ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೌನ್ಸಿಲರ್ ಸೀನಪ್ಪ ಅಲಿಯಾಸ್ ಎಂ.ಶ್ರೀನಿವಾಸನ್ ರವರನ್ನು ನೆನ್ನೆ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು ಇವರ ಹತ್ಯೆಯನ್ನು ಮಾಡಿದ ಆರೋಪಿಗಳಿಗೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದರು.
ಘಟನೆ ನಡೆದ 24 ಗಂಟೆಗಳ ಅವಧಿಯಲ್ಲಿ ಕೋಲಾರ ಜಿಲ್ಲೆಯ ವೇಮಗಲ್ ವ್ಯಾಪ್ತಿಯಲ್ಲಿ ಲಕ್ಷ್ಮಿಸಾಗರ ಎಂಬ ಸ್ಥಳದಲ್ಲಿ ಆರೋಪಿಗಳಾದ ವೇಣುಗೋಪಾಲ್ ಪ್ರಮುಖ ಆರೋಪಿ ಎನ್ನಲಾಗಿ ಪೊಲೀಸರು ಆರೋಪಿ ವೇಣುಗೋಪಾಲ್ ಅಲಿಯಾಸ್ ಕಮ್ಮಿ ವೇಣು ಎಂಬ ಹೆಸರಿನ ವ್ಯಕ್ತಿ ರವರನ್ನು ಫೈರಿಂಗ್ ಮಾಡಿ ಹಿಡಿಯಲಾಗಿದೆ ಮತ್ತು ಈತನ ಜೊತೆಯಲ್ಲಿ ಇರುವ ಮುನೇಂದ್ರ ಕಾಲಿಗೆ ಸಹ ಗುಂಡೇಟು ಬಿದ್ದಿದ್ದು ಮತ್ತು ಇನ್ನೊಬ್ಬ ಆರೋಪಿ ಸಂತೋಷಗೂ ಸಹ ಗಾಯಗಳಾಗಿವೆ.
ಕೋಲಾರ ಜಿಲ್ಲೆ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ಸ್ಪೆಕ್ಟರ್ ಆರ್ ವೆಂಕಟೇಶ್ ರವರಿಂದ ಮಾಡಲಾಗಿ ಅರಣ್ಯ ಪ್ರದೇಶವಾದ ಲಕ್ಷ್ಮಿಸಾಗರದಲ್ಲಿ ಆರೋಪಿಗಳನ್ನು ಬಂಧಿಸಿ ಕರೆತರುವ ವೇಳೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿಗಳ ಕಾಲಿಗೆ ಗುಂಡನ್ನು ಹಾರಿಸಲಾಗಿದೆ.
ಹಲ್ಲೆಯ ವೇಳೆಯಲ್ಲಿ ಇನ್ಸ್ಪೆಕ್ಟರ್ ವೆಂಕಟೇಶ್ ಪೊಲೀಸ್ ಸಿಬ್ಬಂದಿಯಾದ ಮಂಜುನಾಥ್ ಮತ್ತು ನಾಗೇಶ್ ರವರಿಗೂ ಸಹ ಗಾಯಗಳಾಗಿ ಗಾಯಗಳು ಕೋಲಾರ ಜಿಲ್ಲೆಯ ಎಸ್ ಎನ್ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಶ್ರೀನಿವಾಸ್ ಕೊಲೆ ಆರೋಪಿಗಳಾದ ಆರು ಜನರ ಪೈಕಿ ಮೂರು ಜನರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ