ಕೋಲಾರ,ಸೆ.೨೬: ಶ್ರೀನಿವಾಸಪುರ ತಾಲ್ಲೂಕು ಲಕ್ಷ್ಮಿಸಾಗರ ಗ್ರಾಮ ಪಂಚಾಯಿತಿಯ ಯದರೂರು ಸರ್ಕಾರಿ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆ, ಬೀರಗನಲ್ಲಿ ಸರ್ಕಾರಿ ಶಾಲೆ, ಚಿಂತಮಾಕಲಹಳ್ಳಿ ಕನ್ನಡ ಮತ್ತು ಉರ್ದು ಶಾಲೆ, ಶ್ಯಾಗತ್ತೂರು ಹಿರಿಯ ಪ್ರಾಥಮಿಕ ಶಾಲೆ, ಮಂಜಲನಗರ ಕಿರಿಯ ಪ್ರಾಥಮಿಕ ಶಾಲೆಯ ಸುಮಾರು ೧೬೦ ಮಕ್ಕಳಿಗೆ ಕೋಲಾರ ರೋಟರಿ ಕ್ಲಬ್ ಮತ್ತು ಶ್ರೀನಿವಾಸಪುರ ರೋಟರಿ ಸೆಂಟ್ರಲ್ ವತಿಯಿಂದ ನೋಟ್ ಪುಸ್ತಕಗಳು, ಕಲಿಕಾ ಸಾಮಾಗ್ರಿಗಳನ್ನು ವಿತರಿಸುವುದರ. ಜೊತೆಗೆ ಕಲ್ಪವೃಕ್ಷ ಕಾರ್ಯಕ್ರಮದ ಅಡಿಯಲ್ಲಿ ತೆಂಗಿನ ಸಸಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಸಮಿತಿಯ ರೊ.ಎಸ್.ವಿ ಸುಧಾಕರ್ ಮಾತನಾಡುತ್ತಾ, ಸ್ಥಳೀಯ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಕೋಲಾರ ಅಧ್ಯಕ್ಷ ರೊ.ಬಿ.ಶಿವಕುಮಾರ್ ಮಾತನಾಡುತ್ತಾ, ಪ್ರತಿ ಸರ್ಕಾರಿ ಶಾಲೆಗಳಿಗೆ ಕಲ್ಪವೃಕ್ಷ ಯೋಜನೆ ಅಡಿಯಲ್ಲಿ ತೆಂಗಿನ ಸಸಿಗಳನ್ನು ನೀಡಲಾಗುವುದು ಎಂದರು.
ರೋಟರಿ ಶ್ರೀನಿವಾಸಪುರ ಅಧ್ಯಕ್ಷ ಶಿವರಾಜ್ ಮಾತನಾಡುತ್ತಾ, ಅಗತ್ಯವಿರುವ ಕಡೆ ರೋಟರಿ ಸೇವೆ ಸದಾ ಸಿದ್ದ ಎಂದರು.
ರೋಟರಿ ಜಿಲ್ಲಾ ಸಮಿತಿಯ ರೊ.ಹೆಚ್.ರಾಮಚಂದ್ರಪ್ಪ ರೋಟರಿ ವಿಶ್ವದಲ್ಲಿ ತನ್ನ ಸೇವೆ, ಆಶಯಗಳ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶ್ರೀನಿವಾಸಪುರ ರೋಟರಿ ಸೆಂಟ್ರಲ್ ಕ್ಲಬ್ ಕಾರ್ಯದರ್ಶಿ ರೊ.ಶ್ರೀನಿವಾಸರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಶಶಿಕಲಾ ಸುರೇಶ್, ಊರಿನ ಮುಖಂಡರು, ಎಸ್.ಡಿ.ಎಂ.ಸಿ ಸದಸ್ಯರು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.