ಕೋಲಾರ: ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ದುನಿಯಾ ಪತ್ರಿಕೆ ಸಂಪಾದಕರಾಗಿರುವ ಎನ್ ಮುನಿಯಪ್ಪ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ದೊರತಿದೆ. ಕೋಲಾರ ನಗರದ ಪಿ.ಸಿ ಬಡಾವಣೆಯ ಮುನಿಯಮ್ಮ ಹಾಗೂ ನಾರಾಯಣಪ್ಪ ದಂಪತಿಯ ಸುಪುತ್ರರಾದ ಎನ್ ಮುನಿಯಪ್ಪ ಅವರು ಕಳೆದ ೩೦ ವರ್ಷಗಳಿಂದ ಜಿಲ್ಲೆಯ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಚಿತ್ರಕಲಾ ಶಿಕ್ಷಕರಾಗಬೇಕೆಂಬ ಅಭಿಲಾಷೆಯಿಂದ ಡ್ರಾಯಿಂಗ್ ಡಿಪ್ಲೋಮೋ ಓದಿದ್ದ ಎನ್ ಮುನಿಯಪ್ಪ ಅವರು ಪತ್ರಿಕಾ ರಂಗದ ಆಕರ್ಷಣೆಗೆ ಒಳಗಾಗಿ ಕೋಲಾರ ನೌಕರರ ಮಿತ್ರ, ಮಾಯಲೋಕ, ಮೂಡಲ ಮಿತ್ರ ವಾರಪತ್ರಿಕೆಗಳನ್ನು ಆರಂಭಿಸಿ ಸಂಪಾದಕರಾಗಿ ದುಡಿದಿದ್ದಾರೆ. ಕೆಲವು ಕಾಲ ಪ್ರಿಯಪತ್ರಿಕೆ ಹಾಗೂ ಈನಾಡು ಪತ್ರಿಕೆಯ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ದುನಿಯಾ ಪತ್ರಿಕೆ ದಿನಪತ್ರಿಕೆಯ ಸಂಪಾದಕರಾಗಿರುವ ಎನ್ ಮುನಿಯಪ್ಪ ಅವರು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಶಸ್ತಿಗೆ ಭಾಜನರಾದ ಎನ್ ಮುನಿಯಪ್ಪ ಅವರಿಗೆ ಪತ್ರಿಕಾ ಮಿತ್ರರು ಅಭಿನಂದನೆ ಸಲ್ಲಿಸಿದ್ದಾರೆ.
ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿ ಸಹಕರಿಸಿದ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಕಾರ್ಯದರ್ಶಿ ಸಿ. ರೂಪಾ, ಸದಸ್ಯ ಎಸ್. ಲಕ್ಷಿ÷್ಮನಾರಾಯಣ,ಪ್ರಥಮ ದರ್ಜೆ ಸಹಾಯಕ ಮುನಿರಾಜು ಸೇರಿದಂತೆ ಅಕಾಡೆಮಿಯ ಎಲ್ಲಾ ಸದಸ್ಯರಿಗೆ ದುನಿಯಾ ಮುನಿಯಪ್ಪ ಧನ್ಯವಾದಗಳನ್ನು ತಿಳಿಸಿದ್ದಾರೆ.