ಶ್ರೀನಿವಾಸಪುರ ಪಟ್ಟಣದ ಶ್ರೀ ವರದ ಬಾಲಾಂಜನೇಯ ಸ್ವಾಮಿ ದೇವಾಲಯದಲ್ಲಿ ಬುದುವಾರ ಬೆಳಿಗ್ಗೆ ಎಂಟು ಗಂಟೆಯಿಂದ ಸುಮಾರು ಹನ್ನೊಂದು ಗಂಟೆಯವರೆಗೂ ವಿಶೇಷ ಹೋಮ ಹಾಗೂ ನವಗ್ರಹ ಶಾಂತಿ ಪೂಜಾ ಕೈಕಾರ್ಯಗಳನ್ನು ನೆರವೇರಿಸಲಾಗುತ್ತಿದೆ ಈ ಹೋಮ ಹವನಗಳಲ್ಲಿ ಭಾಗಿಯಾಗಲು ಚಂದ್ರಗ್ರಹಣ ಕುರಿತಾದ ರಾಶಿಗಳ ಪರಿಹಾರ ದೋಷಗಳ ಶಾಂತಿ ಹೋಮ ನಡೆಸಲಾಗುತ್ತಿದೆ ರಾಶಿ ನಕ್ಷತ್ರಗಳು ತಿಳಿಯದೆ ಇರುವವರು ಸಹ ಈ ಪೂಜೆ ಪರಿಹಾರ ದೋಷಗಳನ್ನು ಪರಿಹರಿಸಿಕೊಳ್ಳಬಹುದು ಈ ಪೂಜಾ ಕೈಂಕರಗಳಿಗೆ 501 ರೂಪಾಯಿಗಳನ್ನು ನೀಡಿ ಹೋಮ ಹವನದ ಖರ್ಚುಗಳಿಗಾಗಿ ನೀಡಿ ಶ್ರೀ ವರದ ಬಾಲಾಂಜನೇಯ ಸ್ವಾಮಿ ದೇವಾಲಯ ಶ್ರೀನಿವಾಸಪುರ ಪಟ್ಟಣದ ಆವರಣದಲ್ಲಿ ನೆರವೇರಿಸಲಾಗುತ್ತಿದೆ ದೇಶದ ಸಮಗ್ರ ಜನತೆಯ ಶಾಂತಿಗಾಗಿ ಮತ್ತು ರಾಶಿಗಳ ಪರಿಹಾರಕ್ಕಾಗಿ ಈ ಸಮಾಜ ಮುಖಿಯಾದ ಪೂಜಾಕೈಂಕರಗಳನ್ನು ನೆರವೇರಿಸಲಾಗುತ್ತಿದೆ ಎಂದು ಆಡಳಿತ ಮಂಡಳಿಯಿಂದ ಮತ್ತು ಅರ್ಚಕರ ವತಿಯಿಂದ ಕರೆ ನೀಡಿದ್ದಾರೆ 8880007237 ಈ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು.
ಮೇಲು ದೀಪ ಬೆಳಗಿದ ಶ್ರೀ ವರದ ಬಾಲಾಂಜನೇಯ ಸ್ವಾಮಿ ಭಕ್ತ ಮಂಡಳಿ.
ಶ್ರೀ ವರದ ಬಾಲ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಮೇಲು ದೀಪವನ್ನು ಮಾರುತಿ ನಗರದ ಶ್ರೀನಿವಾಸ ರವರು ನೇತೃತ್ವದಲ್ಲಿ ಜ್ಯೋತಿಯನ್ನು ಬೆಳಗಿಸಲಾಯಿತು.
ಶ್ರೀ ವರದ ಬಾಲಾಂಜನೇಯ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ನಿತ್ಯ ಪೂಜೆಗಳು ನಡೆಯುತ್ತಿದ್ದು ಅದರಂತೆ ವಿಶೇಷವಾಗಿ ನಾಳೆ ನಡೆಯಬೇಕಿದ್ದ ಕಾರ್ತಿಕ ಹುಣ್ಣಿಮೆಯ ದೀಪವನ್ನು ಅಥವಾ ಮೇಲುಸೇವೆಯನ್ನು ಒಂದು ದಿನದ ಮುಂಚಿತವಾಗಿಯೇ ಅಂದರೆ ಸೋಮವಾರ ಸಂಜೆ 7:00ಯ ಅವಧಿಯಲ್ಲಿ ಬೆಳಗಿಸಲಾಯಿತು.
ಈ ದೀಪ ಸೇವಾ ಕರ್ತರಾಗಿ ಜಿ ಜೆ ನಾಗಮಣಿ ಕುಟುಂಬದವರಿಂದ ನೆರವೇರಿಸಲಾಯಿತು ಈ ವೇಳೆಯಲ್ಲಿ ಶ್ರೀ ವರದ ಬಾಲಾಂಜನೇಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಎಲ್ಲರೂ ದೇವರ ದರ್ಶನ ಪಡೆದು ಮೇಲು ದೀಪವನ್ನು ಬೆಳಗಿ ಪ್ರಸಾದವನ್ನು ಸ್ವೀಕರಿಸಿ ಪುನೀತರಾದರು ಮುಖ್ಯ ಅರ್ಚಕರಾದ ಅಶ್ವತ ನಾರಾಯಣ ಶಾಸ್ತ್ರಿಗಳು ದೇವರ ಪೂಜೆಗಳನ್ನು ನೆರವೇರಿಸಿ ಕೊಟ್ಟರು.