ಕೋಲಾರ, ಕರ್ನಾಟಕ ಗ್ರಾಹಕ ವ್ಯಾಜ್ಯಗಳ ಪರಿಹಾರ ಅಯೋಗವು ಗ್ರಾಹಕ ಸಂರಕ್ಷಣಾ ಕಾಯ್ದೆ ೨೦೧೯ರ ಕುರಿತು ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದಿನಾಂಕ: ೦೧-೦೬-೨೦೨೩ ರಂದು ರಾತ್ರಿ ೮.೦೦ ರಿಂದ ೮.೩೦ ಗಂಟೆಯವರೆಗೆ ಆಕಾಶವಾಣಿಯಲ್ಲಿ ಫೋನ್-ಇನ್ ನೇರ ಪ್ರಸಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಗ್ರಾಹಕರು ಯಾವುದೇ ಪ್ರಶ್ನೆಗಳಿದ್ದಲ್ಲಿ ಮೇಲೆ ತಿಳಿಸಿರುವ ದಿನಾಂಕ ಹಾಗೂ ಸಮಯದಲ್ಲಿ ದೂರವಾಣಿ ಸಂಖ್ಯೆ ೦೮೦-೨೨೩೭೦೪೭೭/೨೨೩೭೦೪೮೮/೨೨೩೭೦೪೯೯ಕ್ಕೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬುಹುದಾಗಿರುತ್ತದೆ. ಹಾಗೆಯೇ ಗ್ರಾಹಕರು ತಮ್ಮ ಪ್ರಶ್ನೆಗಳನ್ನು ಮಿಂಚoಚೆ consumergrievances.queries@gmail.com ಮೂಲಕ ದಿನಾಂಕ ೩೧-೦೫-೨೦೨೩ರ ಒಳಗಾಗಿ ಕಳುಹಿಸಿಕೊಡಬಹುದು ಎಂದು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ರಿಜಿಸ್ಟಾçರ್ ಮತ್ತು ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.