ಕೋಲಾರ:- ಯರಗೋಳು ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಆಗಿರುವ ವಿಳಂಬದ ಕುರಿತು ವಿಧಾನಪರಿಷತ್‌ನಲ್ಲಿ ಮಂಗಳವಾರ ಧ್ವನಿಯೆತ್ತಿದ್ದ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರ ಮನವಿಗೆ ಸ್ಪಂದಿಸಿದ ನಗರಾಭಿವೃದ್ದಿ ಸಚಿವರು ಮಾರ್ಚ್-೨೦೨೩ರ ವೇಳೆಗೆ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದರು.
ಮಂಗಳವಾರ ನಡೆದ ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಗೆ ಕೈಗೊಂಡ ಕ್ರಮಗಳೇನು? ಕುಡಿಯುವ ನೀರಿನ ಯೋಜನೆಗಳಿಗೆ ಬಿಡುಗಡೆಗೊಳಿಸಿದ ಅನುದಾನವೆಷ್ಟು ಹಾಗೂ ಕೋಲಾರ, ಮಾಲೂರು, ಬಂಗಾರಪೇಟೆ ಮತ್ತು ಇತರೆ ೪೫ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸಲು ಯರಗೊಳ್ ಯೋಜನೆ, ರೂಪಿಸಿದ್ದು ಈ ಯೋಜನೆ ಪೂರ್ಣಗೊಳಿಸದೆ ಇರಲು ಕಾರಣವೇನು ಎಂದು ನಗರಾಭಿವೃದ್ದಿ ಸಚಿವರನ್ನು ಪ್ರಶ್ನಿಸಿ, ಯೋಜನೆ ಶೀಘ್ರ ಪೂರ್ಣಗೊಳಿಸಲು ಆಗ್ರಹಿಸಿದರು.
ಇದೇ ರೀತಿ ಬೆಂಗಳೂರಿನ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಕೋಲಾರ ನಗರದ ಕೋಲಾರಮ್ಮನಕೆರೆ, ಅಮೆರಹಳ್ಳಿ ಕೆರೆ, ಮಡೇರಹಳ್ಳಿ ಕೆರೆ, ಕೂಡಿಕಣ್ಣೂರು ಕೆರೆಗಳಿಗೆ ಹಾಗೂ ಮಾರ್ಕಂಡೇಯ ಡ್ಯಾಮಿನಿಂದ ತುಂಬಿ ಎರಗೊಳ್ ಡ್ಯಾಮಿಗೆ ನೀರು ಹರಿದು ಹೋಗುತ್ತಿರುವುದರಿಂದ ಕುಡಿಯುವ ನೀರು ಕಲುಷಿತಗೊಳ್ಳುತ್ತಿದ್ದು ಈ ಕುರಿತಾಗಿ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ ಎಂದು ಸರ್ಕಾರದ ಗಮನಕ್ಕೆ ತಂದರು.
ಇದಕ್ಕೆ ಉತ್ತರಿಸಿದ ರಾಜ್ಯ ನಗರಾಭಿವೃದ್ಧಿ ಸಚಿವರು, ಕುಡಿಯುವ ನೀರಿನ ಯೋಜನೆಗೆ ಸಂಬ0ಧಿಸಿದAತೆ ಮಾರ್ಚ್ ೨೦೨೩ರ ಒಳಗೆ ಪೂರ್ಣಗೊಳಿಸುತ್ತೇವೆ ಹಾಗೂ ಶುದ್ಧೀಕರಿಸಿದ ಬೆಂಗಳೂರಿನ ತ್ಯಾಜ್ಯ ನೀರಿನಿಂದ ಕುಡಿಯುವ ನೀರು ಕಲುಷಿತಗೊಳ್ಳುತ್ತಿರುವ ಬಗ್ಗೆ ಸಂಬAಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.