ಶ್ರೀನಿವಾಸಪುರ, ರೈತರ ಮಕ್ಕಳಿಗೆ ಸರ್ಕಾರ ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡಿದರೆ ಮಾತ್ರ ರೈತರ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಎಸ್. ಜಿ ವೀರಭದ್ರಸ್ವಾಮಿ ಹೇಳಿದರು.
ಪಟ್ಟಣದಲ್ಲಿ ೨೦೨೨-೨೩ನೇ ಸಾಲಿನ ಅತ್ಮಯೋಜನೆ (ಕೃಷಿ ಇಲಾಖೆ) ತಾಲ್ಲೂಕು ಕೃಷಿಕ ಸಮಾಜ ಹಾಗೂ ರೈತರವತಿಯಿಂದ ರೈತರ ದಿನಾಚರಣೆ ಅಂಗವಾಗಿ ಕೀಸಾನ್ಗೋಷ್ಟಿ ಕರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೀರಭದ್ರಸ್ವಾಮಿ ಇಂದು ರೈತದಿನ ಇಡೀ ದೇಶಕ್ಕೆ ಅನ್ನ ನೀಡುವ ರೈತನನ್ನು ಗೌರವಿಸಲು ಅಚರಿಸುವ ದಿನ ಭಾರತದದ ಮಾಜಿ ಪ್ರಧಾನ ಮಂತ್ರಿ ಚೌಧರಿ, ಚರಣ್ಸಿಂಗ್ ರವರ ಜನ್ಮದಿನವನ್ನು ರೈತರ ದಿನವನ್ನಾಗಿ ಘೋಷಿಸಲಾಗಿದೆ. ಸಮಾಜಕ್ಕೆ ತಮ್ಮ ಕೂಡುಗೆಗಾಗಿ ರೈತರಿಗೆ ಸಹಾಯ ಮತ್ತು ಜಾಗೃತಿ ಮೂಡಿಸಲು ಕೃಷಿ ಇಲಾಖೆ ಹಮ್ಮಿಕೊಂಡಿರುವುದು ತುಂಬ ಸಂತೋಷ ಭಾರತದಲ್ಲಿ ರೈತರ ಹಿತ ಕಾಯುವ ಬಿಲ್ನ್ನು ಪ್ರಪ್ರಥಮವಾಗಿ ಚರಣ್ಸಿಂಗ್ ಮಂಡಿಸಿದರು ಇಂದು ಅವರ ಮಂಡಿಸಿದ ಬಿಲ್ನ್ನು ಇಡೀ ದೇಶದ ಎಲ್ಲಾ ರಾಜ್ಯಗಳು ಪಾಲಿಸುತ್ತೇವೆ ಎಂದರು.
ಯುವಕರು ರಾಷ್ಟದ ಭವಷ್ಯವನ್ನು ರೂಪಿಸುವವರು ರೈತ ಮಕ್ಕಳಿಗೆ ಸರ್ಕಾರ ಉದ್ಯೋಗಗಳಲ್ಲಿ ಮೀಸಲಾತಿಯನ್ನು ನೀಡಲೇ ಬೇಕು. ಯುವ ಪೀಳಿಗೆಯನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗಬೇಕು ಪ್ರತಿಭೆಗಳಿಗೆ ಸರಿಯಾದ ಗೌರವ ಸಿಗುತ್ತಿಲ್ಲ. ಮತ ಪಂಥಗಳ ಹೆಸರಿನಲ್ಲಿ ಮೀಸಲಾತಿ ನೀಡುವ ರ್ಕಾರಗಳು ಮೊದಲು ರೈತ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ಮಂದಾಗಬೇಕು ಎಂದರು.
ರೈತರು ಕೃಷಿಯಿಂದ ವಿಮುಖರಾಗಿ ಪಟ್ಟಣಕ್ಕ ವಲಸೆ ಹೋಗದೆ ವಿಜ್ಞಾನಿಗಳ ಸಲಹೆಯಂತೆ ಅಳವಡಿಸಿಕೊಂಡು ಕೃಷಿ ಉತ್ಪನ್ನ ನೇರ ಮಾರುಕಟ್ಟೆೆ ಮಾಡುವುದರಿಂದ ಹೆಚ್ಚಿನ ಆದಾಯಗಳಿಸಬಹುದು : ರೈತ ಸಂಘ ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ನಂಬಿಹಳ್ಳಿ ಎನ್. ಜಿ. ಶ್ರಿರಾಮರೆಡ್ಡಿ
ಅಧ್ಯಕ್ಷತೆವಹಿಸಿ ಮಾತನಾಡಿದ ರೈತ ಸಂಘ ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ನಂಬಿಹಳ್ಳಿ ಎನ್. ಜಿ. ಶ್ರಿರಾಮರೆಡ್ಡಿ ಮಾತನಾಡಿ ರೈತರು ಕೃಷಿಯಿಂದ ವಿಮುಖರಾಗಿ ಪಟ್ಟಣಕ್ಕ ವಲಸೆ ಹೋಗದೆ ಅಧುನಿಕ ಕೃಷಿಯನ್ನು ವಿಜ್ಞಾನಿಗಳ ಸಲಹೆಯಂತೆ ಅಳವಡಿಸಿಕೊಂಡು ಕೃಷಿ ಉತ್ಪನ್ನಗಳನ್ನು ನೇರ ಮಾರುಕಟ್ಟೆಗೆ ಮಾಡುವುದರಿಂದ ಹೆಚ್ಚಿನ ಆದಾಯಗಳಿಸಬಹುದು ರೈತ ದಿನಾಚರಣೆ ಎಂದು ರೈತರ ಕಷ್ಟಗಳನ್ನು ನೆನೆದು ಅವರಿಗೆ ಬೆನ್ನಲೆಬಾಗಿ ನಿಂತು ಕೃಷಿಯನ್ನು ಲಾಭದಾಯಕವಾಗಿ ಪರಿರ್ತಸುವಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದರು.
ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ರೈತರಿಗೆ ಸರಿಯಾದ ಮಾಹಿತಿಯನ್ನು ನೀಡಿ ತಮ್ಮ ಇಲಾಖೆಯಿಂದ ಸಿಗುವ ಸೌಲಭ್ಯವನ್ನು ಸಮಾಜದ ಕಟ್ಟಕಡೆಯ ರೈತರಿಗೂ ಸಿಗುವಂತೆ ಮಾಡಬೇಕು ಮಧ್ಯರ್ತಗಳಿಗೆ ಅವಕಾಶ ನೀಡದೆ ರೈತರಿಗೆ ಸೌಲಭ್ಯಗಳನ್ನು ಸಿಗಬೇಕು. ಯಾವುದೇ ಪಕ್ಷಗಳ ರ್ಕಾರಗಳು ಬಂದರೂ ರೈತರ ಸಮಸ್ಯಗಳನ್ನು ಪರಿಹರಿಸಲು ಅವರಿಗೆ ಮನಸ್ಸು ಬರುತ್ತಿಲ್ಲ ಕೇಂದ್ರದ ಬಿಜೆಪಿ ರ್ಕಾರ ರೈತ ವಿರೋದ ನೀತಿಗಳನ್ನು ಜಾರಿಗೆ ತಂದಿದೆ ರೈತರ ಸಮಸ್ಯೆಗಳನ್ನು ಸ್ಪಂದಿಸಲು ರಾಜಕೀಯ ಪಕ್ಷಗಳು ಹಿಂದು-ಮುಂದು ಮಾಡುತ್ತವೆ ಈಗಾಗಿ ಇಲ್ಲಿಯವರಿಗೂ ರೈತರ ಬದಕು ಹಸನಗೊಳಿಸಲು ಸಾದ್ಯವಾಗಲಿಲ್ಲ ಎಂದು ವಿಷಾದವನ್ನು ವ್ಯಕ್ತಪಡಿಸುತ್ತಾ ಮನುಷ್ಯ ಸತ್ತರೆ ಮಣ್ಣಿನಲ್ಲಿ ಹೂತುಹಾಕಿದರೆ ಜೀವನ ಕೊನೆಯಾಗುತ್ತದೆ. ಅದರೆ ಮಣ್ಣು ಸತ್ತರೆ ಮನುಕುಲವೆ ಕೊನೆಯಾಗಲಿದೆ ಎಂದ ಅವರು ಆದಷ್ಟು ರೈತರು ಸಾವಯವ ಕೃಷಿಗೆ ಒತ್ತು ನೀಡಿ ಪ್ರತಿಯೊಬ್ಬರು ಊಟ ಮಾಡುವ ಮುನ್ನ ಅನ್ನದಾತರವನ್ನು ಸ್ಮರಿಸಿ ಎಂದರು.
ಕೃಷಿ ಇಲಾಖೆಯ ಸಹಾಯಕ ನರ್ದೇಶಕ ಮಂಜುನಾಥ್ ಮಾತನಾಡಿ ರೈತರು ಕೃಷಿ ಮತ್ತು ಇತರೆ ಇಲಾಖೆಗಳಿಂದ ಸಿಗುವ ಸವಲತ್ತುಗಳನ್ನು ಬಳಿಸಿಕೊಂಡು ರ್ಥಿಕವಾಗಿ ಮುಂದೆ ಬರಬೇಕು ಕಡಿಮೆ ನೀರು ಬಳಿಸಿ ವಿಜ್ಞಾನಿಗಳ ಸಲಹೆಯಂತೆ ಕೃಷಿಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬೇಸಾಯ ಮಾಡಿ ರ್ಥಿಕವಾಗಿ ರೈತರು ಮುಂದೆ ಬರಬೇಕು ರೈತ ದಿನಾಚರಣೆ ಮಹತ್ವ ಹಾಗೂ ದಿನಾಚರಣೆಯನ್ನು ಆಚರಿಸುವ ಹಿನ್ನಲೆಯನ್ನು ಕುರಿತು ಮಾಹಿತಿ ನೀಡಿದರು ರೈತರು ತಮ್ಮ ಕೃಷಿ ಆದಾಯವನ್ನು ದ್ವಿಗುಣಗೊಳಿಸಲು ವಿವಿಧ ಬೆಳೆ ಹಾಗೂ ಇತರೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉತ್ತಮ ಅಧಿಕ ಇಳುವರಿ ಪಡೆದುಕೊಂಡು ನೇರ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಸಿಕೊಂಡು ಹೆಚ್ಚು ಲಾಭಗಳಿಸಬೇಕೆಂದು ಕರೆ ನೀಡಿದ ಇವರು ನಮ್ಮ ಇಲಾಖೆಯಿಂದ ಯಾವುದೆ ಸೌಲಭ್ಯಗಳ ಬಗ್ಗೆ ಮಾಹಿತಿ ತಿಳಿಯಬೇಕಾದರೆ ನೇರವಾಗಿ ನಮ್ಮ ಇಲಾಖೆಯನ್ನು ಸಂರ್ಕಿಸಿ ಯಾವುದೇ ಪಕ್ಷಪಾತವಿಲ್ಲದೆ ಈ ತಾಲ್ಲೂಕಿನ ಕಟ್ಟೆಕಡೆಯ ರೈತರಿಗೂ ಸೌಲಭ್ಯ ಸಿಗುವಂತೆ ಪ್ರಮಾಣೀಕವಾಗಿ ಕೆಲಸ ಮಾಡುತ್ತೇನೆ. ರೈತರ ಸಮಸ್ಯೆ ಯಾವುದೆ ಇದ್ದರೂ ತಿಳಿಸಿ ನಾನು ಪರಿಹರಿಸುತ್ತೇನೆಂದು ತಿಳಿಸಿದರು.
ಅತ್ಮ ಯೋಜನೆಯಡಿಯಲ್ಲಿ ಉತ್ತಮ ಸಾದನೆಗೈದ ೫ ಮಂದಿ ರೈತರನ್ನು ತಾಲ್ಲೂಕು ಮಟ್ಟ ಶ್ರೇಷ್ಟ ಕೃಷಿಕ ಎಂದು ಪರಿಗಣಿಸಿ, ಗೌರವಿಸಿ ಸನ್ಮಾನಿಸಲಾಯಿತು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನರ್ದೇಶಕ ಎಂ. ಶ್ರೀನಿವಾಸನ್, ರೈತ ಸಂಘ ಹಸಿರುಸೇನೆಯ ಜಿಲ್ಲಾ ಕಾರ್ಯದರ್ಶಿ ಯಲವಕುಂಟೆ ಬೈರಾರೆಡ್ಡಿ, ರೈತಸೇನೆಯ ಜಿಲ್ಲಾಧ್ಯಕ್ಷ ಚಲ್ದಿಗಾನಹಳ್ಳಿ ಸಿ.ವಿ. ಪ್ರಭಾಕರಗೌಡ, ಹಸಿರುಸೇನೆಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಖಜಾಂಚಿ ಎಂ. ಶ್ರೀಧರ್, ಕೆಪಿಆರ್ಎಸ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಕೃಷಿ ಇಲಾಖೆ ಅಧಿಕಾರಿಗಳಾದ ಈಶ್ವರ್, ರಘು, ಸುರೇಶ್, ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಹರೀಶ್, ರಾಜೇಶ್, ಹಾಗೂ ಕಛೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.