ಕರ್ನಾಟಕ ರಾಜ್ಯದ ದೇವಮೂಲೆ ಹಾಗೂ ಮೂಡಣ ಬಾಗಿಲು ಎಂದು ಹೆಸರುವಾಸಿಯಾಗಿರುವ ಮುಳಬಾಗಿಲು ಕ್ಷೇತ್ರದಿಂದ ಜೆಡಿಎಸ್ ಪಕ್ಷದ ವತಿಯಿಂದ ಪಂಚರತ್ನ ರಥಯಾತ್ರೆಯು ಇದೆ ನವಂಬರ್ 18ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮುಳಬಾಗಿಲು ಪಟ್ಟಣದ ಹೊರವಲಯದ ಬಾಲಾಜಿ ಭವನದ ಪಕ್ಕದ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶದೊಂದಿಗೆ ಕಾರ್ಯಕ್ರಮವು ಆರಂಭಗೊಳ್ಳಲಿದೆ.
ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ , ಮಾಜಿ ಸಚಿವ ಎಚ್ ಡಿ ರೇವಣ್ಣ ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಕೋಲಾರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಜಿಕೆ ವೆಂಕಟಶಿವಾರೆಡ್ಡಿ ಸೇರಿದಂತೆ ರಾಜ್ಯದ ಹಾಗೂ ಜಿಲ್ಲಾ ಮಟ್ಟದ ಜೆಡಿಎಸ್ ಪದಾಧಿಕಾರಿಗಳು ಮತ್ತು ಮುಖಂಡರು ಹಾಗೂ ಜನಪ್ರತಿನಿಧಿಗಳು ಕಾರ್ಯಕರ್ತರು ಪಾಲ್ಗೊಳ್ಳಲಿದ್ದು ಕಾರ್ಯಕ್ರಮ ಯಶಸ್ವಿಯಾಗಲಿದೆ
ಪಂಚರತ್ನ ರಥಯಾತ್ರೆ ಮೊದಲನೇ ಹಂತ ಪ್ರವಾಸ ಕಾರ್ಯಕ್ರಮ ಎಚ್ ಡಿ ಕುಮಾರಸ್ವಾಮಿ ರವರ ವಿವಿಧ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಇದೆ ತಿಂಗಳ 18ರಂದು ಮುಳಬಾಗಿಲುನಿಂದ ಪ್ರಾರಂಭವಾಗಿ ಡಿಸೆಂಬರ್ 27ನೇ ತಾರೀಖಿನವರೆಗೂ ಜನ ಸಂಪರ್ಕ ಪ್ರವಾಸ ಕಾರ್ಯಕ್ರಮ ನಡೆಯಲಿದೆ
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಲ್ಲಿ ಶುಕ್ರವಾರ 18ನೇ ತಾರೀಕು ಪ್ರಾರಂಭವಾಗಲಿದೆ. ಶನಿವಾರ 19ನೇ ತಾರೀಕು ಬಂಗಾರಪೇಟೆ ಕ್ಷೇತ್ರದಲ್ಲಿ ನಡೆಯಲಿದೆ 20ನೇ ತಾರೀಕು ಭಾನುವಾರ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿದೆ 21ನೇ ತಾರೀಕು ಸೋಮವಾರ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿದೆ 22ನೇ ತಾರೀಕು ಮಂಗಳವಾರ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿದೆ
ಚಿಕ್ಕಬಳ್ಳಾಪುರ ಜಿಲ್ಲೆಯ ಕ್ಷೇತ್ರದಲ್ಲಿ 23 ನೇ ತಾರೀಕು ಬುಧವಾರ ಚಿಂತಾಮಣಿಯಲ್ಲಿ 24 ನೇ ತಾರೀಕು ಗುರುವಾರ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ 25ನೇ ತಾರೀಕು ಶುಕ್ರವಾರ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ 26 ನೇ ತಾರೀಕು ಶನಿವಾರ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 27ನೇ ತಾರೀಕು ಭಾನುವಾರ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಡೆಯಲಿದೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 28 ನೇ ತಾರೀಕು ಸೋಮವಾರ ದೇವನಹಳ್ಳಿ ವಿಧಾನಸಭಾ ಕ್ಷೇತ್ರ 29ನೇ ತಾರೀಕು ಮಂಗಳವಾರ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ 30 ನೇ ತಾರೀಕು ಬುಧವಾರ ನೆಲಮಂಗಲ ವಿಧಾನಸಭಾ ಕ್ಷೇತ್ರ ಗಳಲ್ಲಿ ನಡೆಯಲಿದೆ
ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಡಿಸೆಂಬರ್ 1ನೇ ತಾರೀಕು ಗುರುವಾರ ತುಮಕೂರು ನಗರ, ಡಿಸೆಂಬರ್ 2ನೇ ತಾರೀಕು ಶುಕ್ರವಾರ ಕೊರಟಗೆರೆ ವಿಧಾನಸಭಾ ಕ್ಷೇತ್ರ ಮೂರನೇ ತಾರೀಕು ಡಿಸೆಂಬರ್ ಶನಿವಾರ ಮಧುಗಿರಿ ವಿಧಾನಸಭಾ ಕ್ಷೇತ್ರ 4ನೇ ತಾರೀಕು ಡಿಸೆಂಬರ್ ಭಾನುವಾರ ಪಾವಗಡ ವಿಧಾನಸಭಾ ಕ್ಷೇತ್ರ 5ನೇ ತಾರೀಕು ಡಿಸೆಂಬರ್ ಸೋಮವಾರ ಶಿರಾ ವಿಧಾನಸಭಾ ಕ್ಷೇತ್ರ 6ನೇ ಡಿಸೆಂಬರ್ ಮಂಗಳವಾರ ಗುಬ್ಬಿ ವಿಧಾನಸಭಾ ಕ್ಷೇತ್ರ ಗಳಲ್ಲಿ ಪಂಚರತ್ನ ರಥಯಾತ್ರೆ ಅದ್ದೂರಿಯಾಗಿ ನಡೆಯಲಿದೆ
ಡಿಸೆಂಬರ್ 7 8 9 ಮತ್ತು 10ನೇ ತಾರೀಕು ಈ ನಾಲ್ಕು ದಿನಗಳು ವಿರಾಮವನ್ನ ಪಡೆಯಲಿದೆ ಆನಂತರ ರಾಮನಗರ ಜಿಲ್ಲೆ ವ್ಯಾಪ್ತಿಯ 15 ನೇ ತಾರೀಕು ಗುರುವಾರ ಮಾಗಡಿ ವಿಧಾನಸಭಾ ಕ್ಷೇತ್ರ 16ನೇ ತಾರೀಕು ಶುಕ್ರವಾರ ರಾಮನಗರ ಕ್ಷೇತ್ರ 17 ನೇ ತಾರೀಕು ಶನಿವಾರ 6 ಹಳ್ಳಿ ರಾಮನಗರ ಕ್ಷೇತ್ರ 18ನೇ ತಾರೀಕು ಭಾನುವಾರ ಕನಕಪುರ ವಿಧಾನಸಭಾ ಕ್ಷೇತ್ರ 19 ನೇ ತಾರೀಕು ಸೋಮವಾರ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರ 20 ನೇ ತಾರೀಕು ಮಂಗಳವಾರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ ಮಂಡ್ಯ ಜಿಲ್ಲೆಯಲ್ಲಿ 21ನೇ ತಾರೀಕು ಬುಧವಾರ ಮಳವಳ್ಳಿ ವಿಧಾನಸಭಾ ಕ್ಷೇತ್ರ 22ನೇ ತಾರೀಕು ಗುರುವಾರ ಮದ್ದೂರು ವಿಧಾನಸಭಾ ಕ್ಷೇತ್ರ 23 ನೇ ತಾರೀಕು ಶುಕ್ರವಾರ ಮಂಡ್ಯ ವಿಧಾನಸಭಾ ಕ್ಷೇತ್ರ 24ನೇ ತಾರೀಕು ಶನಿವಾರ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ 25ನೇ ತಾರೀಕು ಭಾನುವಾರ ಪಾಂಡವಪುರ ವಿಧಾನಸಭಾ ಕ್ಷೇತ್ರ 26 ನೇ ತಾರೀಕು ಸೋಮವಾರ ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರ 27ನೇ ತಾರೀಕು ಮಂಗಳವಾರ ನಾಗಮಂಗಲ ವಿಧಾನಸಭಾ ಕ್ಷೇತ್ರ ಗಳಲ್ಲಿ ಪಂಚರತ್ನ ರಥಯಾತ್ರೆಯೂ ನಡೆಯಲಿದೆ
ಪಂಚರತ್ನ ರಥಯಾತ್ರೆ ಮೊದಲನೇ ಹಂತವಾಗಿ 36 ದಿನಗಳ ಕಾಲ ನಡೆಯಲಿದೆ ಮಂಡ್ಯ ಜಿಲ್ಲೆಯಲ್ಲಿ ಏಳು ದಿನ ರಾಮನಗರ ಜಿಲ್ಲೆಯಲ್ಲಿ ಆರು ದಿನ ತುಮಕೂರು ಜಿಲ್ಲೆಯಲ್ಲಿ 10 ದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೂರು ದಿನ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಐದು ದಿನ ಕೋಲಾರ ಜಿಲ್ಲೆಯಲ್ಲಿ ಐದು ದಿನ ಗಳ ಕಾಲ ಪಂಚರತ್ನ ರಥಯಾತ್ರೆಯೂ ನಡೆಯಲಿದೆ