ನಮ್ಮ ನಡೆ ಮತಗಟ್ಟೆಯ ಕಡೆ : ಡಾ. ರಾಜೀವ ಕೊಲೇರ ಧ್ವಜಾರೋಹಣ ನೇರವೇರಿಸಿ ಪ್ರತಿಜ್ಞಾ ವಿಧಿ ಭೋದನೆ

ಸವದತ್ತಿ, ನಮ್ಮ ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮದ ಅಂಗವಾಗಿ ಸವದತ್ತಿ ತಾಲ್ಲೂಕಾ ಸ್ವೀಪ್ ಸಮಿತಿ ವತಿಯಿಂದ ಸವದತ್ತಿ ತಾಲೂಕ ಪಂಚಾಯತದಲ್ಲಿರುವ ವಿಕಲಚೇತನರ ವಿಶೇಷ ಮತಗಟ್ಟೆ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಗಳಾದ ಡಾ. ರಾಜೀವ ಕೊಲೇರ ಧ್ವಜಾರೋಹಣ ನೇರವೇರಿಸಿ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ಈ ಸಂದರ್ಭದಲ್ಲಿ ಖ್ಯಾತ ಗಾಯಕ ವಿಜಯ ಪ್ರಕಾಶ ಅವರ ಮತದಾನ ಗೀತೆಯನ್ನು ಮೊಳಗಿಸಲಾಯಿತು ಹಾಗೂ ಕಲಾ ತಂಡದವರು ಚುನಾವಣೆ ಗೀತೆಗಳನ್ನು ಹಾಡಿದರು.
ಬಳಿಕ ತಾಲೂಕ ಪಂಚಾಯತ ಆವರಣದಲ್ಲಿ ಕಾಲ್ನಡಿಗೆ ಜಾಥಾ ಹಾಗೂ ವಿಶೇಷ ಚೇತನರ ಬೈಕ್ ರ್ಯಾಲಿಗೆ ಚುನಾವಣಾ ಅಧಿಕಾರಿಗಳಾದ ಡಾ. ರಾಜೀವ ಕೊಲೇರ ಚಾಲನೆಯನ್ನು ನೀಡಿದರು. ತಾಲೂಕ ಪಂಚಾಯತ ಆವರಣದಿಂದ ಆರಂಭವಾದ ಕಾಲ್ನಡಿಗೆ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾರರಿಗೆ ಮತದಾನದ ಜಾಗೃತಿ ಮೂಡಿಸಿ ಕರಪತ್ರಗಳನ್ನು ನೀಡಿಲಾಯಿತು. ಬಳಿಕ ತಾಲೂಕಾ ಕ್ರೀಡಾಂಗಣದಲ್ಲಿರುವ ಪಿಂಕ್ ಮತಗಟ್ಟೆ ಕೇಂದ್ರದಲ್ಲಿ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಪಟ್ಟಣದ ಬಸ್ ನಿಲ್ದಾಣದಲ್ಲಿ ಮತದಾರರಿಗೆ ಮತದಾನದ ಕರ ಪತ್ರಗಳನ್ನು ನೀಡಿ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾ ಅಧಿಕಾರಿಗಳಾದ ಜಿ.ಬಿ ಜಕ್ಕನಗೌಡರ, ತಾಪಂ ಸಹಾಯಕ ನಿರ್ದೇಶಕರು (ಪಂ.ರಾ) ಆರ್ ಎ ಪಾಟೀಲ, ತಾಪಂ‌ ಸಹಾಯಕ ನಿರ್ದೇಶಕರು (ಗ್ರಾ.ಉ) ರಾಮಪ್ಪ ರಕ್ಕಸಗಿ, ತಾಲೂಕಾ ಆರೋಗ್ಯ ಅಧಿಕಾರಿ ಮಹೇಶ ಚಿತ್ತರಗಿ, ತಾಲೂಕಾ ಮಟ್ಟದ ಅಧಿಕಾರಿಗಳು, ತಾಪಂ ವ್ಯವಸ್ಥಾಪಕ ಜಿ. ಎಸ್ ಬಡೆಮ್ಮಿ, ತಾಪಂ ಸಿಬ್ಬಂದಿಗಳಾದ ಮಲೀಕಜಾನ ಮೋಮಿನ, ನಾಗರಾಜ ಬೆಹರೆ, ಬಸವರಾಜ ಹಂಕಪ್ಪನವರ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ವಿಶೇಷ ಚೇತನರು ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *