ಕೋಲಾರ, ಆಗಸ್ಟ್-೨೦೨೩ನೇ ಸಾಲಿನ ಸರ್ಕಾರಿ/ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಆನ್ಲೈನ್ ಮುಖಾಂತರ ಪ್ರವೇಶ ಸಂಬoಧ ಅಧಿಸೂಚನೆ ಹೊರಡಿಸಿರುತ್ತಾರೆ.
ಈ ಹಿನ್ನಲೆಯಲ್ಲಿ ರಾಜ್ಯದ ೨೭೦ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಹಾಗೂ ೧೯೨ ಖಾಸಗಿ ಅನುದಾನಿತ ಸಂಸ್ಥೆಗಳ ವಿವಿಧ ವೃತ್ತಿಗಳ ಪ್ರವೇಶ ಸಂಬoಧ ಅರ್ಹ ಅಭ್ಯರ್ಥಿಗಳು ಸ್ವತಃ ಇಲಾಖಾ ವೆಬ್ಸೈಟ್ನ www.cite.karnataka.gov.in ಆನ್ಲೈನ್ನಲ್ಲಿ ಅರ್ಜಿಗಳನ್ನು ದಿನಾಂಕ: ೦೭-೦೬-೨೦೨೩ ರೂಳಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಕೋಲಾರ-೯೮೮೬೪೬೫೫೯, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕೆ.ಜಿ.ಎಫ್-೯೭೪೦೨೪೨೪೭೩, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ದಳಸನೂರು-೭೮೯೨೫೪೦೯೯೩, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮುಳಬಾಗಿಲು- ೯೪೪೯೨೭೧೭೬೭, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮಾಲೂರು-೯೪೪೯೧೧೭೨೮೦, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ರೋಣೂರು-೯೯೦೨೫೫೯೪೪೧, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ದೇವರಾಯ ಸಮುದ್ರ-೮೦೫೦೫೦೩೧೭೭, ಈ ಸಂಸ್ಥೆಗಳನ್ನು ಸಂಪರ್ಕಿಸಬಹುದು ಎಂದು ಕೋಲಾರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ(ಮ) ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.