ಶ್ರೀನಿವಾಸಪುರ ತಾಲೂಕಿ ನಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಿಂಚಿನoತೆ ಬಂದು ಮರೆಯಾದ ಎಸ್ ಎಲ್ ಎನ್ ಮಂಜುನಾಥ್ ಈ ಬಾರಿ ಸ್ವಯಂಘೋಷಿತ ಅಭ್ಯರ್ಥಿಯಂತೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ಅತ್ಯಂತ ಯುವಕರ ಗುಂಪನ್ನು ಕಟ್ಟಿಕೊಂಡು ಓಡಾಡುತ್ತಿದ್ದಾರೆ ಇದರಿಂದ ಏನು ಪ್ರಯೋಜನವಾಗುವುದಿಲ್ಲ ಎಂದು ಕೆಲವು ಹಿರಿಯರ ಅಭಿಪ್ರಾಯ.
ಬಿಜೆಪಿ ಪಕ್ಷವನ್ನು ಹಲವಾರು ವರ್ಷಗಳಿಂದ ಶ್ರೀನಿವಾಸಪುರ ತಾಲೂಕಿನಲ್ಲಿ ಕಟ್ಟಿಕೊಂಡು ಬರುತ್ತಿರುವ ಬಿಜೆಪಿ ಮುಖಂಡರು ತಮ್ಮ ಹಾವೇದನೆಯನ್ನು ಹೊರ ಹಾಕಿದ್ದಾರೆ.
ಕೊರೆನಾ ಸಂದರ್ಭ ದಲ್ಲಿಯೂ ಕಾಣಿಸಲಿಲ್ಲ ಈ ಸಮಾಜ ಸೇವಕ ಬಿಜೆಪಿ ಪಕ್ಷಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಯ ಪರವಾಗಿಯೂ ಮತಯಾಚನೆ ಮಾಡಲಿಲ್ಲ ಲೋಕಸಭೆ ಚುನಾವಣೆಯ ವೇಳೆಯಲ್ಲಿಯೂ ಲೋಕಸಭಾ ಅಭ್ಯರ್ಥಿಯ ಪರ ಮತಯಾಚನೆ ಮಾಡದ ಈ ಎಸ್ ಎಲ್ ಎನ್ ಮಂಜುನಾಥ್ ರವರು ಕನಿಷ್ಠ ಗ್ರಾಮ ಪಂಚಾಯಿತಿ ಸದಸ್ಯರ ಚುನಾವಣೆಯ ಸಂದರ್ಭದಲ್ಲಿ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನ ಪರವಾಗಿಯೂ ಬಿಜೆಪಿ ಪಕ್ಷದ ವತಿಯಿಂದ ಮತಯಾಚನೆ ಮಾಡದೆ ಇದ್ದು ಈಗ ದಿಡೀರ್ ಪ್ರತ್ಯಕ್ಷವಾಗಿರುವುದು ಕಾಕತಾಳಿಯವಾಗಿದೆ.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭಿವೃದ್ಧಿಗೆ ಶ್ರಮಿಸದೆ ಇರುವ ಈ ವ್ಯಕ್ತಿಯು ಇತ್ತೀಚೆಗೆ ದಿಢೀರ್ ಪ್ರತ್ಯಕ್ಷವಾಗಿ ಸ್ವಯಂಘೋಷಿತ ಅಭ್ಯರ್ಥಿಯಾಗಿ ಬಿಜೆಪಿ ಪಕ್ಷವನ್ನು ಬಳಸುತ್ತ ತಮ್ಮ ಸ್ವಯಂ ಲಾಭಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಸಮಾಜ ಸೇವಕನೆಂದು ಹೇಳಿಕೊಳ್ಳುವ ಈ ವ್ಯಕ್ತಿಯು ಕೊರೆನಾ ಎರಡು ಬಾರಿ ತಾಲೂಕಿನಲ್ಲಿ ಭೀಕರ ಸಮಸ್ಯೆಗಳನ್ನು ಸೃಷ್ಟಿ ಮಾಡಿತ್ತು ಆ ಸಮಯದಲ್ಲಿ ಈ ಸಮಾಜ ಸೇವಕ ಎಲ್ಲಿ ಅಡಗಿದ್ದರು ಮತ್ತು ತಾಲೂಕಿನಾ ದ್ಯಂತ ಬಿಜೆಪಿ ಕಾರ್ಯಕರ್ತರನ್ನು ಸಹ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಇಂತಹ ವ್ಯಕ್ತಿಯಿಂದ ಪಕ್ಷ ಸಂಘಟನೆ ಸಾಧ್ಯವೇ ಎಂಬುದು ಇಲ್ಲಿ ಎದ್ದು ಕಾಣುತ್ತಿದೆ.
ಕಳೆದ ಬಾರಿ ತಾಲೂಕಿನಲ್ಲಿ ಸುರಿದ ಮಳೆಗಳಿಗೆ ಹಲವಾರು ಗ್ರಾಮಗಳಲ್ಲಿ ಮನೆಗಳು ಜಕ್ಕನ್ಗೊಂಡು, ಕುಸಿತಗೊಂಡು ಬಡಬಗ್ಗರು ಅಲೆದಾಡುವಂತಹ ಪರಿಸ್ಥಿತಿಯಾಯಿತು ಆಗ ಈ ಬಾರಿಯ ಬಿಜೆಪಿ ಸ್ವಯಂಘೋಷಿತ ವಿಧಾನಸಭಾ ಅಭ್ಯರ್ಥಿ ಏನು ಮಾಡುತ್ತಿದ್ದರು ಜನರ ಸಹಕಾರಕ್ಕೆ ಬರಲಿಲ್ಲವೇ ಆಗ ಈ ಶ್ರೀನಿವಾಸಪುರ ಕ್ಷೇತ್ರದ ಜನರು ಕಾಣಲಿಲ್ಲವೇ ಈಗ ಚುನಾವಣೆ ಸಮಯ ಬಂದಿರುವ ಕಾರಣ ದಿಡೀರ್ ಪ್ರತ್ಯಕ್ಷವಾಗಿ ಉರುಪಿನಿಂದ ಓಡಾಡುತ್ತಿರುವುದು ವಿಪರ್ಯಾಸವಾಗಿದೆ.
ಪ್ರತಿ ಗ್ರಾಮಗಳಲ್ಲಿ ತಾಲೂಕಿನ ಅತ್ಯಂತ ಬಿಜೆಪಿ ಪಕ್ಷಕ್ಕೆ ದುಡಿಯುವ ಕಟ್ಟಾಳುಗಳು ಹಲವಾರು ವರ್ಷಗಳಿಂದ ಇದ್ದರು ನಮ್ಮನ್ನು ಗಣನೆಗೆ ತೆಗೆದುಕೊಳ್ಳದೆ ನಮಗೆ ಧೈರ್ಯ ಕೊಟ್ಟು ಬಿಜೆಪಿ ಪಕ್ಷದ ಸಂಘಟನೆಗೆ ನಮ್ಮ ಕೈ ಬಲಪಡಿಸದೆ ಇರುವುದು ಕಾಣಬಹುದು.
ಹಲವಾರು ವರ್ಷಗಳಿಂದ ಇಲ್ಲಿ ಶಾಸಕ ರಮೇಶ್ ಕುಮಾರ್ ರವರು ಹಾಗೂ ಮಾಜಿ ಶಾಸಕ ಜಿಕೆ ವೆಂಕಟಶಿವಾರೆಡ್ಡಿ ರವರನ್ನು ನಾವು ಎದುರು ಹಾಕಿಕೊಂಡು ಬಿಜೆಪಿ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ ಆದರೆ ಈಗ ನಮ್ಮಂತಹ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣನೆ ಮಾಡುತ್ತಿದ್ದಾರೆ.
ಈ ತಾಲೂಕಿನಲ್ಲಿ ಸ್ವಾಮಿ ಮತ್ತು ರೆಡ್ಡಿ ಅವರ ಎದುರಿಗೆ ಬಿಜೆಪಿ ಧ್ವಜವನ್ನು ಹಾರಿಸುವ ದೊಡ್ಡ ಸಾಹಸವನ್ನು ಹಿರಿಯರು ನಾವುಮಾಡಿಕೊಂಡು ಬರುತ್ತಿದ್ದೇವೆ ಆದರೆ ನಮ್ಮನ್ನು ಕೇವಲ ಮಾತಿನಲ್ಲಿಯೂ ಸಹ ಕೇಳುವುದಿಲ್ಲವೇ.
ಎಸ್ ಎಲ್ ಎನ್ ಮಂಜುನಾಥ್ ಹಲವಾರು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ ಆದರೆ ವಿರೋಧಪಕ್ಷದವರಿಗೆ ಮುಂದಿನ ದಿನವೇ ಅವರಿಗೆ ಮಾಹಿತಿ ಸಿಗುತ್ತದೆ ನಾವು ನಿಷ್ಠಾವಂತ ಕಾರ್ಯಕರ್ತರಾಗಿದ್ದರು ನಮಗೆ ಇವರು ಬರುವ ಕೇವಲ ಅರ್ಧ ಗಂಟೆ ಅಥವಾ ಒಂದು ಗಂಟೆಯ ಒಳಗಡೆ ಮಾಹಿತಿ ನೀಡುತ್ತಾರೆ ಫೋನ್ ಮಾಡಿ ಬನ್ನಿ ಎಂದು ಕೇವಲ ನಾಮಕಾವಸ್ಥೆಗೆ ಮಾತ್ರ ನಮ್ಮನ್ನು ಕೇಳುವ ಪರಿ ನೋಡಿದರೆ ಇಂತಹ ನಾಯಕ ಶ್ರೀನಿವಾಸ್‌ಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಗಬೇಕೇ ಎಂದು ತಮ್ಮ ಅಭಿಪ್ರಾಯ ಮುಂದೆ ಇಡುತ್ತಾರೆ.
ಈಗಿನ ಕೆಲ ಯುವಕರು ತಮ್ಮ ಟೈಂಪಾಸ್ ಗಾಗಿ ನಮ್ಮ ಪಕ್ಷದವರನ್ನು ಬಳಸಿಕೊಳ್ಳುತ್ತಾರೆ ಆದರೆ ಚುನಾವಣೆ ಸಂದರ್ಭದಲ್ಲಿ ಸ್ವಾಮಿ ಅಥವಾ ರೆಡ್ಡಿಯ ಪರವಾಗಿ ತಮ್ಮ ಸ್ವಾಮಿನಿಷ್ಠೆಯನ್ನು ತೋರಿಸಿಕೊಂಡು ಬರುವುದು ಇಲ್ಲಿ ಮಾಮೂಲಾಗಿದೆ ಇದನ್ನು ಅರಿತುಕೊಳ್ಳಬೇಕು.
ಇನ್ನು ಎಸ್ ಎಲ್ ಏನ್ ಮಂಜುನಾಥ್ ಅವರ ಪರವಾಗಿ ಈ ಹಿಂದೆ ಓಡಾಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರುಗಳ ಗಮನ ಸೆಳೆದ ಯುವಕರಂತೂ ಈ ಬಾರಿ ಎಸ್ ಎಲ್ ಏನ್ ಮಂಜುನಾಥ್ ಆದ ನೀವು ಸ್ವತಂತ್ರ ಅಭ್ಯರ್ಥಿಯಾಗಿ ನಿಂತರು ಅಥವಾ ಬಿಜೆಪಿ ಪಕ್ಷದ ಪರವಾಗಿ ನಿಂತರು ನಮಗೆ ಯಾವುದೊಂದು ಫೈನಲ್ ಆಗಿ ಹೇಳಿದರೆ ಮಾತ್ರ ನಿಮ್ಮ ಜೊತೆಯಲ್ಲಿ ಇರುತ್ತೇವೆ ಇಲ್ಲದೇ ಹೋದರೆ ನಮ್ಮ ತಾಲೂಕಿನಲ್ಲಿ ನೀವು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ನಮ್ಮ ಬದುಕನ್ನು ಚೆಲ್ಲಾಟ ಮಾಡಬೇಡಿ ಎಂದು ಹೇಳಿರುವ ಯುವಕರ ಗುಂಪುಗಳು ಸಹ ಎಸ್ ಎಲ್ ಎನ್ ಮಂಜುನಾಥ್ ಬಳಿ ಕೇಳಿರುವ ಪ್ರಸಂಗಗಳು ಇವೆ.
ಈ ಎಲ್ಲಾ ಘಟನೆಗಳ ಹಾದಿಯಲ್ಲಿ ಎಸ್ ಎಲ್ ಎನ್ ಮಂಜುನಾಥ್ ಯಾವ ನಿಲುವು ತಾಲೂಕಿನಲ್ಲಿ ತಾಳುತ್ತಾರೋ ಕಾದು ನೋಡಬೇಕಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.
ಈ ಬಾರಿಯೂ ಯುವಕರಿಗೆ ಕೈ ಕೊಟ್ಟು ಹೋಗುತ್ತಾರೆ ಅಥವಾ ಚುನಾವಣೆ ವೇಳೆಗೆ ಮಾಯವಾಗುತ್ತಾ ಶೋ ಮ್ಯಾನ್ಆಗ್ತಾರ?