ಎಸ್‌ಸಿಪಿ ಯೋಜನೆಯಡಿ ಕೋಲಾರ ಜಿಲ್ಲೆಗೆ ೧೨೬.೮೬ ಕೋಟಿ-ಸಚಿವರ ಮಾಹಿತಿ ರಸ್ತೆಗಳೆಲ್ಲಾ ಹಳ್ಳಗಳಾಗಿವೆ ಹಣ ಎಲ್ಲಿಗೆ ಹೋಯಿತು-ಗೋವಿಂದರಾಜು ಪ್ರಶ್ನೆ

ಕೋಲಾರ:- ಕೋಲಾರ ಜಿಲ್ಲೆಯಲ್ಲಿ ೨೦೧೭-೧೮ ರಿಂದ ೨೦೨೧-೨೨ ನೇ ಸಾಲಿನವರೆಗೆ ಲೋಕೋಪಯೋಗಿ ಇಲಾಖೆಯಿಂದ ಎಸ್‌ಸಿಪಿ ಯೋಜನೆಯಡಿಯಲ್ಲಿ ರೂ. ೧೨೬.೮೬ ಕೋಟಿ ಹಣ ಬಿಡುಗಡೆ ಮಾಡಿದ್ದು, ಇದರಲ್ಲಿ ರೂ.೧೧೩.೦೨ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ ಎಂದು ರಾಜ್ಯ ಮುಜರಾಯಿ ಸಚಿವ ಶಶಿಕಲಾ ಜೊಲ್ಲೆ ವಿಧಾನಪರಿಷತ್‌ನಲ್ಲಿ ಸದಸ್ಯ ಇಂಚರ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸದ ಗೋವಿಂದರಾಜುರಾವರು ತಾವು ವೆಚ್ಚ ಮಾಡಿರುವ ಹಣ ಎಲ್ಲಿಗೆ ಹೋಗಿದೆ ಎಂಬುದು ತಿಳಿದಿಲ್ಲ, ದಯಮಾಡಿ ಕೋಲಾರಕ್ಕೆ ಸಚಿವರು ಬಂದು ನೋಡಲಿ, ಅಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದು ಸ್ಪಷ್ಟ ಚಿತ್ರಣ ಅವರಿಗೆ ತಿಳಿಯುತ್ತದೆ. ಇತ್ತೀಚೆಗೆ ೪ ಜನ ಮಹಿಳೆಯರು ಸಹ ರಸ್ತೆ ಗುಂಡಿಯಲ್ಲಿ ಬಿದ್ದು, ಕೈ ಕಾಲುಗಳು ಮರಿದುಕೊಂಡಿರುವ ಪ್ರಸಂಗ ನಡೆದಿದೆ ಎಂದು ಸಚಿವರ ಗಮನಕ್ಕೆ ತಂದಾಗ, ಸಚಿವರು ಉತ್ತರಿಸಿ ಲೋಕೋಪಯೋಗಿ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದರು.
ಎಸ್‌ಸಿಪಿ,ಟಿಎಸ್‌ಪಿ ಅನುದಾನ ದುರ್ಬಳಕೆ ಕುರಿತು ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಸಚಿವರ ಅನುಪಸ್ಥಿತಿಯಲ್ಲಿ ಸರ್ಕಾರದ ಪರವಾಗಿ ಉತ್ತರಿಸಿದ ಸಚಿವೆ ಶಶಿಕಲಾ ಜೊಲ್ಲೆ ಉತ್ತರಿಸಿ, ಇದೇ ರೀತಿಯಾಗಿ ಟಿಎಸ್‌ಪಿಯಡಿಯಲ್ಲಿ ರೂ. ೨೮.೩೫ ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ವೆಚ್ಚವಾಗಿರುವುದು ರೂ.೨೬.೭೮ ಕೋಟಿ ರೂ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಕೋಲಾರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಪಿ) ಹಾಗೂ ಗಿರಿಜನ ಉಪಯೋಜನೆ (ಟಿಎಸ್‌ಪಿ) ಇದರಡಿಯಲ್ಲಿ ಲೋಕೋಪಯೋಗಿ ಇಲಾಖೆಯವತಿಯಿಂದ ಕೈಗೊಂಡಿರುವ ಕಾಮಗಾರಿಯ ಬಗ್ಗೆ ಎಂಎಲ್‌ಸಿ ಗೋವಿಂದರಾಜು ಸರ್ಕಾರದ ಗಮನ ಸೆಳೆದಿದ್ದರು.
ಭಿಕ್ಷ0ಕರ ಸೆಸ್ ಹಣ ಪುನರ್ವಸತಿಗೆ ಬಳಸಿ ವಿಧಾನಪರಿಷತ್‌ನಲ್ಲಿ ಭಿಕ್ಷ0ಕರ ಸೆಸ್ ಬಾಕಿ ಕುರಿತು ಸರ್ಕಾರದ ಗಮನ ಸೆಳೆದ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು,ಭಿಕ್ಷಕುರ ಪುನರ್ವಸತಿ ಕೇಂದ್ರಗಳ ಕಾರ್ಯನಿರ್ವಹಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಮಂಜೂರಾತಿ ಇರುವುದಿಲ್ಲ, ಕರ್ನಾಟಕ ಭಿಕ್ಷಾಟನೆ ನಿಷೇಧ ಅಧಿನಿಯಮದ ಅನ್ವಯ ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳು ಭೂಮಿ ಮತ್ತು ಕಟ್ಟಡಗಳ ಮೇಲೆ ವಿಧಿಸುವ ಆಸ್ತಿ ತೆರಿಗೆಯಲ್ಲಿ ಶೇಕಡ ೩ ರಷ್ಟು ಭಿಕ್ಷ0ಕರ ಉಪಕರವನ್ನು ಸಂಗ್ರಹಿಸಿ ಅವರಿಗೆ ಸೌಲಭ್ಯ ಒದಗಿಸಿ ಎಂದು ಒತ್ತಾಯಿಸಿದರು.
ಸಂಸ್ಥೆಗಳು೨೦ ಕೋಟಿ ಹಾಗೂ ಗ್ರಾಮ ಪಂಚಾಯ್ತಿಗಳು ರೂ.೯ ಕೋಟಿ ಒಟ್ಟು ರೂ: ೧೨೯ ಕೋಟಿಗೂ ಅಧಿಕವಾಗಿ ಸಮಾಜ ಕಲ್ಯಾಣ ಇಲಾಖೆಗೆ ಭಿಕ್ಷ0ಕರ ಸೆಸ್ ಹಣವನ್ನು ವರ್ಗಾಯಿಸಬೇಕಾಗಿತ್ತು, ಇದನ್ನು ಮಾಡದೇ ಸದನಕ್ಕೆ ಸುಳ್ಳು ಮಾಹಿತಿಯನ್ನು ನೀಡುತ್ತಿರುವುದನ್ನು ಖಂಡಿಸಿ, ಕೂಡಲೇ ಈ ಹಣ ವರ್ಗಾಯಿಸಲು ಒತ್ತಾಯಿಸಿದರು.

Leave a Reply

Your email address will not be published. Required fields are marked *