ಕೆಲಸದಲ್ಲಿ ಬದ್ದತೆ ಇಲ್ಲವಾದರೆ ಕುರ್ಚಿ ಖಾಲಿ ಮಾಡಿ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಸೊಸೈಟಿ ದೇವಾಲಯವಿದ್ದಂತೆ, ನಿಮ್ಮ ವೈಫಲ್ಯದಿಂದ ಬಡವರು,ಮಹಿಳೆಯರು,ರೈತರಿಗೆ ಸಕಾಲಕ್ಕೆ ಸಾಲ ವಿತರಿಸಲು ಸಾಧ್ಯವಾಗಿಲ್ಲ, ಅಲಂಕಾರಕ್ಕಾಗಿ ಅಧ್ಯಕ್ಷ ಸ್ಥಾನ ಬೇಕಾಗಿಲ್ಲ, ಬದ್ದತೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲವೆಂದರೆ ಕುರ್ಚಿ ಖಾಲಿ ಮಾಡಿ ಎಂದು ಹುದುಕುಳ ವಿಎಸ್‌ಎಸ್‌ಎನ್ ಆಡಳಿತ ಮಂಡಳಿಯನ್ನು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದಗೌಡ ತರಾಟೆಗೆ ತೆಗೆದುಕೊಂಡರು.
ಕೋಲಾರ-ಬoಗಾರಪೇಟೆ ರಸ್ತೆಯ ಹಂಚಾಳದ ಸಮುದಾಯಭವನದಲ್ಲಿ ಹುದುಕುಳ ವ್ಯವಸಾಯ ಸೇವಾ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ, ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳೆಯರಿಗೆ ೧.೭೫ ಕೋಟಿ ರೂ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಸಹಕಾರಿ ರಂಗ ಬಡವರ ವ್ಯವಸ್ಥೆ, ರೈತರು,ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಲು ಆಡಳಿತ ಮಂಡಳಿ ವಿಫಲವಾಗಿದೆ, ಸಾಲಕ್ಕಾಗಿ ಮಹಿಳೆಯರು ನಾಲ್ಕು ವರ್ಷಗಳಿಂದ ಕಾಯುತ್ತಿರುವುದಾಗಿ ಹೇಳುತ್ತಿದ್ದಾರೆ, ತಪ್ಪು ಒಪ್ಪಿಕೊಂಡು ಸಹಕಾರ ಸಂಘ ಸರಿಪಡಿಸಿ ಎಂದು ತಾಕೀತು ಮಾಡಿದರು.
ಸಾಲ ಕೊಡಿಸಿದ ಮೇಲೆ ವಸೂಲಿ ಮಾಡುವ ಬದ್ದತೆಯೂ ಅಗತ್ಯವಿದೆ, ಸಾಲ ಪಡೆದವರು ಎಷ್ಟೇ ದೊಡ್ಡವರಾದರೂ ಅವರ ಮನೆ ಮುಂದೆ ಹೋಗಿ ಕುಳಿತುಕೊಳ್ಳಿ ಮರುಪಾವತಿ ಮಾಡುವವರೆಗೂ ಬಿಡದಿರಿ, ಸಾಲ ವಸೂಲಿಯಲ್ಲಿನ ನಿಮ್ಮ ವೈಫಲ್ಯದಿಂದ ಈ ಭಾಗದ ಮಹಿಳೆಯರು,ರೈತರು ಸಾಲದಿಂದ ವಂಚಿತರಾಗಿದ್ದಾರೆ, ಆಡಳಿತ ಮಂಡಳಿ ಕುಳಿತು ಚರ್ಚಿಸಿ ಇದನ್ನು ಸರಿಪಡಿಸಿ ಮುಂದಿನ ಒಂದು ತಿಂಗಳೊಳಗೆ ೧೦೦ ಮಹಿಳಾ ಸಂಘಗಳಿಗೆ ಸಾಲ ನೀಡುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಬಡವರು ಮೋಸ ಮಾಡೋದಿಲ್ಲ, ಸಾಲದ ಕಂತು ಸರಿಯಾಗಿ ಪಾವತಿಸಿ, ಮುಂದಿನ ಬಾರಿ ತಲಾ ೧ ಲಕ್ಷ ಸಾಲ ನೀಡುವುದಾಗಿ ಭರವಸೆ ನೀಡಿ, ಉಳಿತಾಯದ ಹಣ ಡಿಸಿಸಿ ಬ್ಯಾಂಕಿನಲ್ಲೇ ಇಡಿ, ಸಾಲಕ್ಕೆ ಇಲ್ಲಿ, ಉಳಿತಾಯಕ್ಕೆ ಬೇರೆ ಬ್ಯಾಂಕ್ ಎಂಬ ಮನಸ್ಥಿತಿ ಬೇಡ ಎಂದರು.
ಪ್ರತಿ ಗ್ರಾ.ಪಂಗೆ ೫ ಕೋಟಿ ಸಾಲ
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಈವರೆಗೂ ಡಿಸಿಸಿ ಬ್ಯಾಂಕಿನಿAದ ಬಂಗಾರಪೇಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ೨೦೫ ಕೋಟಿ ರೂ ಸಾಲ ನೀಡಲಾಗಿದೆ, ದಿವಾಳಿಯಾಗಿದ್ದ ಬ್ಯಾಂಕನ್ನು ಬಡವರ, ಮಹಿಳೆಯರ ಬದುಕು ರೂಪಿಸುವ ಬ್ಯಾಂಕಾಗಿ ಬ್ಯಾಲಹಳ್ಳಿ ಗೋವಿಂದಗೌಡರು ಬದಲಿಸಿದ್ದಾರೆ ಎಂದು ಅಭಿನಂದಿಸಿದರು.
ಬoಗಾರಪೇಟೆ ತಾಲ್ಲೂಕಿನಲ್ಲಿ ಮುಂದಿನ ೬ ತಿಂಗಳೊಳಗೆ ಪ್ರತಿ ಗ್ರಾಮ ಪಂಚಾಯಿತಿಗೂ ತಲಾ ೫ ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ, ೫ ಲಕ್ಷ ಬಡ್ಡಿರಹಿತ ಸಾಲವನ್ನು ೧೦ ಲಕ್ಷಕ್ಕೇರಿಸಲು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ ಎಂದರು.
ಗೋವಿoದಗೌಡರು ರೈತನ ಮಗನಾಗಿ ದೇಶವೇ ಮೆಚ್ಚುವ ಕೆಲಸ ಮಾಡಿದ್ದಾರೆ, ದೇಶದಲ್ಲೇ ಅತಿ ಹೆಚ್ಚು ೧೫೦೦ ಕೋಟಿ ರೂ ಸಾಲವನ್ನು ಮಹಿಳೆಯರಿಗೆ ನೀಡಿದ್ದಾರೆ, ವಿರೋಧ ಪಕ್ಷದವರು ಬಾಯಿಗೆ ಬಂದAತೆ ಮಾತನಾಡುತ್ತಾರೆ, ಆದರೆ ಬ್ಯಾಂಕ್ ದಿವಾಳಿಯಾಗಿದ್ದಾಗ ಇವರೆಲ್ಲಾ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು.
ಗ್ರಾಮಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳ ರಚನೆಗೆ ನಾನೇ ಸಿಬ್ಬಂದಿಯನ್ನು ಕಳುಹಿಸುವೆ, ನಿಮಗೆ ಸಹಾಯ ಮಾಡಿದವರನ್ನು ಮರೆಯಬೇಡಿ, ಕಷ್ಟಕ್ಕೆ ನೆರವಾದವರಿಗೆ ಮತ ಹಾಕಿ, ಎಂದ ಅವರು, ವಿನಾಕಾರಣ ಬ್ಯಾಂಕ್ ಕುರಿತು ಟೀಕಿಸುವವರು ಮೂರ್ಖರು ಎಂದು ಟೀಕಿಸಿದರು.
ಸಭೆಯ ಅಧ್ಯಕ್ಷತೆಯನ್ನು ಹುದುಕುಳ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ಸುಂದರ ಶರ್ಮ ವಹಿಸಿದ್ದು, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಪಿ.ಎನ್.ಕೃಷ್ಣಾರೆಡ್ಡಿ, ಗ್ರಾ.ಪಂ ಅಧ್ಯಕ್ಷ ರವಿ, ಮಾಜಿ ಅಧ್ಯಕ್ಷ ಹರೀಶ್,ಸೊಸೈಟಿ ಉಪಾಧ್ಯಕ್ಷ ಪಾಕರಹಳ್ಳಿ ವೆಂಕಟೇಶಪ್ಪ, ನಿರ್ದೇಶಕರಾದ ಎನ್.ವೆಂಕಟೇಶ್, ಟಿ.ಶ್ರೀನಿವಾಸ್,ಹನುಮಪ್ಪ, ವೆಂಕಟೇಶಪ್ಪ, ವಿ.ಎಂ.ಶ್ರೀನಿವಾಸ್, ಗೌರಮ್ಮ, ಪಿಳ್ಳಮ್ಮ, ಪದ್ಮಮ್ಮ, ಮಾಗೇರಿ ವೆಂಕಟೇಶ್, ಅಯಾಜ್ ಪಾಷ, ವೆಂಕಟರಾಮಶೆಟ್ಟಿ, ಸೊಸೈಟಿ ಸಿಇಒ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *