ಸಾರ್ವಜನಿಕರು ಸರಕು ಮತ್ತು ಸೇವೆಗಳನ್ನು ಕೊಳ್ಳುವಾಗ ಜಾಗರೂಕತೆ ವಹಿಸಿ – ಜಿಲ್ಲಾಧಿಕಾರಿ ವೆಂಕಟ್ ರಾಜಾ


ಕೋಲಾರ, ಸಾರ್ವಜನಿಕರು ಸರಕು ಮತ್ತು ಸೇವೆಗಳನ್ನು ಕೊಳ್ಳುವಾಗ ಜಾಗರೂಕತೆ ವಹಿಸಿ ಮೂಲ ಬೆಲೆ ಮತ್ತು ಬಳಕೆಯ ಅವಧಿ ನೋಡಿ ವಸ್ತುಗಳನ್ನು ಖರೀದಿ ಮಾಡಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.
ಇಂದು ನಗರದ ಶ್ರೀ ಟಿ.ಚನ್ನಯ್ಯ ರಂಗಮoದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಮಾಪನ ಶಾಸ್ತ್ರ ಇಲಾಖೆ, ವಕೀಲರ ಸಂಘ, ಕೋಲಾರ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಕೋಲಾರ ಇವರ ಸಹಯೋಗದಲ್ಲಿ ರಾಷ್ಟಿಯ ಗ್ರಾಹಕರ ದಿನಾಚರಣೆ-೨೦೨೨ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಒಂದು ಉತ್ಪನ್ನಗಳು, ಸರಕುಗಳು, ಸೇವೆಗಳನ್ನು ಕೊಳ್ಳುವಾಗ ಅವುಗಳ ಬೆಲೆ, ತೂಕ, ಅಳತೆ, ಗುಣಮಟ್ಟ, ದಿನಾಂಕಗಳನ್ನು ಸರಿಯಾಗಿ ನೋಡಿ ತೆಗೆದುಕೊಳ್ಳಬೇಕು ಮತ್ತು ತಪ್ಪದೇ ರಸೀದಿಯನ್ನು ಪಡೆಯಬೇಕು. ಇತ್ತಿಚಿನ ದಿನಗಳಲ್ಲಿ ಆಹಾರ ಸಾಮಗ್ರಿಗಳಲ್ಲಿ ಗ್ರಾಹಕರು ತುಂಬಾ ಮೋಸ ಹೋಗುತ್ತಿದ್ದಾರೆ. ಗ್ರಾಹಕರು ಉತ್ಪನ್ನಗಳನ್ನು ಕೊಳ್ಳುವಾಗ ಜಾಗೃತ ನಾಗರಿಕರಾಗಿ ಯಾವುದೇ ರೀತಿಯ ಅಕ್ರಮವಾಗಿ ಮಾರಾಟವಾಗುವಂತಹ ಸರಕು ಮತ್ತು ಸೇವೆಗಳು ಮತ್ತು ಉತ್ಪನ್ನಗಳು ಕಂಡುಬoದರೆ ನಿರ್ಬಂಧಿಸುವoತೆ ಮತ್ತು ಅದರ ವಿರುದ್ದ ಗ್ರಾಹಕ ಪರಿಹಾರ ವ್ಯಾಜ್ಯಗಳ ಆಯೋಗಕ್ಕೆ ದೂರು ನೀಡಬಹುದು ಎಂದು ತಿಳಿಸಿದರು.
ನಾವು ಯಾವುದೇ ವಸ್ತುವನ್ನು ಖರೀದಿಸಿದರೆ ರಸೀದಿಯನ್ನು ತಪ್ಪದೆ ಪಡೆಯಬೇಕು. ನಾವು ಸಹಾ ಮೋಸ ಹೋಗದಂತೆ ಜಾಗೃತರಾಗಿ ದೇಶಕ್ಕೆ ಮಾದರಿಯಾಗಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್ ಎಸ್.ಹೊಸಮನಿ ಅವರು ಮಾತನಾಡಿ ಗ್ರಾಹಕರೇ ಎಚ್ಚೆತ್ತುಕೊಳ್ಳಿ ಎಂಬ ವೇದ ವಾಕ್ಯವನ್ನು ನುಡಿದು ಸಾರ್ವಜನಿಕರು ಪಡೆಯುವಂತಹ ಸರಕು ಮತ್ತು ಸೇವೆಗಳಗೆ ಯಾವುದೇ ರೀತಿಯ ಅಕ್ರಮಗಳು ಕಂಡುಬoದಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಶೀಘ್ರವಾಗಿ ದೂರನ್ನು ನೊಂದಾಯಿಸಿ. ಬೇರೆ ಯಾವ ರೀತಿಯಲ್ಲಿಯು ಸಹಾ ರಾಜಿಯಾಗದೆ ವಸ್ತುಗಳ ಗುಣಮಟ್ಟ, ತೂಕ, ಅಳತೆ ದಿನಾಂಕಗಳನ್ನು ಸರಿಯಾಗಿ ನೋಡಿ ನಂತರ ತೆಗೆದುಕೊಳ್ಳಿ ಎಂದು ಹೇಳಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅದ್ಯಕ್ಷರಾದ ಸೈಯದ್ ಅನ್ಸರ್ ಕಲೀಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ದಿನನಿತ್ಯದ ವ್ಯವಹಾರಗಳಲ್ಲಿ ಕಾನೂನು ನಮಗೆ ಅವಶ್ಯಕವಾಗಿದೆ. ಕೋಲಾರ ಜಿಲ್ಲೆಯಲ್ಲಿ ಗ್ರಾಹಕ ನ್ಯಾಯಾಲಯದಲ್ಲಿ ಕೇಸುಗಳನ್ನು ದಾಖಲಾಗುತ್ತಿಲ್ಲ. ಇಲ್ಲಿನ ಜನರಿಗೆ ಅದರ ಅರಿವಿನ ಕೊರತೆ ಕಡಿಮೆ ಇದೆ. ಅದರಿಂದ ಗ್ರಾಹಕರು ತುಂಬಾ ಜಾಗರೂಕತೆಯಿಂದ ಉತ್ಪನ್ನಗಳನ್ನ ಕೊಳ್ಳಬೇಕು ಎಂದು ಹೇಳಿದರು.
ಇತ್ತೀಚಿನ ಡಿಜಿಟಲ್ ಆನ್‌ಲೈನ್ ಯುಗದಲ್ಲಿ ಕಂಪನಿಗಳ ಉತ್ಪನ್ನಗಳ ಗುಣಮಟ್ಟ ಕಡಿಮೆ ಇದ್ದರೂ ಸಹ ಅಂತಹ ಕಂಪನಿಗಳ ವಿರುದ್ಧ ಸಹಾ ಕೇಸುಗಳನ್ನು ದಾಖಲಿಸಬಹುದು ಮತ್ತು ಪರಿಹಾರವನ್ನು ಪಡೆಯಬಹುದಾಗಿದೆ ಮತ್ತು ಯಾವುದೇ ರೀತಿಯ ಸರಕು ಮತ್ತು ಸೇವೆಗಳನ್ನು ಪಡೆಯುವಾಗ ತುಂಬಾ ಎಚ್ಚರವಾಗಿಬೇಕು. ಅವುಗಳ ರಸೀದಿಯನ್ನು ತಪ್ಪದೆ ಪಡೆಯಬೇಕು. ವೈದ್ಯಕೀಯ, ಇನ್ಸೂರೆನ್ಸ್ ಮತ್ತು ದಿನಸಿ ಅಂಗಡಿ, ಗ್ಯಾಸ್, ಪೆಟ್ರೋಲ್ ಮುಂತಾದ ಸರಕು ಮತ್ತು ಸೇವೆಗಳಿಗೆ ಸಂಬoಧಿಸಿದoತೆ ಅದರ ತೂಕ, ಗುಣಮಟ್ಟ, ಅಳತೆ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಜಾಗೃತರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಶೃತಿ ಎಂ.ಕೆ. ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮತದ ಜಿಲ್ಲಾ ವ್ಯವಸ್ಥಾಪಕ ಎಸ್.ಸಿ.ಚೌಡೇಗೌಡ, ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕ ಎಂ.ಪಿ.ಪ್ರಭುದೇವ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಶ್ರೀಧರ್, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಅಧ್ಯಕ್ಷೆ ಕೆ ಎಸ್ ನಾಗವೇಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *