ಕೋಲಾರ, , ಜಿಲ್ಲಾದ್ಯಂತ ಕೆರೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಿ ಒತ್ತುವರಿದಾರರ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಬೇಕೆಂದು ರೈತ ಸಂಘದಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು
ಭೂ ಕಬಳಿಕೆ ಹಾಗೂ ಮಾನ್ಯ ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಾಗಿರುವ ಕೆರೆ ಒತ್ತುವರಿಗಳ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಕಂದಾಯ ರ‍್ವೆ ಅಧಿಕಾರಿಗಳು ನೆಪ ಮಾತ್ರಕ್ಕೆ ಜೆ.ಸಿ.ಬಿ ಮುಂದೆ ಪೋಟೋ ತೆಗೆದುಕೊಂಡು ಆ ನಂತರ ತೆರವುಗೊಳಿಸದೇ ಒತ್ತುವರಿದಾರರ ಜೊತೆ ಶಾಮೀಲಾಗುವ ಮುಖಾಂತರ ಕೆರೆಗಳ ಮರಣ ಶಾಸನವನ್ನು ಅಧಿಕಾರಿಗಳೇ ಬರೆಯುತ್ತಿದ್ದಾರೆಂದು ರೈತ ಸಂಘದ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ ಜಿಲ್ಲಾಧಿಕಾರಿಗಳಿಗೆ ಅಧಿಕಾರಿಗಳ ವಿರುದ್ದ ದೂರು ನೀಡಿದರು.
೨೮೦೦ ಕೆರೆಗಳಿರುವ ಕೋಲಾರ ಜಿಲ್ಲೆಯ ಬಹುತೇಕ ಕೆರೆಗಳು ಪ್ರಭಾವಿ ರಾಜಕಾರಣಿಗಳು ಹಾಗೂ ಕೆಲವು ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಮನೆಗಳು ಹಾಗೂ ಕೃಷಿ ಭೂಮಿಯನ್ನಾಗಿ ಪರಿರ‍್ತನೆ ಮಾಡಿಕೊಂಡು ಹತ್ತಾರು ಹಳ್ಳಿಯ ಜೀವನಾಡಿಯಾಗಿರುವ ಕೆರೆಗಳನ್ನು ಸುಮಾರು ಜನರು ಒತ್ತುವರಿ ಮಾಡಿಕೊಂಡು ಕೆರೆ ರ‍್ವನಾಶ ಮಾಡುತ್ತಿದ್ದರೂ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವಲ್ಲಿ ರ‍್ಕಾರ ಹಾಗೂ ಜಿಲ್ಲಾಡಳಿತ ವಿಫಲವಾಗಿರುವುದಕ್ಕೆ ಇತ್ತೀಚೆಗೆ ಸುರಿಯುತ್ತಿರುವ ಮಳೆ ನೀರು ಸರಾಗವಾಗಿ ಕೆರೆಗಳಿಗೆ ಹರಿಯದೆ ರೈತರ ತೋಟಗಳು ಮತ್ತು ಬಡವರ ಮನೆಗಳಿಗೆ ನುಗ್ಗಿ ಅವಾಂತರಗಳು ಸೃಷ್ಟಿ ಮಾಡುತ್ತಿದ್ದರೂ ಒತ್ತುವರಿದಾರರ ವಿರುದ್ದ ಕ್ರಮಕೈಗೊಳ್ಳುವಲ್ಲಿ ಕಂದಾಯ ರ‍್ವೆ ಅಧಿಕಾರಿಗಳು ವಿಫಲವಾಗಿ ಬಡವರ ಬದುಕನ್ನು ಕಸಿಯುತ್ತಿದ್ದಾರೆಂದು ಆಕ್ರೋಷ ವ್ಯಕ್ತಪಡಿಸಿದರು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಮಾತನಾಡಿ ಬ್ರಿಟೀಷರ ಕಾಲದ ಕೆಲವು ಅಕ್ರಮ ನಕಲಿ ದಾಖಲೆಗಳನ್ನು ಇಟ್ಟುಕೊಂಡು ಕೆರೆ ಸ್ವರೂಪದ ಕಳೆದುಕೊಂಡಿದೆ ಎಂದು ಕೆಲವು ಭೂಗಳ್ಳರು ಹಾಗೂ ರಿಯಲ್ ಎಸ್ಟೇಟ್ ಉದ್ದಿಮೆಗಳು ಕೆರೆ ರಾಜಕಾಲುವೆಗಳನ್ನು ಕಬಳಿಸಲು ಸಂಬಂಧಪಟ್ಟ ಆಯಾ ವ್ಯಾಪ್ತಿಯ ಕಂದಾಯ ರ‍್ವೆ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿರುವುದು ದುರಾದೃಷ್ಟಕರ ವಿಚಾರವಾಗಿದೆ ಎಂದು ಅಸಮದಾನ ವ್ಯಕ್ತಪಡಿಸಿದರು.
ಕೆರೆ ರಾಜಕಾಲುವೆ ಒತ್ತುವರಿ ಪ್ರಶ್ನೆ ಮಾಡುವವರ ವಿರುದ್ದ ಕೊಲೆ ಬೆದರಿಕೆ ಹಾಗೂ ಹಣದ ಆರೋಪ ಹೊರೆಸುವ ಮುಖಾಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟು ನಿಮ್ಮನ್ನು ಪ್ರಾಣ ಸಹಿತ ಉಳಿಸುವುದಿಲ್ಲವೆಂಬ ಬೆದರಿಕೆಗಳು ಕೆರೆ ಉಳಿಸುವ ವ್ಯಕ್ತಿಗಳಿಗೆ ಬರುತ್ತಿವೆ. ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಸಹ ಜಿಲ್ಲಾಡಳಿತ ಕೆರೆ ರಾಜಕಾಲುವೆ ಒತ್ತುವರಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲು ರಾಜಕೀಯ ವ್ಯಕ್ತಿಗಳ ಒತ್ತಡೇ ಇಲ್ಲವೇ ಕೆರೆ ರಾಜಕಾಲುವೆ, ಜಿಲ್ಲಾಡಳಿತಕ್ಕೆ ಸಂಬಂಧ ಇಲ್ಲವೆ ಎಂಬುದು ರ‍್ಥವಾಗದ ವಿಚಾರವಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಒಂದುವಾರದೊಳಗೆ ಹತ್ತಾರು ಹಳ್ಳಿಗಳ ಜೀವನಾಡಿಯಾಗಿರುವ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲು ವಿಶೇಷ ಕಂದಾಯ ರ‍್ವೆ ಅಧಿಕಾರಿಗಳ ತಂಡ ರಚನೆ ಮಾಡಿ ಒತ್ತುವರಿದಾರರ ವಿರುದ್ದ ಮುಲಾಜು ಇಲ್ಲದೆ ಕೇಸು ದಾಖಲಿಸಿ ರ‍್ಕಾರಿ ಆಸ್ತಿಗಳನ್ನು ಉಳಿಸದೇ ಹೋದರೆ ಕೋಲಾರ ಜಿಲ್ಲೆಗೆ ಬರುತ್ತಿರುವ ಲೋಕಾಯುಕ್ತ ನ್ಯಾಯಾದೀಶರಿಗೆ ದಾಖಲೆಗಳ ಸಮೇತ ದೂರು ನೀಡುವ ಎಚ್ಚರಿಕೆಯೊಂದಿಗೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮಾನ್ಯ ಜಿಲ್ಲಾಧಿಕಾರಿಗಳು ೬ ತಾಲ್ಲೂಕು ಕಂದಾಯ ಅಧಿಕಾರಿಗಳ ಸಭೆ ಕರೆದು ಕೆರೆ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸುವಂತೆ ಆದೇಶ ಮಾಡುವ ಜೊತೆಗೆ ಯಾವುದೇ ಕಾರಣಕ್ಕೂ ಕೆರೆ ಒತ್ತುವರಿಯಿಂದ ಹಿಂದೆ ಸರಿಯುವ ಪ್ರಶ್ನೇಯ ಇಲ್ಲ. ಒತ್ತುವರಿ ದಾರರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡುವ ಬರವಸೆಯನ್ನು ನೀಡಿದರು.
ಮನವಿ ನೀಡುವಾಗ ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ, ಜಿಲ್ಲಾ ಕರ‍್ಯಾಧ್ಯಕ್ಷ ವಕ್ಕಲೇರಿಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ರಾಜ್ಯ ಕರ‍್ಯರ‍್ಶಿ ಬಂಗಾರಿ ಮಂಜು, ರಾಜ್ಯ ಪ್ರಧಾನ ಕರ‍್ಯರ‍್ಶಿ ಪಾರುಕ್‌ಪಾಷ, ಶೈಲ, ಮುನಿಯಮ್ಮ, , ರತ್ನಮ್ಮ, ರಾಧ, ಶೋಭ, ಚಂದ್ರಪ್ಪ, ಗಿರೀಶ್, ಸಂದೀಪ್‌ರೆಡ್ಡಿ, ಸಂದೀಪ್‌ಗೌಡ, ರಾಮಸಾಗರ ವೇಣು, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ, ಜಿಲ್ಲಾ ಉಪಾಧ್ಯಕ್ಷ ಮಾಸ್ತಿ ವೆಂಕಟೇಶ್ ಮುಂತಾದವರು ಇದ್ದರು.