ಪಾಕ್ಷಿಕ ಕಾರ್ಯಕ್ರಮದ ಅಡಿಯಲ್ಲಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ

ಶ್ರೀನಿವಾಸಪುರ: ಬಿಜೆಪಿ ಪಕ್ಷವು ನಿರಂತರವಾಗಿ ಸಾಮಾಜಿಕ ಸೇವಾ ನಿರತ ಕಾರ್ಯಕ್ರಮಗಳ ಮೂಲಕ ಬಡವರ ಅಭಿವೃದ್ಧಿಗಾಗಿ ಶ್ರಮಿಸುತ್ತದೆ ಎಂದು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲ್ ಹೇಳಿದರು.
ಪಟ್ಟಣದ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಡಿಯಲ್ಲಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೇರೆ ಪಕ್ಷಗಳು ಚುನಾವಣೆಯ ಸಮಯದಲ್ಲಿ ಆ ಸಮಯಕ್ಕೆ ತಕ್ಕಂತೆ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಆದರೆ ಬಿಜೆಪಿ ಪಕ್ಷವು ನಿರಂತರವಾಗಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಬಿಜೆಪಿ ಪಕ್ಷವು ಚುನಾವಣ ಸಮಯದಲ್ಲಿ ಮಾತ್ರ ರಾಜಕೀಯದಲ್ಲಿ ಪಾಲ್ಗುಳ್ಳುತ್ತದೆ .
ಕೇಂದ್ರ ಗೃಹ ಮಂತ್ರಿ ಅಮಿತಶಾ, ಬಿಜೆಪಿ ರಾಷ್ಟç ಅಧ್ಯಕ್ಷ ನಡ್ಡ, ರಾಜ್ಯಾಧ್ಯಕ್ಷ ನಳೀನ್‌ಕಟೀಲ್ ರವರ ಮಾರ್ಗದರ್ಶನದಲ್ಲಿ ಸೆ.೧೭ ರಿಂದ ಅ.೨ರವರಗೆ ನಡೆಯುವ ಸೇವಾ ಪಾಕ್ಷಿಕ ಯೋಜನೆ ಅಡಿಯಲ್ಲಿ ಬೃಹತ್ ಆರೋಗ್ಯ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗವುದು. ಬಿಜೆಪಿ ಪಕ್ಷವು ಪ್ರಧಾನ ಮಂತ್ರಿಗಳಾದ ನರೇಂದ್ರಮೋದಿಯವರ ಮಾರ್ಗದರ್ಶನದಲ್ಲಿ ದೇಶದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡದರು.
ಪಕ್ಷರ ಮುಖಂಡರಾದ ರೋಣೂರು ಚಂದ್ರಶೇಖರ್, ಕೊಡಿಚರೆವು ನಾಗರಾಜ್, ಲಕ್ಷö್ಮಣಗೌಡ, ಕೊಟ್ರಗುಳಿ ನಾರಾಯಣಸ್ವಾಮಿ, ನಿಶಾಂತರೆಡ್ಡಿ, ನಾರಾಯಣಪ್ಪ, ನಾಗದೇನಹಳ್ಳಿ ಚಂದ್ರಶೇಖರ್, ಮಂಡಲ ಪ್ರದಾನ ಕಾರ್ಯದರ್ಶಿ ರಾಜು, ಪುರಸಭೆ ನಾಮನಿ ಸದಸ್ಯರಾದ ನಲ್ಲಪಲ್ಲಿ ರೆಡ್ಡಪ್ಪ, ಜಯಣ್ಣ, ಶೇಕ್‌ಷಫೀವುಲ್ಲಾ, ದರಖಾಸ್ತು ಕಮಿಟಿ ಸದಸ್ಯ ಶ್ರೀನಾಥಬಾಬು, ಇದ್ದರು.

Leave a Reply

Your email address will not be published. Required fields are marked *