ಶ್ರೀನಿವಾಸಪುರ ತಾಲೂಕಿನ ಮಾವು ಬೆಳೆಗಾರರು 2021 ಮತ್ತು 22ರ ವಿಮೆ ಯನ್ನು ಮಾಡಿಸಿದ್ದು ಹೂ ಬಿಡುವ ವೇಳೆಯಲ್ಲಿ ಮಳೆ ಬಂದು ಶೇಕಡ 60ರಷ್ಟು ಭಾಗ ಫಸಲು ನಾಶವಾಗಿದ್ದು ಸ್ವಲ್ಪ ಪ್ರಮಾಣದಲ್ಲಿ ಕಾಯಿ ಕಟ್ಟಿದೆ ಮಚ್ಚೆಗಳು ಅಥವಾ ಅಂತ್ರಾಕ್ಸ ರಿಂದ ಗಿಡದಲ್ಲಿ ಉದುರಿ ಹೋಗಿರುತ್ತದೆ, ಇದರಿಂದ ರೈತರಿಗೆ ಅಪಾರವಾದ ನಷ್ಟವಾಗಿದೆ 90ರಷ್ಟು ರೈತರಿಗೆ ಸಂಪೂರ್ಣ ನಷ್ಟ ಉಂಟು ಆಗಿರುತ್ತದೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ವಿಮಾ ಕಂಪನಿಯ ಅಧಿಕಾರಿಗಳು ಇಬ್ಬರು ಶಾಮೀಲಾಗಿ ರೈತರಿಗೆ ಮೋಸವಾಗಿದೆ ಈ ಬಗ್ಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿರುತ್ತೇವೆ .ರೈತರ ಬಗ್ಗೆ ಯಾರು ಸ್ಪಂದಿಸಿಲ್ಲ ಶ್ರೀನಿವಾಸಪುರ ತಾಲೂಕಿನ ಹಳ್ಳಿ ಸುಮಾರು 6 ಸಾವಿರ ಎಕರೆಗೆ ರೈತರು ಕಟ್ಟಿದ್ದು ಯಾವ ಪಂಚಾಯಿತಿಯಲ್ಲಿ ಕಡಿಮೆ ವಿಮೆ ಕಟ್ಟಿರುತ್ತಾರೆ ಅಲ್ಲಿ ಅಲ್ಪ ಪ್ರಮಾಣದಲ್ಲಿ ಎಂಟು ಪಂಚಾಯತಿಗಳಿಗೆ ಮಾತ್ರ ಹಣವನ್ನು ಹಾಕಿರುತ್ತಾರೆ ಈ ಭಾಗದ ರೈತರಿಗೆ ಮಾತ್ರ ಇನ್ನಷ್ಟು ಉಪಯೋಗವಾಗಿರುತ್ತದೆ ಉಳಿದ 18 ಗ್ರಾಮ ಪಂಚಾಯಿತಿಗಳು ಯಾವುದೇ ರೀತಿಯ ವಿಮೆಯನ್ನು ನೀಡುವುದಿಲ್ಲ ಇದರಿಂದ ರೈತರಿಗೆ ಅಪಾರವಾದ ನಷ್ಟವಾಗಿರುತ್ತದೆ ಈ ಬಗ್ಗೆ ತಾವುಗಳು ಗಮನ ಹರಿಸಿ ನಮ್ಮ ಭಾಗದ ರೈತರಿಗೆ ನಾವು ಬೆಳೆಗಾರರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ರೈತ ಸಂಘ ರಾಜ್ಯ ಉಪಾಧ್ಯಕ್ಷರಾದ ಬೈಚೇಗೌಡ, ಸೇರಿದಂತೆ ಕರ್ನಾಟಕ ರೈತ ಸೇನೆ ಜಿಲ್ಲಾಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಹಲವಾರು ಮುಖಂಡರು ಸೇರಿ ಮನವಿ ಪತ್ರವನ್ನು ಎಚ್ ಡಿ ಕುಮಾರಸ್ವಾಮಿ ರವರಿಗೆ ನೀಡಿದರು