ಫೆಮೆಕ್ಸ್ (ಪರಿಚಿತ ವ್ಯಾಯಾಮ) ಮತ್ತು ಸಮುದಾಯ ಜಾಗೃತಿ ಕಾರ್ಯಕ್ರಮ

ಕೋಲಾರ, ಕೋಲಾರ ಜಿಲ್ಲೆಯಲ್ಲಿ ಡಿಸೆಂಬರ್ ೦೭ ರಿಂದ ೨೨ ರವರೆಗೆ ಎನ್.ಡಿ.ಆರ್.ಎಫ್ ತಂಡದಿoದ ಫೆಮೆಕ್ಸ್ (ಪರಿಚಿತ ವ್ಯಾಯಾಮ) ಮತ್ತು ಸಮುದಾಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು
ಅಪರ ಜಿಲ್ಲಾಧಿಕಾರಿ ಡಾ|| ಸಿ.ವಿ.ಸ್ನೇಹಾ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಫೆಮೆಕ್ಸ್ (ಪರಿಚಿತ ವ್ಯಾಯಾಮ) ಮತ್ತು ಸಮುದಾಯ ಜಾಗೃತಿ ಕಾರ್ಯಕ್ರಮ ೨೦೨೨-೨೩ ಅನ್ನು ಹಮ್ಮಿಕೊಳ್ಳುವ ಸಂಬoಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಿಸೆಂಬರ್ ೦೮ ರಂದು ಮುಳಬಾಗಿಲು ತಾಲ್ಲೂಕಿನ ತಾಯಲೂರಿನಲ್ಲಿ, ಡಿಸೆಂಬರ್ ೦೯ ರಂದು ಕೋಲಾರ ನಗರಸಭೆ ಆವರಣದ ಸ್ಕೌಟ್ಸ್ ಭವನದಲ್ಲಿ, ಡಿಸೆಂಬರ್ ೧೦ ರಂದು ಶ್ರೀನಿವಾಸಪುರ ತಾಲ್ಲೂಕಿನ ಲಕ್ಷಿö್ಮಪುರ ಸರ್ಕಾರಿ ಪ್ರೌಢ ಶಾಲೆ, ಡಿಸೆಂಬರ್ ೧೨ ರಂದು ಕೋಲಾರ ನೆಹರು ಯುವಕೇಂದ್ರದ ತರಬೇತಿ ಹಾಲ್, ಡಿಸೆಂಬರ್ ೧೩ ರಂದು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ, ಡಿಸೆಂಬರ್ ೧೪ ರಂದು ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕೆ ಪ್ರದೇಶದ ಮೆ|| ಬ್ಯಾಂಡೊ (ಇಂಡಿಯಾ) ಪ್ರೆö.ಲಿ., ನಲ್ಲಿ, ಡಿಸೆಂಬರ್ ೧೫ ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ, ಡಿಸೆಂಬರ್ ೧೬ ರಂದು ಬಂಗಾರಪೇಟೆ ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು, ಡಿಸೆಂಬರ್ ೧೭ ರಂದು ಮಾಲೂರು ತಾಲ್ಲೂಕಿನ ಟೇಕಲ್‌ನಲ್ಲಿ, ಡಿಸೆಂಬರ್ ೧೯ ರಂದು ಬಂಗಾರಪೇಟೆ ತಾಲ್ಲೂಕಿನ ಬಲಮಂದೆ ಗ್ರಾಮ ಪಂಚಾಯಿತಿಯ ಯರಗೋಳ್ ಗ್ರಾಮದಲ್ಲಿ, ಡಿಸೆಂಬರ್ ೨೦ ರಂದು ಕೆ.ಜಿ.ಎಫ್ ತಾಲ್ಲೂಕಿನ ಬೇತಮಂಗಲ/ಕ್ಯಾಸoಬಳ್ಳಿ, ಡಿಸೆಂಬರ್ ೨೧ ರಂದು ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ಮೆ|| ಸೂಪರ್ ಗ್ಯಾಸ್ ಪ್ರೆö.ಲಿ., ಮತ್ತು ಡಿಸೆಂಬರ್ ೨೨ ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕೋಲಾರ ತಹಶೀಲ್ದಾರ್ ನಾಗರಾಜ್, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿದೇಶಕ ಜೈರಾಮರೆಡ್ಡಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದೇಶಕ ರಾಮಚಂದ್ರ, ಅಗ್ನಿಶಾಮಕ ದಳ ಅಧಿಕಾರಿ ರಾಘವೇಂದ್ರ, ಕಾರ್ಖಾನೆಗಳು ಮತ್ತು ಬಾಯ್ಲರ್‌ಗಳ ಇಲಾಖೆಯ ಉಪನಿರ್ದೇಶಕ ನರಸಿಂಹಮೂರ್ತಿ, ಎನ್.ಡಿ.ಆರ್.ಎಫ್‌ನ ಕಮಾಂಡೆoಟ್ ಅಜಯ್‌ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *