ಪಿಲ್ಲಿ ಕುಂಟೆ ದಿವ್ಯಜೋತಿ ವೃದ್ಧಾಶ್ರಮದಲ್ಲಿ ೬೪ನೇ ಹುಟ್ಟುಹಬ್ಬದ ಇಂದಿರಾ ಭವನ್ ರಾಜಣ್ಣ

ಶ್ರೀನಿವಾಸಪುರ ತಾಲೂಕಿನ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಸಮಾಜಸೇವಕರು ಇಂದಿರಾ ಭವನ್ ಹೋಟೆಲ್ ಮಾಲೀಕರು ಆದ ರಾಜಣ್ಣ ರವರು ೬೪ನೇ ಹುಟ್ಟುಹಬ್ಬವನ್ನು ವೃದ್ಧಾಶ್ರಮದಲ್ಲಿ ಆಚರಿಸಿಕೊಂಡಿದ್ದಾರೆ.
ವೃದ್ಧಾಶ್ರಮದಲ್ಲಿ ಇರುವ ಹಿರಿಯರಿಗೆ ಸ್ವೀಟ್ ಬಾಕ್ಸ್ ಹಾಗೂ ಸ್ವೇಟರ್ ಗಳನ್ನು ನೀಡಿ ಹುಟ್ಟುಹಬ್ಬವನ್ನು ಆಚರಿಸಿ ಕೊಂಡಿದ್ದಾರೆ ಪಟ್ಟಣದ ಇಂದಿರಾ ಭವನ್ ರ‍್ಕಲ್ ನಲ್ಲಿ ಮೊದಲ ಬಾರಿಗೆ ಜೆಡಿಎಸ್ ಕರ‍್ಯರ‍್ತರು ಪಟಾಕಿಗಳನ್ನು ಸಿಡಿಸಿ ನಂತರ ಕೆಕನ್ನು ಕತ್ತರಿಸಿ ಜೆಡಿಎಸ್ ಕರ‍್ಯರ‍್ತರು ಶುಭಾಶಯಗಳನ್ನು ಕೋರಿದರು.
ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇಂದಿರಾ ಭವನ್ ರಾಜಣ್ಣ ರವರು ನಾವು ನಮ್ಮ ಕೈಲಾದಷ್ಟು ಸೇವೆಯನ್ನು ಮಾಡಬೇಕಾಗಿದೆ.
ನಾವು ನಮ್ಮ ಮನೆಯಲ್ಲಿ ಇದ್ದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ ಆದರೆ ಬಡವರ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗುವುದು ಪ್ರತಿಯೊಬ್ಬರ ರ‍್ತವ್ಯವಾಗಬೇಕು.
ನನ್ನ ೬೪ನೇ ಹುಟ್ಟುಹಬ್ಬದ ಆಚರಣೆ ಮೂಲಕ ಪಿಲಿಕುಂಟೆ ಗ್ರಾಮದ ದಿವ್ಯಜೋತಿ ವೃದ್ಧಾಶ್ರಮದಲ್ಲಿ ನನ್ನ ಕೈಲಾದ ಸಾಕಾರವನ್ನು ನೀಡಿ ಇಲ್ಲಿನ ಹಿರಿಯರಿಗೆ ಸ್ವೇಟರ್ ನೀಡಿ ಸಿಹಿ ಯನ್ನು ಹಂಚಿ ಸಂಭ್ರಮಿಸುತ್ತಿದ್ದೇನೆ.
ಈ ವೇಳೆಯಲ್ಲಿ ಹಿರಿಯ ಜಿಲ್ಲಾ ಪಂಚಾಯಿತಿ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ, ಜೆಡಿಎಸ್ ಪಕ್ಷದ ಮುಖಂಡರಾದ ಆಟೋ ಜಗದೀಶ್ ಪೂಲು ಶಿವಾರೆಡ್ಡಿ ಅಂಬೇಡ್ಕರ್ ಪಾಳ್ಯ ರವಿ ಕಾರ್ ಬಾಬು ಸುಭಾಷ್ ರಸ್ತೆ ಮಂಜುನಾಥಗೌಡ ಗುರವಿ ಮಾಕಲಪಲ್ಲಿ ಶ್ರೀನಿವಾಸ ಹಾಗೂ ಇನ್ನೂ ಅನೇಕ ಮಂದಿ ಸೇರಿದಂತೆ ದಿವ್ಯಜೋತಿ ವೃದ್ಧಾಶ್ರಮದ ನರಸಿಂಹಪ್ಪ ಶುಭಾಶಯಗಳು ಕೋರಿದರು.

Leave a Reply

Your email address will not be published. Required fields are marked *