ಶ್ರೀನಿವಾಸಪುರ, ಜೀವನವೆಂದ ಮೇಲೆ ಸುಖ, ಕಷ್ಟ, ರೋಗರುಜಿನಗಳು ಇದ್ದೇ ಇರುತ್ತವೆ . ರೋಗಗಳು ಬಾಧಿಸಲು ಆರಂಭಿಸಿದಾಗ ಔಷಧವನ್ನು ಪರಮಶತ್ರುವಿನಂತೆ ಕಾಣುವ ಅದೆಷ್ಟೋ ಜನರಿರುತ್ತಾರೆ. ಇದಲ್ಲದೆ ಗ್ರಾಮೀಣ ಭಾಗದಲ್ಲಿ ಕೆಲವರು ಆಸ್ಪತ್ರೆಯನ್ನು ಸಹ ಪರಮಶತ್ರುವಿನಂತೆ ಕಾಣುವಂತವರು ಇದ್ದಾರೆ.
ಗ್ರಾಮೀಣ ಭಾಗದ ನಾಗರೀಕರಲ್ಲಿ ಆಸ್ಪತ್ರೆ ಎಂದರೆ ಇಂಜಕ್ಷನ್ ಕೊಡುವಂತಹ, ಆಪರೇಷನ್ ಮಾಡುವಂತಹ ಸ್ಥಳ ಎಂಬ ಭಯದ ವಾತವರಣ ಹಾಗು ಆಸ್ಪತ್ರೆಗೆ ಹೋದರೆ ಇಲ್ಲಸಲ್ಲದ ಪರೀಕ್ಷೆಗಳನ್ನು ಮಾಡಿ ಮಾನಸಿಕವಾಗಿ ಹಿಂಸೆಯಾಗುತ್ತದೆ ಹಾಗು ಜೇಬು ಖಾಲಿಯಾಗುತ್ತದೆ ಎನ್ನುವಂತಹ ಜನರು ಗ್ರಾಮೀಣ ಭಾಗದಲ್ಲಿದ್ದು, ಇನ್ನು ಕೆಲವರು ಆಕಸ್ಮಿಕವಾಗಿ ಖಾಯಿಲೆ ಬಂದರೆ ಹಳ್ಳಿಗಳಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೆ , ನಗರ ಪ್ರದೇಶಕ್ಕೆ ಹೋಗಲು ಸಾಧ್ಯವಾಗದೆ ಖಾಯಿಲೆಯಿಂದ ಬಳಲುವ ಜನರಿದ್ದಾರೆ.
ಇಂತಹ ಸಮಯದಲ್ಲಿ ರಾಯಲ್ಪಾಡು ಹೋಬಳಿಯ ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ನೂರಾರು ಜನ ಬಂದು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ರೋಗಿಗೆ ಚಿಕಿತ್ಸೆಯ ಜೊತೆಗೆ ಮಾನಸ್ಸಿಗೆ ನೆಮ್ಮದಿ ನೀಡುವಂತಹ ಅತ್ಯುತ್ತಮ ಪರಿಸರವು ಆವರಣದಲ್ಲಿ ಸೃಷ್ಟಿಯಾಗಿದೆ. ಉತ್ತಮ ವಾತವರಣವು ಸೃಷ್ಟಿಯಾಗಲು ಸ್ಥಳೀಯ ಆರೋಗ್ಯಕೇಂದ್ರ ಸಿಬ್ಬಂದಿಯು ಮನಸವಾಚ ಕರ‍್ಯನರ‍್ವಹಿಸುತ್ತಿದೆ.
ಇನ್ನು ವೈದ್ಯರು “ವೈದ್ಯೋ ನಾರಾಯಣ ಹರಿಃ” ಎಂಬಂತೆ ವೈದ್ಯರು ಆರೋಗ್ಯ ಕೇಂದ್ರಕ್ಕೆ ಬರುವ ಅನಾರೋಗ್ಯವಂತರಿಗೆ ಅಕ್ಕರೆಯಿಂದ ಉತ್ತಮ ಚಿಕಿತ್ಸೆಯನ್ನು ನೀಡುತ್ತಾ , ರೋಗಿಯ ಸಮಸ್ಯೆಯನ್ನು ಆಲಿಸಿ , ಪರಿಶೀಲಿಸಿ ಸಮಸ್ಯೆಗೆ ತಕ್ಕಂತೆ ಕಡಿಮೆ ವೆಚ್ಚದ ಪರಿಹಾರದ ಚಿಕಿತ್ಸೆಯನ್ನು ನೀಡುತ್ತಾ , ಈ ಭಾಗದ ನಾಗರೀಕರೆಲ್ಲರ ಮನೆಮಾತಾಗಿದ್ದಾರೆ.
ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ೧೫೦ ಕ್ಕಿಂತ ಹೆಚ್ಚು ನಾಗರೀಕರು ತಪಾಸಣೆಗಾಗಿ ಬರುತ್ತಾರೆ, ತಿಂಗಳಲ್ಲಿ ೧೦ ಹೆರಿಗೆಗಳು ನಡೆಯುತ್ತವೆ. ರಾಯಲ್ಪಾಡು ಹೋಬಳಿಯಿಂದ ಅಲ್ಲದೆ, ತಾಲೂಕಿನ ಹಾಗೂ ನೆರೆಯ ಆಂದ್ರಪ್ರದೇಶದಿಂದಲೂ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಾ, ಗುಣಹೊಂದಿರುತ್ತಾರೆ.
ಗ್ರಾಮೀಣ ಭಾಗದಲ್ಲಿನ ರ‍್ಕಾರಿ ಆರೋಗ್ಯ ಕೇಂದ್ರವು ನಾಗರೀಕರಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ಕೊಡುತ್ತಿರುವುದ ಬಗ್ಗೆ ಮಾಹಿತಿ ಪಡೆದು ಈ ಕೇಂದ್ರಕ್ಕೆ ಕಳೆದ ಐದು ರ‍್ಷಗಳ ಹಿಂದೆ ಇಂಡೋಚೈನಾ ದೇಶದ ಪ್ರೆಂಡ್‌ಶಿಫ್ ಆಸೋಸಿಯೇಷನ್ ನಿಂದ ಚೈನಾ ದೇಶ ೩೦ ವೈದ್ಯರು ಬೇಟಿ ಮಾಡಿದ್ದರು, ಅಲ್ಲದೆ ೪ ರ‍್ಷ ಹಿಂದೆ ಮೋದಿ ಕೇರ್ ಸಹಯೋಗದಲ್ಲಿ ಯುಎಸ್ ವರಧಿಗಾರರು ಬೇಟಿ ಮಾಡಿದ್ದರು ಎಂದು ಆರೋಗ್ಯ ಕೇಂದ್ರದ ವೈದ್ಯೆ ಕೆ.ಆರ್.ಕವಿತಾ ಮಾಹಿತಿ ನೀಡಿದರು.
ಸಾಮಾನ್ಯವಾಗಿ ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೊರತೆ ಎದ್ದು ಕಾಣುತ್ತದೆ ಆದರೆ ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾತ್ರ ವೈದ್ಯರು ಸಾದಾ ಸರ‍್ವಜನಿಕರ ಸೇವೆಯಲ್ಲಿ ನಿರತರಾಗಿರುತ್ತಾರೆ ಎಂಬ ಮಾತು ಈ ಭಾಗದ ನಾಗರೀಕರಲ್ಲಿ ಕೇಳಿಬುರುತ್ತದೆ.
ಸಾಮಾನ್ಯವಾಗಿ ನವಂಬರ್, ಡಿಸಂಬರ್, ಜನವರಿ ತಿಂಗಳಲ್ಲಿ ಶೀತಗಾಳಿ, ಚಳಿಯ ವಾತವರಣದಿಂದ ನೆಗಡಿ, ಕೆಮ್ಮ, ಜ್ವರ, ಆಸ್ತಮ, ದರ‍್ಘಾವಾದಿ ರೋಗಗಳು ಹಾಗೂ ಇತರೆ ಹೃದಯಾಘಾತಗಳು ನಡೆಯುತ್ತವೆ.
ಅಲ್ಲದೆ ಈ ಭಾರಿ ಮಾಂಡೌಸ್ ಚಂಡಮಾರುತದಿಂದ ಶೀತಗಾಳಿ, ಚಳಿ ಹೆಚ್ಚಾಗಿರುವುದರಿಂದ , ಚಿಕ್ಕಮಕ್ಕಳಿಂದ ಹಿಡಿದು ಹಿರಿಯರವರೆಗೂ ಆರೋಗ್ಯ ಸಮಸ್ಯೆಯಿಂದ ಪಾರಾಗುವುದಕ್ಕೆ ದೇಹವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಚ್ಚಗಿಡಬೇಕು. ಇದಕ್ಕಾಗಿ ವ್ಯಾಯಮ ಮಾಡುವುದು, ಬಿಸಿ ನೀರು ಕುಡಿಯುವುದು ಸ್ವಲ್ಪ ಮಟ್ಟಿಗೆ ಸಮಸ್ಯೆ ಕಡಿಮೆಯಾಗಬಹುದು. ಆಸ್ತಮ ದಂತಹ ದರ‍್ಘಾವಾದಿ ಕಾಯಿಲೆಗಳಿಂದ ನರಳುತ್ತಿರುವವರು ವೈದ್ಯರ ಸಲಹೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಡಾ|| ಕೆ.ಆರ್.ಕವಿತ ವೈದ್ಯಾಧಿಕಾರಿ , ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರ.
ಆರೋಗ್ಯ ಕೇಂದ್ರದಲ್ಲಿ ಒಟ್ಟು ೧೬ ಕೊಠಡಿಗಳು ಇದ್ದು, ಮೆಡಿಕಲ್ ಆಫೀಸರ್ ಸೇರಿ ಸಿಬ್ಬಂದಿ ಎಲ್ಲಾರೀತಿಯ ೧೫ ಇದ್ದು, ಇದರಲ್ಲಿ ಶುಶ್ರೂಷಕಿಯರು ೩, ಎನ್‌ಎಂಎಸ್ ೨ , ಸಿಎಚ್‌ಒ -೨, ಪಿಎಚ್‌ಸಿಒ -೨, ಎಚ್‌ಐಒ-೨, ರ‍್ಸ್ಸಿಂಗ್ ಆಫೀರ‍್ಸ್-೩, ಗ್ರೂಪ್‌ಡಿ-೨, ಲ್ಯಾಬ್ ಟೆಕ್‌ನೀಷನ್-೧, ಫಾರಮಾಸಿ ಆಫೀಸರ್ -೧ ಡಿಂಕ್ ಆಪರೇಟರ್-೧ ಹಾಗೂ ೧೩ ಆಶಾ ಕರ‍್ಯರ‍್ತೆಯರು ಕರ‍್ಯನರ‍್ವಹಿಸುತ್ತಿದ್ದಾರೆ. ರಾತ್ರಿ ಪಾಲಯದಲ್ಲಿ ಒಬ್ಬರು ರ‍್ಸ್ ಹಾಗೂ ಒಬ್ಬರು ಡಿ ಗ್ರೂಪ್ ನೌಕರ ಕೆಲಸ ನರ‍್ವಹಿಸುತ್ತಾರೆ.
ಈ ಆರೋಗ್ಯ ಕೇಂದ್ರದಲ್ಲಿ ಸಿಗುವಂತಹ ಸೌಲಭ್ಯಗಳು .ತರ‍್ತು ಚಿಕಿತ್ಸಾ ವಿಭಾಗ, ವೈದ್ಯಕೀಯ ವಿಭಾಗ, ಶಸ್ತರ್ ಚಿಕಿತ್ಸೆ, ಪ್ರಸೂತಿ ಮತ್ತು ಸ್ತಿರೀರೋಗ ಚಿಕಿತ್ಸೆ, ಡ್ರೆಸ್ಸಿಂಗ್, ಚುಚ್ಚುಮದ್ದು, ಹೋರರೋಗಿ ವಿಭಾಗ, ತಾಯಿ ಆರೋಗ್ಯ , ನವಜಾತ ಶಿಶು ಆರೈಕೆ, ಮಕ್ಕಳ ಆರೋಗ್ಯ , ಹದಿಹರೆಯದವರ ಚಿಕಿತ್ಸೆ, ಪ್ರಯೋಗಾಲಯ ಸೇವೆ ಇದೆ . ಅಲ್ಲದೆ ಉತ್ತಮ ಪರಿಸರದ ವಾತವರಣದೊಂದಿಗೆ , ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿದೆ.