ಶಾಂತ ಮತ್ತು ನಿರ್ಭೀತ ಮತದಾನಕ್ಕಾಗಿ ಸಾರ್ವಜನಿಕರ ಸಹಕಾರ ಅಗತ್ಯ-ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ


ಕೋಲಾರ, ಜಿಲ್ಲೆಯಲ್ಲಿ ಶಾಂತ, ನಿರ್ಭೀತ ಹಾಗೂ ನೈತಿಕ ಮತದಾನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಎಂ.ನಾರಾಯಣ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೋಲಾರ ಜಿಲ್ಲೆಯ ಕೋಲಾರ ವಿಧಾನಸಭಾ ಮತಕ್ಷೇತ್ರದಲ್ಲಿ ೨೮೭, ಮಾಲೂರು ಮತಕ್ಷೇತ್ರದಲ್ಲಿ ೨೫೨, ಮುಳಬಾಗಿಲು ಮತಕ್ಷೇತ್ರದಲ್ಲಿ ೨೭೮, ಶ್ರೀನಿವಾಸಪುರ ಮತಕ್ಷೇತ್ರದಲ್ಲಿ ೨೮೯ ಮತ್ತು ಬಂಗಾರಪೇಟೆ ಮತಕ್ಷೇತ್ರದ-೩೯ ಮತಗಟ್ಟೆಗಳು ಸೇರಿದಂತೆ ಒಟ್ಟು ೧೧೪೫ ಮತಗಟ್ಟೆಗಳ ಪೈಕಿ ೨೭೬ ಅತಿಸೂಷ್ಮ ಮತಗಟ್ಟೆಗಳು ಮತ್ತು ೮೬೯ ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಮಾದರಿ ನೀತಿಸಂಹಿತೆ ಜಾರಿಯಾಗುವ ಪೂರ್ವದಲ್ಲಿ ೧ ಪ್ರಕರಣದಲ್ಲಿ ೨೩೮೦೦೦ ನಗದು ೩೧ ಪ್ರಕರಣಗಳಲ್ಲಿ ರೂ-೭೦೩೯೮ ಮೌಲ್ಯದ ೧೫೭.೮೩ ಲೀ ಮದ್ಯ,೬ ಪ್ರಕರಣಗಳಲ್ಲಿ ರೂ ೧೭೪೭೫೦/- ಮೌಲ್ಯದ ೪.೨೧೭ ಕೆ.ಜಿ ಅಕ್ರಮ ಗಾಂಜಾ ಹಾಗೂ ರೂ ೧,೭೯,೪೩,೪೧೦/-ಗಳ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನೀತಿ ಸಂಹಿತೆ ಜಾರಿಯಾದ ನಂತರ ೨೪ ಪ್ರಕರಣಗಳಲ್ಲಿ ೨,೮೧,೭೮,೨೧೦/-ಗಳ ನಗದು, ೧೮ ಪ್ರಕರಣಗಳಲ್ಲಿ ರೂ೭೧೦೦೬/- ಮೌಲ್ಯದ ೧೮೭.೩೫ ಲೀ ಅಕ್ರಮ ಮದ್ಯ, ೧೪ ಪ್ರಕರಣಗಳಲ್ಲಿ ರೂ ೩೬,೦೪,೦೦೦/-ಗಳ ಮೊತ್ತದ ೩೫.೧೬೭ಕಿಲೋ ಅಕ್ರಮ ಗಾಂಜಾ, ೧ ಪ್ರಕರಣದಲ್ಲಿ ರೂ ೩,೦೦,೦೦೦/-ಬೆಲೆಯ ೪.೯೦೦ಕಿಲೋ ತೂಕದ ಬೆಳ್ಳಿ ಹಾಗೂ ರೂ ೧೬,೭೯,೬೮೭ಮೊತ್ತದ ಆಮಿಷದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಇಬ್ಬರ ವಿರುದ್ಧ ಗೂಂಡಾ ಕಾಯ್ದೆ ಮತ್ತು ೧೯ ಜನ ರೌಡೀ ಶೀಟರ್‌ಗಳ ವಿರುದ್ದ ಗಡೀಪಾರು ಆದೇಶ ಮಾಡಲಾಗಿದೆ. ಹೊಸದಾಗಿ ೩೫ ಜನರ ವಿರುದ್ಧ ಪ್ರಸಕ್ತ ಸಾಲಿನಲ್ಲಿ ರೌಡಿ ಹಾಳೆಗಳನ್ನು ತೆರೆಯಲಾಗಿದೆ. ೩೧೦ ಜನರ ವಿರುದ್ಧ ೯೬ ಪ್ರಕರಣಗಳನ್ನು ದಾಖಲಿಸಲಾಗಿದೆ. ಇವರಲ್ಲಿ ೨೯೬ ಜನರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿಈವರೆಗೆ ೫೩ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಕಾಂಗ್ರೆಸ್-೮,ಜೆಡಿಎಸ್-೧೩, ಬಿಜೆಪಿ-೫, ಕೆ ಆರ್‌ಎಸ್-೧, ಆಪ್-೧ ಹಾಗೂ ಪಕ್ಷೇತರರ ವಿರುದ್ಧ ೨ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೀತಿಸಂಹಿತೆ ಉಲ್ಲಂಘಿಸಿದ ೪ ಪ್ರಕರಣಗಳನ್ನು ಹೊಂದಿದೆ.
ಪೊಲೀಸ್ ವೀಕ್ಷಕರು ಜಿಲ್ಲೆಯ ೬೪ ಅತಿಸೂಕ್ಷö್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.
ಮತದಾನದ ೪೮ ಗಂಟೆಗಳ ಪೂರ್ವದಲ್ಲಿ ಅಂದರೆ ಮೇ ೭ ರಂದು ಸಂಜೆ ೬ ನಂತರ ಜಿಲ್ಲೆಯ ಕೋಳಿ ಫಾರಂಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿ ತಂಗಿದ್ದ ೧೨೦ ಜನರನ್ನು ಜಿಲ್ಲೆಯಿಂದ ಹೊರಗೆ ಕಳುಹಿಸಲಾಗಿದೆ.

ಚುನಾವಣಾ ಕರ್ತವ್ಯಕ್ಕಾಗಿ ಜಿಲ್ಲೆಯಾದ್ಯಂತ ೧ ಎಸ್‌ಪಿ,೧ಎಎಸ್‌ಪಿ,೫ಡಿಎಸ್‌ಪಿ, ೧೮ಪಿಐ/ಸಿಪಿಐ.೩೩ಪಿಎಸ್‌ಐ,೯೨೫ ಹೆಚ್‌ಸಿ/ಪಿಸಿ, ೫೫೦ಹೋಂಗಾರ್ಡ್,೪೦ಅರಣ್ಯ ಇಲಾಖೆಯ ಸಿಬ್ಬಂದಿ, ೪ ಕೆಎಸ್‌ಆರ್‌ಪಿ ತುಕಡಿಗಳು ಮತ್ತು ೧೩ ಕೇಂದ್ರ ಮೀಸಲು ಪಡೆ ತುಕಡಿಗಳನ್ನು ನಿಯೋಜಿಸಲಾಗಿದೆ. ಈಲ್ಲೆಯ ಒಟ್ಟು೧೧೪೫ ಮತಗಟ್ಟೆಗಳಿಗೆ ೫೭ ಸೆಕ್ರ‍್ಗಳನ್ನು ಗುರುತಿಸಿ ಅವುಗಳಿಗೆ ಪಿಎಸ್‌ಐ/ಎಎಸ್‌ಐ ದರ್ಜೆಯ ಅಧಿಕಾರಿಗಳನ್ನು ಅವರ ಮೇಲುಸ್ತುವಾರಿಗೆ ೧೫ ಜನ ಇನಸ್‌ಪೆಕ್ಟರ್ ದರ್ಜೆಯ ಅಧಿಕಾರಿಗಳನ್ನು ಹಾಗೂ ಪ್ರತಿ ತಾಲ್ಲೂಕಿಗೆ ಒಬ್ಬ ಡಿ ಎಸ್ ಪಿ ದರ್ಜೆಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಶ್ರೀನಿವಾಸಪುರ ಹಾಗೂ ಮುಳಬಾಗಿಲು ತಾಲ್ಲೂಕಿಗೆ ಎಸ್‌ಪಿ ಹಾಗೂ ಕೋಲಾರ ಮತ್ತು ಮಾಲೂರು ವಿಧಾನಸಭಾ ಕ್ಷೇತ್ರಗಳಿಗೆ ಎಸ್‌ಪಿರವರನ್ನು ಮೇಲ್ವಿಚಾರಣಾ ಅಧಿಕಾರಿಗಳನ್ನಾಗಿ ನಿಯೋಜಿಸಿ ಆದೇಶಿಸಲಾಗಿದೆ.
ಚುನಾವಣಾ ಬಂದೋಬಸ್ತ್ ಕರ್ತವ್ಯಕ್ಕಾಗಿ ಸುಮಾರು ೧೬೨೬ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಇವರುಗಳಿಗೆ ಚುನಾವಣಾ ಕರ್ತವ್ಯಗಳ ಬಗ್ಗೆ ತಿಳುವಳಿಕೆ ನೀಡಿ ಈ ಬಗ್ಗೆ ಕೈಪಿಡಿ ಹಾಗೂ ರೇಡಿಯಂ ಜಾಕೆಟ್‌ಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ೧೦೧ಸಶಸ್ತ ಮೀಸಲುಪಡೆ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಮತದಾನದ ದಿನದಂದು ಸಂಜೆ ಮತದಾನ ಮುಕ್ತಾಯವಾದ ನಂತರ ಎಲ್ಲ ಮತಯಂತ್ರಗಳನ್ನು ಆಯಾ ತಾಲ್ಲೂಕು ಕೇಂದ್ರಗಳ ಸ್ಟಾಗ್‌ರೂoಗೆ ರವಾನಿಸಲಾಗುತ್ತದೆ. ನಂತರ ಅಲ್ಲಿಂದ ಬಿಗಿ ಭಧ್ರತೆಯಲ್ಲಿ ಜಿಲ್ಲಾ ಕೇಂದ್ರದ ಸ್ಟಾಗ್‌ರೂಮ್‌ಗೆ ರವಾನಿಸಿ ಮತ ಎಣಿಕೆ ಮುಗಿಯುವವರೆಗೆ ಭದ್ರತೆಗಾಗಿ ಅಧಿಕಾರಿ ಸಿಬ್ಬಂದಿಗಳು ಹಾಗೂ ಬಿ ಎಸ್ ಎಫ್ ಹಾಗೂ ೪ ಕೆಎಸ್‌ಆರ್‌ಪಿ ತುಕಡಿಗಳನ್ನು ನೇಮಿಸಲಾಗುವುದು.
ಮತ ಎಣಿಕೆ ದಿನದಂದು ಜಿಲ್ಲೆಯಲ್ಲಿ ಪಕ್ಷಗಳ ಕಾರ್ಯಕರ್ತರು ಯಾವುದೇ ವಿಜಯೋತ್ಸವ, ಮೆರವಣಿಗೆ ಆಚರಣೆ ಮಾಡದಂತೆ ನಿಷೇಧಾಜ್ಞೆಯನ್ನು ಹೊರಡಿಸಲಾಗಿದೆ. ಸಾರ್ವಜನಿಕರು ಯಾವುದೇ ಆಮಿಷಗಳಿಗೆ ಮತ್ತು ಒತ್ತಡಗಳಿಗೆ ಒಳಗಾಗದೇ ನಿಭೀರ್ತಿಯಿಂದ ಮತ ಚಲಾಯಿಸಬೇಕೆಂದು ಹಾಗೂ ಶಾಂತಿಯುತ ಮತದಾನ ನಡೆಯಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕೆಂದು ಪತ್ರಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *