ಬೆಂಗಳೂರು: ಅಮ್ಮ ಸೇವಾ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು ಕರ್ನಾಟಕದಲ್ಲಿ ಅಮೋಘ ಕಲಾಸೇವೆ ಮತ್ತು ಸಮಾಜ ಸೇವೆ ಸಲ್ಲಿಸುತ್ತಿರುವ ವಿವಿಧ ಸಂಸ್ಥೆಗಳನ್ನು ಗುರುತಿಸಿ ಗಣ್ಯಮಾನ್ಯರಿಗೆ ಪ್ರತಿ ವರ್ಷ ನೀಡುವ ಕರ್ನಾಟಕ ಕರುನಾಡು ಸೇವಾ ರತ್ನ ಪ್ರಶಸ್ತಿ-೨೦೨೨. ಡಾ|| ವಿಷ್ಣುವರ್ಧನ್ರವರ ಜನ್ಮದಿನದ ಪ್ರಯುಕ್ತ ಗಣ್ಯಾತಿಗಣ್ಯರಿಗೆ ಸನ್ಮಾನ, ಸಾಧಕರಿಗೆ ಪ್ರಶಸ್ತಿ ಪ್ರದಾನವನ್ನು ಬೆಂಗಳೂರಿನ ಹೃದಯ ಭಾಗದ ವಸಂತನಗರದಲ್ಲಿರುವ ಬಾಪೂಜಿ ಆಡಿಟೋರಿಯಂನಲ್ಲಿ ದಿನಾಂಕ: ೧೮.೦೯.೨೦೨೨ ರಂದು ಹಮ್ಮಿಕೊಂಡಿತ್ತು. ಕಲಾಸೇವೆ ಸಲ್ಲಿಸಿ ಅತ್ಯುತ್ತಮ ಸಮಾಜ ಸೇವೆ ಸಲ್ಲಿಸಿದ ಸನ್ಮಾನರಿಗೆ ಕರ್ನಾಟಕ ಕರುನಾಡು ಸೇವಾ ರತ್ನ ಪ್ರಶಸ್ತಿ-೨೦೨೨ ಫಲಕ ನೀಡಿ ಗೌರವಿಸಲಾಯಿತು.
೨೦೨೨ರ ಪ್ರಶಸ್ತಿಯನ್ನು ಬೆಂಗಳೂರಿನ ಎಸ್.ವಿ.ಜಿ ಇನ್ನೋವೇಷನ್ ಸಂಸ್ಥೆಯ ಸಂಸ್ಥಾಪಕರು ಮತ್ತು ಓ ಮನವೇ ಸಂಪಾದಕರು ಮತ್ತು ಸಮಾಜ ಸೇವಕರಾದ ಆದ
ಡಾ. ನವೀನ್ ಮತ್ತಿಕೆರೆ ಹಾಗೂ ಸಾಹಿತಿ ಮತ್ತು ಚಿಂತಕರಾದ ಡಾ. ವೆಂಕಟೇಶ್ ಚೌಥಾಯಿರವರಿಗೆ ಕರ್ನಾಟಕ ಕರುನಾಡು ಸೇವಾ ರತ್ನ ಪ್ರಶಸ್ತಿ-೨೦೨೨. ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಕರ್ಯಕ್ರಮಕ್ಕೆ ಅಧ್ಯಕ್ಷತೆ/ಉದ್ಘಾಟನೆಯನ್ನು ಶ್ರೀ ವಿ. ಮನೋಹರ್ ಖ್ಯಾತ ಸಂಗೀತ ನಿರ್ದೇಶಕರು ಭಾಗವಹಿಸಿದ್ದರು ಮತ್ತು ಮುಖ್ಯ ಅತಿಥಿಗಳಾಗಿ ಶ್ರೀ ಡಾ. ವೆಂಕಟೇಶ್ ಚೌಥಾಯಿ, ಶ್ರೀ ನರಸಿಂಹಮೂರ್ತಿ, ಶ್ರೀ ಅಜೀತ್ ಕುಮಾರ್ (ಜೂನಿಯರ್ ರಾಜ್ಕುಮಾರ್),
ಡಾ. ನವೀನ್ ಮತ್ತೀಕೆರೆ ವಹಿಸಿದ್ದರು ಮತ್ತು ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ನಾಗರತ್ನ ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು. ಕರ್ಯಕ್ರಮದಲ್ಲಿ ಕಲಾವಿದರು ಮತ್ತು ಪುಟಾಣಿ ಮಕ್ಕಳು ವಿವಿಧ ಕನ್ನಡ ಚಲನಚಿತ್ರ ಗೀತೆಗಳಿಗೆ ನೃತ್ಯ ಮತ್ತು ಹಾಡುಗಳನ್ನು ಸುಮಧುರ ಕಂಠದಿAದ ಹಾಡಿ ಸೇರಿದ್ದ ಜನರನ್ನು ರಂಜಿಸಿದರು.