ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಕೋಲಾರ, ಕೋಲಾರ ನಗರಸಭೆ ವ್ಯಾಪ್ತಿಯ ಪ.ಜಾತಿ ಮತ್ತು ಪ.ಪಂಗಡ, ಇತರೆ ಹಿಂದುಳಿದ ಜನಾಂಗದ ಮತ್ತು ಅಂಗವಿಕಲರ ಅಭಿವೃದ್ಧಿಗೆ ೨೦೨೨-೨೩ನೇ ಸಾಲಿಗೆ ಮಾನ್ಯ ಮುಖ್ಯ ಮಂತ್ರಿಗಳ ನಗರೋಥಾನ್ನ (ಮುನಿಸಿಪಾಲಿಟಿ) ಯೋಜನೆ ಹಂತ-೪ ರಡಿ ಕಲ್ಯಾಣ ಕಾರ್ಯಕ್ರಮ ಯೋಜನೆಯಡಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹಧನ, ಶಸ್ತಚಿಕಿತ್ಸೆ/ವೈದ್ಯಕೀಯ ವೆಚ್ಚದ ಸಹಾಯಧನ, ಮನೆದುರಸ್ತಿ ಪಡಿಸಿಕೊಳ್ಳಲು ಸಹಾಯಧನ, ವೈಯಕ್ತಿಕ ನಿರ್ಮಿಸಿಕೊಳ್ಳಲು ಸಹಾಯಧನ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಜೇಷ್ಠತೆ ಮತ್ತು ಅರ್ಹತೆಯ ಆದ್ಯತೆ ನೀಡಲಾಗುವುದು. ಅನುಮೋದಿತ ಕ್ರಿಯಾ ಯೋಜನೆಯ ಅನುದಾನದ ಲಭ್ಯತೆ ಅನುಗುಣವಾಗಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗುವುದು. ಶೇ.೫ ರಷ್ಟು ಯೋಜನೆಯಡಿಯಲ್ಲಿ ಸದರಿ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿರುವವರು ಪುನಃ ಅರ್ಜಿ ಸಲ್ಲಿಸುವಂತಿಲ್ಲ. ಒಂದು ಕುಟುಂಬದವರು ಒಂದು ಸೌಲಭ್ಯಕ್ಕೆ ಮಾತ್ರ ಅರ್ಹರಾಗಿರುತ್ತಾರೆ. ಇತರೆ ಷರತ್ತುಗಳನ್ನು ನಗರಸಭೆ ಕಾಯ್ದಿರಿಸಿಕೊಂಡಿರುತ್ತೆ. ಸರ್ಕಾರ ಹಾಗೂ ನಗರಸಭೆ ಕಾಲ ಕಾಲಕ್ಕೆ ಹೊರಡಿಸುವ ಆದೇಶ/ಷರತ್ತುಗಳಿಗೆ ಬದ್ದರಾಗಿರತಕ್ಕದ್ದು. ಆಯ್ಕೆ ಪಟ್ಟಿಯು ಕೌನ್ಸಿಲ್ ಸಭೆಯ ಅನುಮೋದನೆಗೆ ಒಳಪಟ್ಟಿರುತ್ತದೆ.
ಅರ್ಹ ಫಲಾನುಭವಿಗಳು ಸೂಕ್ತ ದಾಖಲೆಗಳನ್ನು ನಿಗದಿತ ಅರ್ಜಿ ನಮೂನೆಯೊಂದಿಗೆ ಸೆಪ್ಟೆಂಬರ್ ೨೫ ರ ಸಂಜೆ ೫.೦೦ ಗಂಟೆಯೊಳಗೆ ಕೋಲಾರ ನಗರಸಭಾ ಕಾರ್ಯಾಲಯಕ್ಕೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಛೇರಿಯ ವೇಳೆಯಲ್ಲಿ ಬಡತನ ನಿರ್ಮೂಲನ ಶೇ.೨೪.೧೦.೭.೨೫.೫ ಶಾಖೆಯನ್ನು ಸಂಪರ್ಕಿಸಬಹುದು ಎಂದು ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *