ಶ್ರೀನಿವಾಸಪುರ : ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯುತ್ತಿದ್ದು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗುಂಡು ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ಸರ್ಕಾರದ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳವಂತೆ ಗ್ರೇಡ್ -೨ ತಹಶೀಲ್ದಾರ್ ಕೆ.ಎಲ್ .ಜಯರಾಮ್ ಸೂಚಿಸಿದರು.
ತಾಲೂಕಿನ ಮುತ್ತಕಪಲ್ಲಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಟಕನ್ನಸಂದ್ರ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದರು
ಇಲಾಖೆಗಳಿಗೆ ಸಂಬAದಿಸಿದ ಅಧಿಕಾರಿಗಳು ಸರ್ಕಾರ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕಿದೆ ಎಂದರು. ಯಾವುದೇ ರೀತಿಯ ದುರಪಯೋಗವಾಗುವಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.
ಗ್ರಾಮದಲ್ಲಿ ೧೧೦ ಮನೆಗಳು ಇದ್ದು, ೩೯೯ ಜನಸಂಖ್ಯೆ ಇದ್ದು, ಗ್ರಾಮದಲ್ಲಿ ಶುದ್ದನೀರಿನ ಘಟಕ , ಚರಂಡಿ, ರಸ್ತೆಗಳು, ವ್ಯವಸ್ಥಿತವಾಗಿಲ್ಲದ ಕಾರಣ ಮುಂದಿನ ದಿನಗಳಲ್ಲಿ ಸಂಬAದಪಟ್ಟ ಇಲಾಖೆ ವತಿಯಿಂದ ಅತಿಶೀಘ್ರವಾಗಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು .ಹಾಗೂ ಟ್ರಾನ್ಸ್ಫಾರಂ ಶಿಥಿಲವಾಗಿರುವ ಕೆಇಬಿ ಇಲಾಖೆಗೆ ಮಾಹಿತಿ ನೀಡಿ ಸರಿಪಡಿಸಲಾಗುವುದು. ೯೦ ಜನ ಸರ್ಕಾರದಿಂದ ಮಾಶಾಸನವನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮು ಇಲಾಖೆಯಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಉಪತಹಶೀಲ್ದಾರ್ ಬಲರಾಮಚಂದ್ರೆಗೌಡ, ಗ್ರಾ.ಪಂ.ಅಧ್ಯಕ್ಷೆ ರಜನಿರಮೇಶ್, ಉಪಾಧ್ಯಕ್ಷ ಸತೀಶ್, ಪಿಡಿಒ ಚನ್ನಪ್ಪ, ಆರ್‌ಐ ವಿನೋದ್, ವಿಎ ಸ್ವಾಮಿಬಂಡಾರಿ, ರೇಷ್ಮೆ ಇಲಾಖೆ ಅಧಿಕಾರಿ ಶ್ರೀನಿವಾಸ್, ಕೃಷಿ ಇಲಾಖೆ ಅಧಿಕಾರಿ ನಾಗಾರ್ಜುನಬಾಬು, ತಾಲೂಕು ಸವೇಯರ್ ವಿರೂಪಾಕ್ಷಪ್ಪ, ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯ ಮೇಘಶ್ಯಾಮ್, ಗ್ರಾ.ಪಂ.ಮಾಜಿ ಅಧ್ಯಕ್ಷ ಕಾರಂಗಿ ರಮೇಶ್ ಹಾಗು ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗುಂಡಿದ್ದರು.