ಅಡ್ಡಗಲ್ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸುಮಾರು 10 ಜನರು ಸೇರ್ಪಡೆಯಾದರು ಸೇರ್ಪಡೆಯಾದ 10 ಜನ ಮುಸ್ಲಿಂ ಬಾಂಧವರು ಕಾಂಗ್ರೆಸ್ ಪಕ್ಷಕ್ಕೆ ಹಗಲಿರಲು ದುಡಿಯುತ್ತಿದ್ದೇವೆ ಸುಮಾರು ಹತ್ತು ವರ್ಷಗಳಿಂದ ಅಧಿಕಾರ ಇರುವ ಇಲ್ಲಿನ ಹಾಲಿ ಶಾಸಕ ಕೆಆರ್ ರಮೇಶ್ ಕುಮಾರ್ ರವರು ನಮಗೆ ಯಾವುದೇ ರೀತಿಯಲ್ಲಿ ಅಭಿವೃದ್ಧಿಗೆ ಸಹಕಾರ ನೀಡಿರುವುದಿಲ್ಲ ನಮ್ಮ ಏಳಿಗೆಗೆ ಸಹಕಾರ ನೀಡಿಲ್ಲ ಆದ್ದರಿಂದ ನಾವು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇವೆ ಎಂದು ಹೇಳಿದ್ದಾರೆ
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಶ್ರೀನಿವಾಸ್ ಪುರ ಕ್ಷೇತ್ರದ ಮಾಜಿ ಶಾಸಕ ಜಿಕೆ ವೆಂಕಟಶಿವಾರೆಡ್ಡಿರವರು ಮಾತನಾಡಿ ನಿಮಗೆ ಎಲ್ಲಾ ರೀತಿಯಲ್ಲಿ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ ಸಮಗ್ರ ಅಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸೋಣ ಶ್ರೀನಿವಾಸಪುರ ಕ್ಷೇತ್ರದ ಅಭಿವೃದ್ಧಿಗೆ ಆಗಲು ಇರಲು ಶ್ರಮಿಸುವೆ ಎಂದು ಆಶಾಭಾವ ವ್ಯಕ್ತಪಡಿಸಿದ್ದರು
ಅಡ್ಡಗಲ್ ಗ್ರಾಮದ ಮುಸ್ಲಿಂ ಕುಟುಂಬ ಅವರಾದ ನಾಸಿಕ್ ಹುಸೇನ್ ,ಸಾಧಿಕ್ ಪಾಶ, ಅಮೀರ್ ಜಾನ್, ಇಲಿಯಾಸ್ ಪಾ ಷಾ, ಮೆಹಬೂಬ್ ಪಾಷಾ, ನೂರ್ ಪಾಷ, ಫೈರೋಜ್ ಪಾಷಾ, ಯಾರು ಸಾಬ್ ಮಗ ಫೈರೋಜ್, ಅಬ್ದುಲ್ ಬಶೀರ್, ಫಯಾಜ್ ಪಾಷಾ, ರವರು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಯುವ ಮುಖಂಡರು ಹಾಗೂ ವಕೀಲರಾದ ಕೆವಿ ಶಿವಾರೆಡ್ಡಿ ಹಾಗೂ ಫುಲ್ ಶಿವಾರೆಡ್ಡಿ ಮತ್ತು ದಿಗುವಪಲ್ಲಿ ನಾಗಭೂಷಣ ಹಾಗೂ ವೆಂಪಲ್ಲಿ ಸುತ್ತಮುತ್ತಲ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು