ಬೈರವೇಶ್ವರ ವಿದ್ಯಾನಿಕೇತನ ಸಂಸ್ಥೆ ವತಿಯಿಂದ ಸ್ವಸ್ತಿ – ೨೦೨೨ ಕಾರ್ಯಕ್ರಮ

ಶ್ರೀನಿವಾಸಪುರ : ವಿದ್ಯಾರ್ಥಿ ಜೀವನದಲ್ಲಿ ಜ್ಞಾನಾರ್ಜನೆಯೊಂದಿಗೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಸಾಮಾಜಿಕ ಬದ್ಧತೆ , ದೇಶಾಭಿಮಾನ, ಕೌಟುಂಬಿಕ ಮೌಲ್ಯಗಳು ಮೊದಲಾದ ಸಂಸ್ಕಾರಗಳನ್ನು ಮಕ್ಕಳಿಗೆ ಕಲಿಸುವುದು ನಮ್ಮ ಮಖ್ಯ ಉದ್ದೇಶ ಎಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಆದಿಚುಂಚನಗಿರಿ ಶಾಖಾ ಮಠದ ಸ್ವಾಮಿಜಿ ಮಂಗಳನAದನಾಥಸ್ವಾಮಿ ತಿಳಿಸಿದರು.
ಪಟ್ಟಣ ಹೊರವಲಯದ ಕನಕಮಂದಿರದಲ್ಲಿ ಸೋಮವಾರ ಬೈರವೇಶ್ವರ ವಿದ್ಯಾನಿಕೇತನ ಸಂಸ್ಥೆ ವತಿಯಿಂದ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಸ್ವಸ್ತಿ – ೨೦೨೨ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಂಕಗಳಿಕೆಗೆ ಹೇಗೆ ಪ್ರಾಮುಖ್ಯತೆ ನೀಡಬೇಕೋ, ಜೊತೆಗೆ ಅದರೊಂದಿಗೆ ಉತ್ತಮ ಸಂಸ್ಕಾರವನ್ನು ಹೊದುವುದಕ್ಕೂ ಒತ್ತು ನೀಡಲಾಗಿದೆ. ಹೃದಯವಂತರಾದವರು, ಮಾನವೀಯ ಗುಣವುಳ್ಳವರು , ಸರ್ವ ಧರ್ಮ ಸಹಿಷ್ಣುಗಳು, ಪರೋಪಕಾರ ಗುಣವುಳ್ಳವರು ಈಗಿನ ಸಮಾಜಕ್ಕೆ ಅತ್ಯಗತ್ಯ ಎಂದರು.
ಶಾಲಾ ಆಡಳಿತ ಮಂಡಲಿ ಕಾರ್ಯದರ್ಶಿ ಎಂ.ಶ್ರೀರಾಮರೆಡ್ಡಿ ಮಾತನಾಡಿ ಇಷ್ಟಪಟ್ಟು ಓದಿ, ಕಷ್ಟಪಟ್ಟು ಓದುಬೇಡಿ. ಹಂತ ಹಂತವಾಗಿ ನಿಮ್ಮ ದೌರ್ಬಲ್ಯಗಳನ್ನು ಮೀರಿ ಮೇಲೇರಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಬಿಜಿಎಸ್ ಶಿಕ್ಷಣ ಸಂಸ್ಥೆಯ ಸಿಇಒ ಎನ್.ಶಿವರಾಮರೆಡ್ಡಿ ಬಿಇಒ ವಿ.ಉಮಾದೇವಿ, ಬೈರಪ್ಪಪಲ್ಲಿ ಬಿಜಿಎಸ್ ಶಾಲೆಯ ನಿರ್ದೇಶಕ ಎ.ವೆಂಕಟರೆಡ್ಡಿ, ಪಿಯುಸಿ ಕಾಲೇಜಿನ ಪ್ರಾಶುಂಪಾಲ ಗಂಗಾಧರಗೌಡ, ಮುಖ್ಯ ಶಿಕ್ಷಕ ವೆಂಕಟರಮಣಾರೆಡ್ಡಿ, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ವೇವನ್ನ, ಪೋಷಕರು ಮತ್ತು ಮಕ್ಕಳು ಶಾಲಾಸಿಬ್ಬಂದಿಯ ಇದ್ದರು.

Leave a Reply

Your email address will not be published. Required fields are marked *