ಅಂತ್ಯೋದಯದಿoದ ಸರ್ವೋದಯ ಚಿಂತನಾ ಮಂಥನ ಕಾರ್ಯಕ್ರಮಕ್ಕೆ ಚಾಲನೆ ಜಾತ್ಯಾತೀತರೆನ್ನುವವರು ಜಾತಿ ಬಿಟ್ಟ ಚುನಾವಣೆಯಲ್ಲಿ ಗೆದ್ದುತೋರಿಸಲಿ – ಸಿ.ಟಿ.ರವಿ

ಕೋಲಾರ:- ಜಾತ್ಯತೀತ ನಾನು ಎನ್ನುವವರು ಅವರ ಜಾತಿ ಬಿಟ್ಟು ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಬಿಜೆಪಿ ರಾಷ್ಟಿಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಸವಾಲು ಹಾಕಿದರು.
ನಗರದ ಟಿ.ಚನ್ನಯ್ಯ ರಂಗಮoದಿರದಲ್ಲಿ ಅಂಬೇಡ್ಕರ್ ಚಿಂತನ ವೇದಿಕೆ ಆಶ್ರಯದಲ್ಲಿ ಗುರುವಾರ ನಡೆದ ಅಂತ್ಯೋದಯದಿoದ ಸರ್ವೋದಯ ಚಿಂತನಾ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಾತಿ ಮುಂದಿಟ್ಟುಕೊoಡು ಮತ ಕೇಳುತ್ತಾರೆ, ನಾವು ಜಾತಿ ಆಧಾರದ ಮೇಲೆ ಮತ ನೀಡುವ ಮೂಲಕ ಡಾ.ಅಂಬೇಡ್ಕರ್ ಅವರ ಆಶಯಗಳ ವಿರುದ್ಧ ನಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ವಂಶಪಾರoಪರೆ ಹಾಗೂ ಜಾತಿ ರಾಜಕಾರಣದಿಂದ ಪ್ರಜಾಪ್ರಭುತ್ವದ ಬೇರು ದುರ್ಬಲಗೊಳ್ಳುತ್ತದೆ. ಸಮಸಮಾಜ ನಿರ್ಮಾಣಕ್ಕಾಗಿ ವಂಶಪಾರoಪರೆ, ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯಬೇಕು ಎಂದರು.
ಕಾoಗ್ರೆಸ್ ಪಕ್ಷವು ವಂಶಪಾರoಪರೆ ಬೀಜವನ್ನು ಪ್ರಜಾಪ್ರಭುತ್ವದಲ್ಲಿ ಬಿತ್ತುವ ಮೂಲಕ ಪ್ರಜಾಪ್ರಭುತ್ವ ಆಶಯ ದುರ್ಬಲಗೊಳಿಸಿದ್ದು, ಆ ಬೀಜದ ಬೇರುಗಳು ಬೇರೆ ಪಕ್ಷಗಳಲ್ಲಿಯೂ ಸಹ ಬೆಳೆಯುತ್ತಿದೆ. ಇದರಿಂದ ಸಂವಿಧಾನ ದುರ್ಬಲವಾಗುತ್ತದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಕೋಲಾರಕ್ಕೆ ಬರುತ್ತಿರುವುದೇ ಜಾತಿ ಆಧಾರದ ಮೇಲೆ ತಾನು ಗೆಲ್ಲಬಹುದು ಎಂದು. ಅಹಿಂದ ಮತಗಳು ಹೆಚ್ಚಿವೆ ಎಂದು, ಜಾತಿ ರಾಜಕಾರಣ ಮಾಡುವವರು ಜಾತಿ ವ್ಯವಸ್ಥೆಯಲ್ಲಿ ನಮ್ಮನ್ನು ಬಂಧಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ನೀತಿಯ ಮೂಲಕ ಈ ಮಟ್ಟಕ್ಕೆ ಬೆಳೆದಿದ್ದಾರೆ ಯಾವುದೇ ಜಾತಿ ಹೆಸರು ಹೇಳಿಲ್ಲ, ಅಹಿಂದ ಕಟ್ಟಿಲ್ಲ ಎಂದ ಅವರು, ನಾಯಕನಾಗಬೇಕಾದರೆ ನೀತಿ, ನೇತೃತ್ವ, ನಿಯತ್ತು ಅಳವಡಿಸಿಕೊಂಡು ಜನರ ಮಧ್ಯದಿಂದ ಲೀಡರ್ ಆಗಬೇಕು ಎಂದು ಹೇಳಿದರು.
ಬಿಜೆಪಿ ದಲಿತ ವಿರೋಧಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಮಾತಿನಲ್ಲಿ ಹೇಳುವುದಕ್ಕಿಂತ ನಾವು ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳು ಮಾತನಾಡುತ್ತವೆ ಎಂದರು.
ಸoಸದ ಎಸ್.ಮುನಿಸ್ವಾಮಿ ಮಾತನಾಡಿ, ಡಾ.ಅಂಬೇಡ್ಕರ್ ಅವರನ್ನು ಸೋಲಿಸಿದ ಕಾಂಗ್ರೆಸ್ ಪಕ್ಷವು ಅವರು ಮರಣ ಹೊಂದಿದಾಗ ಸಮಾಧಿ ಮಾಡಲು ಜಾಗವೂ ನೀಡಲಿಲ್ಲ, ಆದರೆ ಅವರ ನಾಯಕರನ್ನು ಎಕರೆಗಟ್ಟಲೆ ಜಾಗದಲ್ಲಿ ಮಣ್ಣು ಮಾಡಿದ್ದಾರೆ. ಇವರ ಈ ನೀತಿಯಿಂದಲೇ ನಾವು ತಿಳಿಯಬಹುದು ದಲಿತರ ಪರ ಕಾಂಗ್ರೆಸ್ ಇಲ್ಲವೆಂದು ಎಂದರು.
ಕೇoದ್ರ ಹಾಗೂ ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿ ಪಂಗಡಗಳಿಗೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ತಂದಿದ್ದಾರೆ. ಮುಂದೆಯೂ ಬಹಳಷ್ಟು ಅನುದಾನಗಳನ್ನು ತರುವ ಮೂಲಕ ದಲಿತರ ಏಳಿಗೆಗೆ ಸದಾ ಬಿಜೆಪಿ ಪಕ್ಷವು ಸಿದ್ಧವಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ದಲಿತ ಹಿರಿಯ ಮುಖಂಡ ಡಾ.ಚಂದ್ರಶೇಖರ್, ಆರ್‌ಪಿಐ ರಾಷ್ಟç ಕಾರ್ಯಧ್ಯಕ್ಷ ಡಾ. ವೆಂಕಟಸ್ವಾಮಿ, ಸಾಮಾಜಿಕ ಕಾರ್ಯಕರ್ತ ರಾಜೇಶ್ ಪದ್ಮಾರ್, ಮಹೇಂದ್ರ ಕೌತಾಳ, ದಲಿತ ಮುಖಂಡರಾದ ಡಿ ಪಿ ಎಸ್ ಮುನಿರಾಜು, ಹನುಮಂತಪ್ಪ, ಶಂಕರಪ್ಪ ಹಾಗೂ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *