ಶ್ರೀನಿವಾಸಪುರ : ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿರವರು ತಾಲ್ಲೂಕಿನ ತಮ್ಮ ಸ್ವಗ್ರಾಮವಾದ ಯಚ್ಚನಹಳ್ಳಿ ಗ್ರಾಮದಲ್ಲಿನ ಕಛೇರಿಯಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಮಾಜಿ ಮಂತ್ರಿಗಳಾದ ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್ ರವರ ಮೇಲೂ ಭ್ರಷ್ಟಾಚಾರ ಕೇಸುಗಳು ಇವೆ. ಯಾರ ಮೇಲೆ ಇಲ್ಲ ಹೇಳಿ? .ಹಾಗಾಗಿ ನಮ್ಮ ಪಕ್ಷದ ನಾಯಕರಾದಂತಹ ಬಸವರಾಜ್ ಯತ್ನಾಳ್, ವಿಧಾನಪರಿಷತ್ ಸದಸ್ಯ ವಿಶ್ವನಾಥರವರು ಸರ್ಕಾರಕ್ಕೆ ತಮ್ಮ ಬಳಿ ಇರುವ ಸಲಹೆಗಳನ್ನು ನೀಡಿದ್ದಾರೆ. ಅದೇ ಭ್ರಷ್ಟಾಚಾರದ ಆರೋಪ ಎಂದು ಬಿಂಬಿಸುವುದು ತಪ್ಪು.
ಬಿಜೆಪಿ ಪಕ್ಷದಲ್ಲಿ ಸುಮಾರು ಪ್ರಾಮಾಣಿಕ ಮಂತ್ರಿಗಳು ಇದ್ದಾರೆ. ಕಾಂಗ್ರೆಸ್ ಪಕ್ಷದವರು ಹೇಳಲಿ, ನಿಮ್ಮ ಪಕ್ಷದಲ್ಲಿ ಯಾವೊಬ್ಬ ಪ್ರಾಮಾಣಿಕ ಮಂತ್ರಿ ಇದ್ದಾರೆಂದು ತೋರಿಸಲಿ ಎಂದು ಕಾಂಗ್ರೆಸ್ ಪಕ್ಷದ ವಿರುದ್ದ ಆರೋಪ ವ್ಯಕ್ತಪಡಿಸಿದರು.
ಭ್ರಷ್ಟಾಚಾರ ಗಂಗೋತ್ರಿ ಎಂದರೆ ಕಾಂಗ್ರೆಸ್ ಪಕ್ಷ . ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರ ಬೆಳಸಿದ್ದು, ಕೋಮವಾದ ಬೆಳಸಿದ್ದು, ಉಗ್ರವಾದಕ್ಕೆ ಕುಮ್ಮಕ್ಕು ಕೊಟ್ಟಿದ್ದು, ಎಸ್ಡಿಪಿಐ ಸ್ಥಾಪನೆಗೆ ಮಾಡಿಸಿದ್ದು, ಅಲ್ಪಸಂಖ್ಯಾತರನ್ನ ಓಲೈಸಿ, ಮೊತ್ತೊಮ್ಮೆ ಭಾರತಕ್ಕೆ ದಕ್ಕೆ ತರಬೇಕು, ಇನ್ನೊಮ್ಮೆ ಭಾರತದಲ್ಲಿ ಅಂತರಿಕ ಕಲಹ ಉಂಟಾಗಲು ಬಯಿಸತ್ತಿರುವುದು ಕಾಂಗ್ರೆಸ್ ಪಕ್ಷ ಎಂದು ಆರೋಪ ವ್ಯಕ್ತಪಡಸಿ, ಇನ್ನು ಸಮಯ ಪಕ್ವವಾಗಿಲ್ಲ, ಸಮಯ ಬಂದಾಗ ಇದರ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.
ಭಾರತೀಯ ಜನತಾ ಪಕ್ಷದ ಪಾರ್ಟಿ ಸಂಘಟನೆ ಯಾರದೇ ಅಭ್ಯಂತರವಿಲ್ಲ. ಕಾಂಗ್ರೆಸ್ ಪಕ್ಷ ಮೋದಿಯವರನ್ನ ಹೊಗಲಿದರೆ ಖುಸಿ, ಕಾಂಗ್ರೆಸ್ ಪಕ್ಷದವರು ಬಿಜೆಪಿ ಪಕ್ಷಕ್ಕೆ ಮತ ಹಾಕಿದರೆ ಖುಸಿ, ಮೋದಿ ಜಪ ಮಾಡಿದರೆ ಖುಸಿ ಪಡುತ್ತೇವೆ. ಆಗರಬೇಕಾದರೆ ಯಾರು ಬೇಕಾದರೂ ಸಂಘಟನೆ ಮಾಡಿಕೊಂಡು ಹೋಗಬಹುದು.
ಕ್ಷೇತ್ರಕ್ಕೆ ಸಂಬAದಿಸಿದ ಅಭ್ಯರ್ಥಿ ನೀವೇನಾ ಎಂಬ ಪ್ರಶ್ನೆಗೆ ಉತ್ತರಿಸಿ ಅಭ್ಯರ್ಥಿಯನ್ನು ಹೈಕಮಾಂಡ್ ನಿರ್ಧರಿಸುತ್ತೇ , ಪಕ್ಷದ ಹಿರಿಯರು ಆದೇಶದಂತೆ ನಾನು ಸಿದ್ದನಿದ್ದೇನೆ. ಪಕ್ಷದ ನಾಯಕರು ನರೇಂದ್ರಮೋದಿಯವರು , ಇಲ್ಲಿ ವ್ಯಕ್ತಿಗತ ಹೇಳಿಕೆಗೆ ಅಷ್ಟೋಂದು ಮಾನ್ಯತೆ ಇಲ್ಲ. ಇಲ್ಲಿ ಪಕ್ಷ ಏನು ಹೇಳಿದರೆ ಅ ಆದೇಶವನ್ನು ಪಾಲಿಸಲು ನಾನು ಸಿದ್ದನಿದ್ದೇನೆ ಎಂದರು.
ಇದೇ ತಿಂಗಳ ೧೨ ರಿಂದ ೨೩ ತನಕ ವಿಧಾನ ಸಭೆಯ ಕಲಾಪವು ತುಂಬಾ ಯಶಸ್ವಿಯಾಗಿ ನಡೆದಿದೆ. ಕಾಂಗ್ರೆಸ್ಸಿನ ನಾಯಕರು ೪೦% ಭ್ರಷ್ಟಾಚಾರ, ಲಂಚ ಎಂದು ಡಂಗೋರಾ ಹಾದಿ ಬೀದಿ ರಂಪಾಟ ಮಾಡುತ್ತಿದ್ದಾರೆ. ವಿನಃ ವಿಧಾನಪರಿಷತ್, ವಿಧಾನಸಭೆಯಲ್ಲಿ ಅದರ ತಾಕತ್ತು, ಧಮ್ಮು ಇರಲಿಲ್ಲ. ಅವರು ಯಾವದೇ ದಾಖಲೆಗಳ ಇರಲಿಲ್ಲ. ಹಾಗಾಗಿ ಅವರು ಗಾಳಿಯ ಗುಂಡು ಹೊಡೆದಂಗೆ ಸರ್ಕಾರದ ವಿರುದ್ದ ಅನಾವಶ್ಯಕ ಅಪಪ್ರಚಾರ ಮಾಡುತ್ತಿದ್ದಾರೆ. ಹಾಗು ಬಿಜೆಪಿ ಪಕ್ಷದ ವರ್ಚಸ್ಸು ದಕ್ಕೆ ತರುವಂತೆ ಆಚೆ ಅಂದುಕೊಳ್ಳುತ್ತಿದ್ದಾರೆ.
ನಮ್ಮ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿರವರು ಎಲ್ಲಾ ಭಷ್ಟಾಚಾರ ಬಗ್ಗೆ ಸಮಗ್ರ ತನಿಖೆಗೆ ಸಿದ್ದನಿದ್ದೇನೆ ಎಂದಿದ್ದರು. ಆದರೆ ವಿಧಾನ ಸಭೆಯಲ್ಲಿ ಚೆರ್ಚೆ ಮಾಡದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗು ಕಾಂಗ್ರೆಸ್ ಪಕ್ಷದವರು ಪಲಾಯನವಾದವನ್ನು ಮಾಡುತ್ತಿದ್ದಾರೆ ಎಂದು ಟಿಕೀಸಿದರು.
ಪೇಸಿಎಂ ಎಂದರೆ ಪೇ ಟು ಕಾಂಗ್ರೆಸ್ ಮೇಡಂ ಎಂದು ಅರ್ಥ. ಕಳೆದ ೫೭ ವರ್ಷಗಳಿಂದ ಕಾಂಗ್ರೆಸ್ ಪಕ್ಷವು ನಮ್ಮ ರಾಜ್ಯವನ್ನು ಲೂಟಿ ಮಾಡಿ ಖಜಾನೆ ತುಂಬುವ ಕಾರ್ಖನೆಯಾಗಿ ಮಾಡಿಕೊಂಡಿದ್ದರು.
ಈ ಹಿಂದೆ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿರವರು ಕೆಲ ಸಭೆಗಳಲ್ಲಿ ಮಾತನಾಡುತ್ತಾ, ಕೇಂದ್ರಸರ್ಕಾರದಿAದ ೧೦೦ ರೂ ಬಿಡಗಡೆಯಾದರೆ ಹಳ್ಳಿಗಳಿಗೆ ಬರುವಷ್ಟರಲ್ಲಿ ಅದು ಕೇವಲ ೧೫ರೂ ಮಾತ್ರ, ಅಲ್ಲಿಗೆ ೮೫ರೂ ಭ್ರಷ್ಟಾಚಾರವಾಗುತ್ತದೆ ಎಂದು ಹೇಳುತ್ತಿದ್ದರು.
ಇತ್ತೀಚಿಗೆ ಶಾಸಕ ರಮೇಶ್ಕುಮಾರ್ ರವರು ನಾವು ನಾಲ್ಕು ತಲೆಮಾರಿನಷ್ಟು ಮಾಡಿಕೊಂಡಿದ್ದೇವೆ. ಈ ಕಷ್ಟ ಸಮಯದಲ್ಲಿ ಗಾಂದಿ ಕುಟುಂಬಕ್ಕೆ ನಿಷ್ಟರಾಗಿ ಕೆಲಸಮಾಡಲಿಲ್ಲವೆಂದರೆ ನಾವು ತಿನ್ನುವಂತಹ ತಟ್ಟೆಯಲ್ಲಿ ಹುಳ ಬೀಳುತ್ತದೆ ಎಂದು ಹೇಳಿದ್ದರು. ಈಗ ಅರ್ಥ ಮಾಡಿಕೊಳ್ಳಬೇಕು ಕಾಂಗ್ರೆಸ್ ಪಕ್ಷವು ದೇಶವನ್ನು ಯಾವ ರೀತಿ ಲೂಟಿ ಮಾಡಿರುವುದು ಭ್ರಷ್ಟಾಚಾರ ವೆಸಗಿ, ಅವರ ಹೊಟ್ಟೆ ತುಂಬಿಸಿಕೊAಡಿರುವುದು. ಹಾಗು ಬಡವರ ಹೊಟ್ಟೆ ಹೊಡೆದಿರುವುದು.
ದೊಡ್ಡ ಪಕ್ಷದ ಬೆನ್ನು ತಟ್ಟಿಕೊಳ್ಳುವ ಕಾಂಗ್ರೆಸ್ ನಾಯಕರು ಇಷ್ಟು ಕೀಳು ಮಟ್ಟದ ಪ್ರಚಾರಕ್ಕೆ ಇಳಿಯುವುದು ಸೋಚನೀಯ. ನಾನು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕುತ್ತೇನೆ. ಈವತ್ತು ಸಿಎಂ ರವರನ್ನ ಡಿಫೈ ಮಾಡಕ್ಕೆ ಹೋಗುತ್ತಿದ್ದೀರಿ, ನಾಳೆ ನಿಮ್ಮ ಹೈಕಮಾಂಡ್ ಡಿಫೈ ಆಗುತ್ತೇ, ನೀವು ಡಿಫೈ ಆಗುತ್ತೀರಿ ನಿಮ್ಮ ಮೇಲೆ ಬಿತ್ತಿ ಪತ್ರ ಅಚಿಟಿಸುವುದು ದೊಡ್ಡದನೇಲ್ಲಾ, ಈಗೇಲ್ಲಾ ಆದಾಗ ನೀವು ಎಲ್ಲಿ ನಿಲ್ಲುತ್ತೀರಾ , ಒಮ್ಮೆ ಆತ್ಮಾವಾಲೋಕನ ಮಾಡಿಕೊಳ್ಳಿ ಎಂದು ಟಿಕೀಸಿದರು.
ಒಬ್ಬ ಮಾಜಿ ಮುಖ್ಯಮಂತ್ರಿ ಇತಿಹಾಸವುಳ್ಳ ಪಕ್ಷದಿಂದ ಬಂದವರು. ಇಂತಹ ಇತಿಹಾಸವುಳ್ಳ ಪಕ್ಷದ ನಾಯಕರಿಗೆ ಹಾಗು ಬೆನ್ನು ತಟ್ಟಿಕೊಳ್ಳುವ ನಾಯಕರಿಗೆ ಸಾಮಾನ್ಯ ಪರಿಜ್ಞಾನವಿಲ್ಲದೆ ಮಾತನಾಡುತ್ತಾರೆ. ಇದು ಸರಿಯಲ್ಲ. ಇದೊಂದು ನೋವಿನ ಸಂಗತಿ ಎಂದರು.
ನಿನ್ನೆ , ಮೊನ್ನೆ ಪಿಎಫ್ಐ ಸಂಘಟನೆಯ ಮೇಲೆ ಎನ್ಐಎಯು ದಾಳಿ ನಡೆಸಿದಾಗ ೪ದಿನ ನಿರಂತರ ಪ್ರತಿಭಟನೆ ಮಾಡಿದ್ದಾರೆ. ಈ ದೇಶವನ್ನು ವಿರೋಧ ಮಾಡುತ್ತಿದ್ದಾರೆ. ಕೆಲವರು ಪಾಕಿಸ್ತಾನ್ಗೆ ಜೈ ಕಾರಗಳನ್ನು ಹಾಕಿರುವ ಘಟನೆಗಳು ನಡೆದಿವೆ. ಕಾಂಗ್ರೆಸ್ ಪಕ್ಷವು ಕೆಲ ಸಂಘಟನೆಗಳೊAದಿಗೆ ಕೈಜೋಡಿಸಿ ಪ್ರಧಾನಮಂತ್ರಿಗಳ ಬಲಿ ಪಡಿಯಿತು. ಕಾಂಗ್ರೆಸ್ ಪಕ್ಷದ ದೇಶ ವಿರೋಧಿ ದೋರಣೆಯನ್ನು ಸರಿಪಡಿಸಿಕೊಳ್ಳಬೇಕು. ಅಲ್ಪಸಂಖ್ಯಾತರನ್ನ ಓಲೈಕೆ ಮಾಡಿ ಮತ ಬ್ಯಾಂಕ್ನ್ನು ಗಮನದಲ್ಲಿ ಇಟ್ಟುಕೊಂಡು , ಮುಂದುವೆದರೆ , ನಿಮ್ಮ ಮಕ್ಕಳ ಮುಂದಿನ ಪೀಳಿಗೆಗೆ ಹಾಗು ಕುಟುಂಬದವರಿಗೆ ಭವಿಷ್ಯ ಇರುವುದಿಲ್ಲ. ಎಂದರು.
ಮುಖ್ಯಮAತ್ರಿ ಬಸವರಾಜ ಬೊಮ್ಮಾಯಿ ಹಾಗು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ರವರು ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾರ್ಯಗಳು ಹಳ್ಳಿ ಜನರಿಗೆ ತಿಳಿಸುತ್ತಾ, ಅವರ ಮನವೊಳಿಸುತ್ತಾ ಮತ್ತೋಮ್ಮೆ ರಾಜ್ಯದಲ್ಲಿ ಬಿಜೆಪಿ ಪಕ್ಷವು ರಾಜ್ಯದಲ್ಲಿ ಆಡಳತಿಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷದ ತಾಲ್ಲೂಕು ಅಧ್ಯಕ್ಷ ಅಶೋಕ್ರೆಡ್ಡಿ, ಮುಖಂಡ ಮಂಜುನಾಥ ಇದ್ದರು.