ಮುಳಬಾಗಿಲು, ಕೃಷಿ ಕ್ಷೇತ್ರವನ್ನು ನಿರ್ಲಕ್ಷ ಮಾಡಿ ರೈತ ಕುಲವನ್ನು ಕಡೆಗಣಿಸಿದರೆ ಆಹಾರಕ್ಕಾಗಿ ಮೂರನೇ ಮಹಾಯುದ್ದ ಸಂಭವಿಸುತ್ತಿದೆ ಎಂದು ಜೆ.ಡಿ.ಎಸ್ ನ ಸಮೃದ್ದಿ ಮಂಜುನಾಥ್ ಸರ್ಕಾರಗಳಿಗೆ ಮುಂದಿನ ಭವಿಷ್ಯದ ಎಚ್ಚರಿಕೆಯನ್ನು ನೀಡಿದರು. ಭತ್ತ, ರಾಗಿ ರಾಶಿಗಳಿಗೆ ಪೂಜೆ ಸಲ್ಲಿಸಿವಿಶ್ವ ರೈತ ದಿನಾಚರಣೆ ಹಾಗೂ ಕೆ.ಎಸ್ ಪುಟ್ಟಣ್ಣಯ್ಯನವರ ಜನ್ಮದಿನಾಚರಣೆಯ ಕರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರವರು ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆಯಂತೆ ಒಕ್ಕಲುತನ ಇಲ್ಲದಿದ್ದರೆ ಬಿಕ್ಕುವುದು ಜಗವೆಲ್ಲ ರೈತರ ಹಿತ ಕಾಯಬೇಕಾದ ಸರ್ಕಾರಗಳೇ ಅಭಿವೃದ್ದಿ ಹೆಸರಿನಲ್ಲಿ ಕೃಷಿ ಜಮೀನನ್ನು ಕಬಳಿಸಿ ರೈತರನ್ನು ಬೀದಿಗೆ ತಳ್ಳುವ ಸರ್ಕಾರಗಳಿಗೆ ಮುಂದಿನ ಚುನಾವಣೆಯಲ್ಲಿ ರೈತರೇ ತಕ್ಕ ಉತ್ತರ ನೀಡುತ್ತಾರೆಂದು ರೈತ ವಿರೋದಿ ರ‍್ಕಾರಗಳಿಗೆ ಎಚ್ಚರಿಕೆ ನೀಡಿದರು.
ತಾಲ್ಲೂಕಿನಲ್ಲಿ ಯಾವುದೇ ಕಚೇರಿಯಲ್ಲಿ ಲಂಚವಿಲ್ಲದೆ ಕೆಲಸ ಆಗುತ್ತಿಲ್ಲ ನನ್ನ ಸ್ವಂತ ಕೆಲಸಕ್ಕೆ ನನ್ನ ಬಳಿಯೇ ಲಂಚ ತೆಗೆದುಕೊಂಡಿದ್ದಾರೆ ಸಮಯ ಬಂದಾಗ ದಾಖಲೆಗಳ ಸಮೇತ ಬಿಚ್ಚಿಡುತ್ತೇನೆ ನನಗೆ ಈಗಾದರೆ ಜನಸಾಮಾನ್ಯರ ಪರಿಸ್ಥಿತಿ ಏನೂ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಡಿದರು.
ತಾ.ಅ ಯಲುವಳ್ಳಿ ಪ್ರಭಾಕರ್ ಮಾತನಾಡಿ ಜಿಲ್ಲೆಯ ರೈತರು ಸ್ವಾಭಿಮಾನಿಗಳು ಎಷ್ಟೇ ಕಷ್ಟ ಬಂದರೂ ಎದೆಗುಂದದೆ ೨ ಸಾವಿರ ಅಡಿಯಿಂದ ನೀರು ತೆಗೆದು ಉತ್ತಮ ಬೆಳೆ ಬೆಳೆದು ಇಡೀ ದೇಶಕ್ಕೆ ಹಾಲು, ತರಕಾರಿ, ಕೊಡುವ ಜಿಲ್ಲೆಯ ರೈತರಿಗೆ ಸರ್ಕಾರ ಅತಿವೃಷ್ಠಿ ಅನಾವೃಷ್ಟಿ ಸಮಯದಲ್ಲಿ ನೆರವಾಗಲು ಕೃಷಿ ಆದಾರಿತ ಹಾಗೂ ಸಂಸ್ಕರಣ ಘಟಕಗಳ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯ ಮಾಡಿದರು. ತಹಶೀಲ್ದಾರ್ ಶೋಭಿತ ಮಾತನಾಡಿ ರೈತರು ಯಾವುದೇ ಸಮಸ್ಯೆ ಪರಿಹಾರಕ್ಕಾಗಿ ತಾಲ್ಲೂಕು ಕಚೇರಿಯಲ್ಲಿ ದಲ್ಲಾಳಿಗಳನ್ನು ಅವಲಂಭಿಸದೆ ನೇರವಾಗಿ ನನ್ನ ಕಚೇರಿಗೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳುವ ಜೊತೆಗೆ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ದ ದೂರು ಕೊಟ್ಟರೆ ಕ್ರಮ ಕೈಗೊಳ್ಳುವ ಜೊತೆಗೆ ಪಿ.ನಂಬರ್ ದುರಸ್ತಿಯ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ಕರ‍್ಯಕ್ರಮದಲ್ಲಿ ನೀಡಿದರು.
ತೋಟಗಾರಿಕೆ ಕೃಷಿ ರೇಷ್ಮೇ, ಕೆ,ಇಬಿ, ಹಾಲು ಒಕ್ಕೂಟದ ಅಧಿಕಾರಿಗಳು ಮಾತನಾಡಿ ಮುಂಗಾರು ಹಾಗೂ ಜಡಿಮಳೆಯಿಂದ ನಷ್ಟವಾಗಿರುವ ರೈತರಿಗೆ ದಾಖಲೆಗಳು ನೀಡಿದರೆ ಪರಿಹಾರ ನೀಡುವ ಜೊತೆಗೆ ಸರ್ಕಾರದಿಂದ ರೈತರಿಗೆ ಬರುವ ಎಲ್ಲಾ ಸೌಲಭ್ಯಗಳನ್ನು ಮದ್ಯರ‍್ತಿಗಳ ಕಾಟವಿಲ್ಲದೆ ರೈತರು ನೇರವಾಗಿ ಇಲಾಖೆಗಳಿಗೆ ಬಂದು ಪಡೆಯಬಹುದುದೆಂದು ಆಶಯ ತುಂಬಿದರು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಮಾತನಾಡಿ ರೈತರ ಮೇಲೆ ಪ್ರಮಾಣ ಮಾಡಿ ರೈತರ ಬೆನ್ನುಮೂಳೆ ಮುರಿಯುತ್ತಿರುವ ಸರ್ಕಾರಗಳಿಗೆ ಎಚ್ಚರಿಕೆ ನೀಡಲು ರೈತರು ಒಗ್ಗೂಡಬೇಕು ಜೊತೆಗೆ ಕೃಷಿ ಕ್ಷೇತ್ರಕ್ಕೆ ಮಾರಕವಾಗುವ ಕಾಯ್ದೆಗಳನ್ನು ಕಾಯ್ದೆಗಳನ್ನು ಜಾರಿಗೆ ತಂದು ಅದಾನಿ,ಅಂಬಾನಿಗೆ ಕೃಷಿ ಕ್ಷೇತ್ರವನ್ನು ಅಡವಿಟ್ಟು ಆಹಾರ ಆಭದ್ರತೆಯನ್ನು ಸೃಷ್ಠಿ ಮಾಡಿ ತುತ್ತು ಅನ್ನಕ್ಕಾಗಿ ದಂಗೆ ಹೇಳುವ ಹಾಗೆ ಮಾಡುವ ಸರ್ಕಾರಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‌ಪಾಷ, ಬಂಗಾರಿ ಮಂಜು ಮಾತನಾಡಿ ರೈತರು ಬೆಳೆದ ಬೆಳೆಗೆ ಬೆವರಿಗೆ ತಕ್ಕ ಬೆಲೆ ನಿಗದಿ ಮಾಡಲು ಸರ್ಕಾರ ಕಾನೂನು ಜಾರಿ ಮಾಡುವ ಜೊತೆಗೆ ಲಾಭ ನಷ್ಟದ ರ‍್ಚು ವೆಚ್ಚದ ಮೇಲೆ ಮಾರುಕಟ್ಟೆ ಬೆಲೆ ನಿಗದಿ ಮಾಡಿದರೆ ಮಾತ್ರ ಸಂಕಷ್ಟದಲ್ಲಿರುವ ರೈತ ಕುಲವನ್ನು ರಕ್ಷಣೆ ಮಾಡಬಹುದೆಂದರು. ದೇಶಕ್ಕೆ ಅನ್ನ ಹಾಕುವ ಅನ್ನದಾತನ ಮಕ್ಕಳಿಗೆ ಹೆಣ್ಣು ಕೊಡದ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರ ಬಿಸಿಲು, ಗಾಳಿ ಮಳೆ ಚಳಿ ಎನ್ನದೆ ದುಡಿಯುವ ರೈತ ಔಷಧಿಗಳ ಜೊತೆ ಆರೋಗ್ಯದ ಚೆಲ್ಲಾಟವಾಡಿ ದೇಶಕ್ಕೆ ಅನ್ನ ಹಾಕಿ ತಾನು ಉಪವಾಸ ಮಲಗುವ ಕೃಷಿ ಕುಲವೇ ರೈತ ಕುಲವೆಂದು ರೈತ ಮಕ್ಕಳು ಪದವಿದಾರರಾಗಿದ್ದರೂ ಕೆಲಸ ಸಿಗದೆ ಸ್ವಾವಲಂಭಿ ಜೀವನ ಮಾಡುತ್ತಿರುವ ರೈತರ ಮಕ್ಕಳಿಗೆ ಹೆಣ್ಣು ಕೊಡದ ಪರಿಸ್ಥಿತಿಯಲ್ಲಿರುವ ರೈತರ ಮೇಲೆ ಸರ್ಕಾರಗಳು ಕರುಣೆ ತೋರಿಸದೇ ಇರುವುದು ದುರಾದೃಷ್ಠಕರವೆಂದು ಆಕ್ರೋಶ ವ್ಯಕ್ರಪಡಿಸಿದರು.
ರೈತ ಮಕ್ಕಳನ್ನು ಮದುವೆಯಾದರೆ ೨೫ ಲಕ್ಷ ರೈತ ಕನ್ಯಾ ಯೋಜನೆ ಪಡೆಯಬಹುದೆಂಬ ರ‍್ಥಪರ‍್ಣ ಯೋಜನೆಯನ್ನು ಜಾರಿಗೊಳಿಸಬೇಕೆಂದು ಕಾರ್ಯಕ್ರಮದಲ್ಲಿ ಒತ್ತಾಯ ಮಾಡಿದರು. ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಮಂಜುಳಾ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‌ಗೌಡ, ಜಿಲ್ಲಾಕರ‍್ಯದ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ರಾಜೇಶ್, ಭಾಸ್ಕರ್, ಗುರುಮರ‍್ತಿ, ಜುಬೇರ್‌ಪಾಷ, ಅದಿಲ್‌ಪಾಷ, ವಿಜಯ್‌ಪಾಲ್, ವಿಶ್ವ, ಯಲ್ಲಪ್ಪ, ವೆಂಕಟೇಶ್, ಹರೀಶ್, ನವೀನ್, ವೇಣು, ಗೀರೀಶ್, ರಾಮಮರ‍್ತಿ, ಸಂದೀಪ್ ರೆಡ್ಡಿ, ಸಂದೀಪ್‌ಗೌಡ, ರಾಮಸಾಗರ ವೇಣು, ವಕ್ಕಲೇರಿ ಹನುಮಯ್ಯ, ಶೈಲ, ರೈತ ಮಹಿಳೆಯರು ಮುಂತಾದವರಿದ್ದರು.