ಮುಖ್ಯಮಂತ್ರಿಗಳ ಕಾರ್ಯವೈಖರಿಗೆ ಮೆಚ್ಚುಗೆ

ಕೋಲಾರ, ರಾಜ್ಯದ ಪ.ಜಾತಿ /ಪರಿಶಿಷ್ಟ ವರ್ಗದ ಬಿಪಿಎಲ್ ಕಾರ್ಡ್ ಕುಟುಂಬದವರಿಗೆ ೭೫ ಯೂನಿಟ್ ತನಕ ಉಚಿತ ವಿದ್ಯುತ್ ನೀಡಲು ರಾಜ್ಯ ಸಚಿವ ಸಂಪುಟದಿ0ದ ಗ್ರೀನ್ ಸಿಗ್ನಲ್ ಸಿಕ್ಕಿದೆ, ಮತ್ತು ವಿಧಾನಸಭೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ ಇದರಿಂದ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಸಹಾಯವಾಗಿದ್ದು, ವಕೀಲರು ಮತ್ತು ಕರ್ನಾಟಕ ಮಾದಿಗ ದಂಡೋರ ಕಾನೂನೂ ಘಟಕದ ರಾಜ್ಯಾಧ್ಯಕ್ಷ ಹಾರೋಹಳ್ಳಿ ವೆಂಕಟೇಶ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದೇ ವೇಳೆ ಪೌರ ಕಾರ್ಮಿಕರ ವಿಶೇಷ ನೇಮಕಾತಿ ನಿಯಮಗಳ ಅಡಿಯಲ್ಲಿ ಪಟ್ಟಣ ಪಂಚಾಯಿತಿ, ಪುರಸಭೆ ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ೧೧,೧೩೩ ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರು ಎಂದು ನೇಮಕಾತಿ ಮಾಡಲು ಅನುಮೋದನೆ ನೀಡಿರುವುದು ರಾಜ್ಯದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಯಾಗಿದೆ. ಪೌರ ಕಾರ್ಮಿಕರು ಸಮಾರು ವರ್ಷಗಳಿಂದ ತಮ್ಮ ಹುದ್ದೆಯನ್ನು ಖಾಯಂ ಗೊಳಿಸಬೇಕೆಂದು ಅನೇಕ ಹೋರಾಟಗಳು, ಚಳುವಳಿಗಳು ನಡೆಸುತ್ತಿದ್ದರು ಕೂಡ ಕಾಂಗ್ರೆಸ್ & ಜೆಡಿಎಸ್ ಪಕ್ಷದ ಸರ್ಕಾರಗಳು ಬಡವರ ಮತ್ತು ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ ಮತ್ತು ಅವರ ಅಹವಾಲುಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ನಿರ್ಲಕ್ಷಿಸಿದರು. ಈಗ ರಾಜ್ಯದ ಪೌರ ಕಾರ್ಮಿಕರ ಹೋರಾಟಕ್ಕೆ ನ್ಯಾಯ ಒದಗಿಸಿದೆ ಜನ ಮೆಚ್ಚಿಗೆ ಪಡೆದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಬಡವರ ಪರವಾಗಿದೆ ಎಂದು ಇಂಥಹ ಒಂದು ದಿಟ್ಟ ನಿರ್ಧಾರವನ್ನು ಕೈಗೊಂಡ ಮುಖ್ಯಮಂತ್ರಿಗಳಿಗೆ ಮತ್ತು ಅವರ ಸಂಪುಟ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *