ಕೋಲಾರ: ವಿಧ್ಯಾರ್ಥಿಗಳ ಜೀವನ ಗಿಜಗ ಪಕ್ಷಿ ಕಟ್ಟಿಕೊಳ್ಳವ ಗೂಡಿನಂತೆ ವಿಧ್ಯಾಭ್ಯಾಸದ ಸಂದರ್ಭದಲ್ಲೇ ನಿಮ್ಮ ಭವಿಷ್ಯದ ಗುರಿಯನ್ನು ಸಾಧಿಸದೇ ಹೋದರೆ ಮುಂದೆ ಒಂದು ದಿನ ತಕ್ಕ ಬೆಲೆ ತರಬೇಕಾಗುತ್ತದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ ದೇವರಾಜ್ ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಹೊರವಲಯದ ಸಿ.ಬೈರೇಗೌಡ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬುಧವಾರ ಪ್ರಥಮ ವರ್ಷದ ವಿಧ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಹಾಗೂ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ತಮ್ಮ ತಂದೆ ತಾಯಿಯ ಅಂಗಿನಲ್ಲಿ ಇದ್ದೇವೆ ಎಂಬುದನ್ನು ಮರೆಯಬಾರದು ಮುಂದಿನ ಜೀವನದ ಗುರಿಯ ಜೊತೆಗೆ ಜೀವನದ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಮನುಷ್ಯನ ಜೀವನದಲ್ಲಿ ನಾನೇ ಶ್ರೇಷ್ಠ ಎಂಬುದನ್ನು ಮೊದಲು ತೆಗೆದುಹಾಕಬೇಕು ಇಲ್ಲದೇ ಹೋದರೆ ಅವನ ಜೀನವದ ಅಂತ್ಯದ ದಿನಗಳು ಪ್ರಾರಂಭವಾದoತೆ ವಿಧ್ಯಾರ್ಥಿ ಜೀವನ ಜೀವನದ ದೊಡ್ಡ ಘಟ್ಟವಾಗಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ವಿಧ್ಯಾರ್ಥಿಗಳು ಪಠ್ಯದಲ್ಲಿನ ೧೦೦ಕ್ಕೆ ೧೦೦ ಅಂಕ ಗಳಿಸುವುದೇ ಬುದ್ದಿವಂತಿಕೆಯಲ್ಲ ಪಠ್ಯದಾಜೆಗಿನ ವಿಚಾರಗಳನ್ನು ತಿಳಿದು ಸಾಮಾಜಿಕ ಜವಾಬ್ದಾರಿ ಅರಿಯಬೇಕು ನಿಮ್ಮ ತಂದೆ ತಾಯಿಯ ಕಣ್ಣಲ್ಲಿ ನೀರೂರಿಸದಂತೆ ಕೆಟ್ಟವರ ಸಹವಾಸವನ್ನು ಮಾಡದೇ ಪ್ರಮಾಣಿಕ ಮನುಷ್ಯನಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಿ.ಬೈರೇಗೌಡ ತಾಂತ್ರಿಕ ಮಹಾವಿದ್ಯಾಲಯದ ಕಾರ್ಯದರ್ಶಿ ವಿ.ಕೃಷ್ಣಾರೆಡ್ಡಿ ಮಾತನಾಡಿ ಗ್ರಾಮೀಣ ಪ್ರದೇಶದ ಕೂಲಿ ಮಾಡುವ ಮಕ್ಕಳಿಗಾಗಿ ಸಿ.ಬೈರೇಗೌಡ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು ಮಕ್ಕಳಿಗೆ ಪ್ರತಿಷ್ಠೆಯ ಶಿಕ್ಷಣ ಮುಖ್ಯವಲ್ಲ ಗುಣಾತ್ಮಕ ಶಿಕ್ಷಣದ ಜೊತೆಗೆ ಜೀವನವನ್ನು ರೂಪಿಸಿಕೊಳ್ಳಬೇಕಾಗುವ ಶಿಕ್ಷಣ ನೀಡಲಾಗುತ್ತಾ ಇದೆ ಮನುಷ್ಯ ಎಷ್ಟೇ ಸಂಪಾದನೆ ಮಾಡಿ ಸಾಮಾನ್ಯ ಮನುಷ್ಯನಂತೆ ಜೀವನ ನಡೆಸಿದಾಗ ಮಾತ್ರ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಸಮಾಜಕ್ಕೆ ಬೇಕಿರುವುದು ಕೇವಲ ಬುದ್ಧಿವಂತಿಕೆ, ಪ್ರತಿಭಾನ್ವಿತರಲ್ಲ ಜವಾಬ್ದಾರಿಯುತ ಪ್ರಜೆಗಳು ಅಂತಹ ವ್ಯಕ್ತಿಗಳನ್ನು ರೂಪಿಸಿ ಉತ್ತಮ ಹಾಗೂ ಸದೃಢ ಸಮಾಜ ನಿರ್ಮಣದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಜಿಲ್ಲೆಯಲ್ಲಿ ಪ್ರತಿಭಾವಂತರು ಹಾಗೂ ವಿಶೇಷವಾಗಿ ಬಡ ವಿದ್ಯಾರ್ಥಿಗಳು ಕೆಎಎಸ್, ಐಎಎಸ್ ತರಬೇತಿ ಪಡೆದು ಉನ್ನತ ಹುದ್ದೆಗಳಲ್ಲಿ ದೇಶಾದ್ಯಂತ ಕೋಲಾರ ಜಿಲ್ಲೆಯವರು ಕೆಲಸ ಮಾಡುವಂತಾಗಲಿ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ ದೇವರಾಜ್ ಅವರು ಉಚಿತವಾಗಿ ಡಿಎಂಆರ್ ತರಬೇತಿ ಕೇಂದ್ರ ಪ್ರಾರಂಭಿಸಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಸಿ.ಬೈರೇಗೌಡ ಮಹಾವಿದ್ಯಾಲಯದ ಅಧ್ಯಕ್ಷ ಡಾ.ಎ ಪ್ರಭಾಕರ್ ರೆಡ್ಡಿ, ಡಾ.ಮಂಜುಳಾ, ಕ್ಯಾಂಪಸ್ ಮುಖ್ಯ ಸಂಯೋಜಕ ಡಾ.ಆರ್ ಶಿವರಾಜು, ಪ್ರಾಂಶುಪಾಲ ಡಾ ಬಸವಕುಮಾರ್ ವಿವಿಧ ವಿಭಾಗದ ಮುಖ್ಯಸ್ಥರಾದ ಜಿ.ಎಂ ಶ್ರೀರಾಮರೆಡ್ಡಿ, ಚಂದ್ರಶೇಖರ್, ಭಾನುಪ್ರಕಾಶ್, ಸತೀಶ್ ಮುಂತಾದವರು ಇದ್ದರು.