಯ ಬಳಿ ಇರುವ ಕಲ್ಲು ಬಂಡೆಯನ್ನು ಜಿಲೆಟಿನ್ ಹಾಗೂ ಮುದ್ದು ಬಳಸಿ ಸ್ಪೋಟಿಸಿದ್ದಾರೆ ಈ ಸ್ಫೋಟಕ್ಕೆ ಸುಮಾರು ಗ್ರಾಮದ ಎಲ್ಲಾ ಮನೆಗಳು ಶಬ್ದಗಳಿಂದ ಜನರು ಭಯಬೀತರಾಗಿ ಆಚೆ ಬಂದಿರುವ ಘಟನೆಯು ಸಹ ನಡೆದಿದೆ
ಸಂಜೆ ಸಮಯ ಆರರಿಂದ ಏಳು ಗಂಟೆ ಸಮಯದಲ್ಲಿ ಉದ್ದೇಶಪೊರ್ವಕವಾಗಿ ಅದೇ ಜಾಗದಲ್ಲಿ ಜಿಲೆಟಿನ್ ಕಡ್ಡಿಗಳು ಹಾಗೂ ಸಿಡಿಮದ್ದುಗಳನ್ನು ಬಳಸಿ ನಮ್ಮ ಮನೆಯ ಸರಿ ಹದ್ದಿನಲ್ಲಿ ಬಂಡೆ ಕಲ್ಲುಗಳನ್ನು ಸ್ಪೋಟಿಸಿರುವ ಕಾರಣ ಮನೆಗಳ ಗೋಡೆಗಳು ಹಾಗೂ ಕಾಂಪೌಂಡ್ ಗಳು ಯಥೇಚ್ಛವಾಗಿ ಬಿರುಕುಗಳು ಬಿಟ್ಟಿವೆ ಹಾಗೂ ಮನೆಯ ಎಲ್ಲಾ ಕಿಟಕಿಗಳು ಗಾಜುಗಳು ಹೊಡೆದು ಹೋಗಿವೆ ಎಂದು ಹರಳುಕುಂಟೆ ಗ್ರಾಮದ ನಿವಾಸಿ ಗೋಪಾಲಕೃಷ್ಣ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ
ಮನೆ ಮಾಲೀಕ ಗೋಪಾಲಕೃಷ್ಣ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಚನ್ನಪಲ್ಲಿ ಸಿಪಿ ವೆಂಕಟರಮಣಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ತನಗಾಗಿರುವ ಅನ್ಯಾಯದ ಬಗ್ಗೆ ನ್ಯಾಯ ದೊರಕಿಸಿ ಕೊಡಬೇಕೆಂದು ದೂರನ್ನು ನೀಡಿದ್ದಾರೆ.
ಅಮಾಯಕರ ಪ್ರಾಣಗಳು ಬಲಿಯಾಗುವಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸಿಡಿಮದ್ದುಗಳ ಸರಬರಾಜಿಗೆ ಕಡಿವಾಣ ಹಾಕಿ ಸಾರ್ವಜನಿಕರ ಒತ್ತಾಯ
ಹರಳಕುಂಟೆ ಗ್ರಾಮದಲ್ಲಿ ಎರಡು ಬಾರಿ ಸ್ಪೋಟಕಗಳನ್ನು ಇಟ್ಟು ಬಂಡೆಕಲ್ಲುಗಳನ್ನು ಸಿಡಿಸಿದ್ದರು ಸಹ ಸಂಬಂಧಪಟ್ಟ ಅಧಿಕಾರಿ ವೃಂದದವರಿಗೆ ಮಾಹಿತಿ ಇಲ್ಲವೇ? ಬಂಡೆಗಳನ್ನು ಸಿಡಿಸಲು ಸಿಡಿಮದ್ದುಗಳು ಹಾಗೂ ಜೆಲೆಟಿನ್ ಕಡ್ಡಿಗಳು ಯಾವ ರೀತಿ ಸರಬರಾಜು ಆಗುತ್ತಿವೆ ಎಂಬುದು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಮಾಡಿಕ್ರಮ ಕೈಗೊಳ್ಳಬೇಕಾಗಿದೆ
ಸಿಡಿಬಂಡೆಗಳ ಸ್ಪೋಟಕ್ಕೆ ಹಾಗೂ ಆ ಶಬ್ದಕ್ಕೆ ಮನೆಯಲ್ಲಿ ಯಾರಾದರೂ ಇದ್ದಿದ್ದರೆ ಎಂತಹ ಅನಾಹುತ ಸಂಭವಿಸುತ್ತಿತ್ತು ಊಹಿಸಲು ಅಸಾಧ್ಯವಾಗುತ್ತದೆ.
ಇಂತಹ ಘಟನೆಗಳು ಮರುಕಳಿಸಬಾರದು ಹಾಗೂ ಇಂತಹ ಸ್ಪೋಟಕಗಳನ್ನು ಸಾಗಿಸುವವರ ಮೇಲೆ ಮತ್ತು ಇಡುವವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ತಕ್ಕ ಶಿಕ್ಷೆಯಾದಲ್ಲಿ ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಹಾಗೂ ಅಮಾಯಕರ ಪ್ರಾಣಗಳು ಬಲಿಯಾಗುವಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ