ಗಣೇಶ್ ಹುಟ್ಟುಹಬ್ಬ-ಗೋಕುಲ ಮಿತ್ರಬಳಗದಿಂದ ಶಾಲಾ ಮಕ್ಕಳಿಗೆ ಟ್ರಾö್ಯಕ್‌ಸೂಟ್ವೃತ್ತಿಗೌರವಕ್ಕೆ ಚ್ಯುತಿಯಿಲ್ಲದ ಸೇವೆಯಿಂದ ಆತ್ಮತೃಪ್ತಿ-ಡಾ.ಎ.ವಿ.ನಾರಾಯಣಸ್ವಾಮಿ

ಕೋಲಾರ:- ವೈದ್ಯನಾಗಿ ಸತತ ೨೩ ವರ್ಷಗಳ ಕಾಲ ವೃತ್ತಿಗೌರವಕ್ಕೆ ಚ್ಯುತಿ ಬಾರದಂತೆ ಗ್ರಾಮೀಣ,ಬಡ ರೋಗಿಗಳ ಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಆತ್ಮತೃಪ್ತಿ ಇದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ತಿಳಿಸಿದರು.
ಗೋಕುಲ ಮಿತ್ರಬಳಗದಿಂದ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘ, ಜಿಲ್ಲಾಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ನೇಮಕಗೊಂಡ ಹಿನ್ನಲೆಯಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ . ಗಂಗಮ್ಮನಪಾಳ್ಯ ಶಾಲಾ ಮಕ್ಕಳಿಗೆ ಟ್ರಾö್ಯಕ್ ಸೂಟ್ ವಿತರಿಸಿ ಅವರು ಮಾತನಾಡುತ್ತಿದ್ದರು.

ನನ್ನ ಆರಂಭಿಕ ಸೇವೆಯನ್ನು ಮುತ್ತುಕದಪಲ್ಲಿ ಗ್ರಾಮದಲ್ಲಿ ವೈದ್ಯನಾಗಿ ನಿರ್ವಹಿಸಿ, ನಂತರ ಆವಣಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡಿ ಇದೀಗ ೭ ವರ್ಷಗಳಿಂದ ದರ್ಗಾಮೊಹಲ್ಲಾ ಪ್ರಾಥಮಿಕ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ಇದೀಗ ತಡವಾದರೂ ತಮಗೆ ಈ ಅವಕಾಶ ಸಿಕ್ಕಿದ್ದು, ಗ್ರಾಮೀಣ,ನಗರ ಭಾಗದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಮತ್ತಷ್ಟು ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂದು ತಿಳಿಸಿ, ತಮ್ಮ ಸೇವೆಯನ್ನು ಗುರುತಿಸಿದ್ದಕ್ಕಾಗಿ ಗೋಕುಲ ಮಿತ್ರಬಳಗ ಹಾಗೂ ಗಣೇಶ್ ಅವರಿಗೆ ಧನ್ಯವಾದ ಸಲ್ಲಿಸಿದರು.

ಹುಟ್ಟುಹಬ್ಬದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗಣೇಶ್, ಇದು ಗೋಕುಲ ಮಿತ್ರಬಳಗದ ಹಬ್ಬವಾಗಿದೆ, ಪ್ರತಿ ವರ್ಷ ಸಾಮಾಜಿಕ ಸೇವೆಯ ಮೂಲಕ ಎಲ್ಲಾ ಸ್ನೇಹಿತರು ಈ ಹಬ್ಬ ಆಚರಿಸುತ್ತಿದ್ದು, ಈ ಬಾರಿ ಗಂಗಮ್ಮನಪಾಳ್ಯ ಶಾಲಾ ಮಕ್ಕಳಿಗೆ ಟ್ರಾö್ಯಕ್ ಸೂಟ್ ನೀಡಲು ನಿರ್ಧರಿದ್ದಾಗಿ ತಿಳಿಸಿ, ಕಾರ್ಯಕ್ರಮ ಆಯೋಜನೆಯಲ್ಲಿ ಮುನಿವೆಂಕಟಯಾದವ್ ಸೇರಿದಂತೆ ಹಲವಾರು ಸ್ನೇನಿತರ ಶ್ರಮವಿದೆ ಎಂದರು.
ಡಾ.ಎ.ವಿ.ನಾರಾಯಣಸ್ವಾಮಿ ಅವರ ಸೇವಾ ಮನೋಭಾವ, ಕೋವಿಡ್ ಸಂದರ್ಭದಲ್ಲಿ ಹೆದರದೇ ರೋಗಿಗಳಿಗೆ ನೀಡಿದ ಸೇವೆಯನ್ನು ಸ್ಮರಿಸಿದ ಅವರು, ಅವರ ಉತ್ತಮ ಮಾತು,ಕೈಗುಣದಿಂದಲೇ ರೋಗಿಗೆ ಆತ್ಮಸ್ಥೆöರ್ಯ ಬರುವ ಮೂಲಕ ವಾಸಿಯಾಗುತ್ತದೆ ಎಂದರು.

ಆರೋಗ್ಯ ಇಲಾಖೆಯಲ್ಲಿ ಯಾವುದೇ ಲಾಭಿ ನಡೆಸದೇ ೨೩ ವರ್ಷ ರೋಗಿಗಳ ಸೇವೆಗೆ ತಮ್ಮನ್ನು ಸೀಮಿತವಾಗಿಸಿಕೊಂಡಿದ್ದ ಅವರಿಗೆ ತಡವಾಗಿಯಾದರೂ ಈ ಅವಕಾಶ ಸಿಕ್ಕಿದ್ದು, ಅವರಿಂದ ಸಾವಿರಾರು ಬಡ ರೋಗಿಗಳಿಗೆ ನೆರವಾಗಲಿದೆ ಎಂದು ಅಭಿನಂದಿಸಿದರು.

ಪತ್ರಕರ್ತ ಕೋ.ನಾ.ಮಂಜುನಾಥ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್,ಪಕ್ಷದ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಸುರೇಶ್, ಪತ್ರಕರ್ತರ ಸಂಘದ ಖಜಾಂಚಿ ಎ.ಜಿ.ಸುರೇಶ್‌ಕುಮಾರ್,ಗೋಕುಲ ಮಿತ್ರಬಳಗದ ಮುನಿವೆಂಕಟಯಾದವ್, ಪಿಡಿಒ ನಾಗರಾಜ್, ಕಿಲಾರಿಪೇಟೆ ಮಣಿ, ರಾಮಕೃಷ್ಣ, ಚಲಪತಿ, ಜ್ಯೂಸ್ ನಾರಾಯಣಸ್ವಾಮಿ,ಮಂಜುನಾಥ್,ವಿವಿಧ ಸಂಘಟನೆಗಳ ಮುಖಂಡರಾದ ದಲಿತ ನಾರಾಯಣಸ್ವಾಮಿ,ಗಂಗಮ್ಮನಪಾಳ್ಯ ರಾಮಯ್ಯ, ಕೆ.ನಾರಾಯಣಗೌಡ,ಸಾಹುಕಾರ ಶಂಕರಪ್ಪ, ತ್ಯಾಗರಾಜ್, ತಾಪಂ ಮಾಜಿ ಸದಸ್ಯ ಮಂಜುನಾಥ್,ಪತ್ರಕರ್ತರಾದ ರಾಜೇಂದ್ರ, ರವಿ,ವೆಂಕಟೇಶ್‌ಬಾಬಾ, ಚಾಂದ್ ಪಾಷಾ, ಯಾದವ ಸಂಘದ ತಾಲ್ಲೂಕು ಅಧ್ಯಕ್ಷ ಅಮರನಾಥ್, ರಾಜ್ಯ ಕಾರ್ಯಕಾರಿ ಸದಸ್ಯ ಶ್ರೀನಿವಾಸಯಾದವ್, ನಿತೀಶ್ ಯಾದವ್, ಪ್ರಶಾಂತ್,ಅಮ್ಮೇರಹಳ್ಳಿ ಮಂಜುನಾಥ್,ಚಲಪತಿ, ಸೇವಾದಳ ದಾನೇಶ್ ಮತ್ತಿತರರಿದ್ದು, ಶುಭ ಕೋರಿದರು.

Leave a Reply

Your email address will not be published. Required fields are marked *