ಕೋಲಾರ, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ರಾಜ್ಯ ಬಿಜೆಪಿ ಸರ್ಕಾರ ಅಂಗೀಕರಿಸಿ ಜಾರಿಗಾಗಿ, ಅನುಷ್ಟಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದನ್ನು ಕರ್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಸ್ವಾಗತಿಸಿ ಇಡೀ ರಾಜ್ಯ ಮಾದಿಗ ಸಮುದಾಯ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸಲು ಬೆಂಬಲ ನೀಡುತ್ತಿರುವುದಾಗಿ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಪತ್ರಿಕಾ ಹೇಳಿಕೆ ನೀಡಿ ಮಾತನಾಡಿರುವ ಅವರು, ಕರ್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಸುಮಾರು ೩೦ ವರ್ಷಗಳಿಂದ ಒಳ ಮೀಸಲಾತಿಯನ್ನು ಪಡೆಯಲು ಅನೇಕ ಹೋರಾಟಗಳನ್ನು, ಚಳುವಳಿಗಳನ್ನು ಮಾಡಿಕೊಂಡು ಬಂದಿದ್ದರಿAದ ಅದರ ಪ್ರತಿಫಲ ಬಿಜೆಪಿ ಸರ್ಕಾರ ಅದಕ್ಕೆ ಸಾಮಾಜಿಕ ನ್ಯಾಯವನ್ನು ಕೊಟ್ಟಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಮತ್ತು ಜೆ.ಡಿ.ಎಸ್ ಸರ್ಕಾರಗಳು ಸುಳ್ಳುಪೊಳ್ಳು ಹೇಳಿಕೆಗಳನ್ನು ಕೊಟ್ಟು ಯಾಮಾರಿಸಿ ನಮ್ಮ ಸಮುದಾಯಗಳನ್ನು ಓಟ್‌ಬ್ಯಾಂಕ್ ಮಾಡಿಕೊಂಡು ಸರ್ಕರಗಳನ್ನು ರಚನೆ ಮಾಡಿ ಆಡಳಿತವನ್ನು ನಡೆಸಿದವು. ದಲಿತರ ಬಗ್ಗೆ ಆಗಲೀ ಹಿಂದುಳಿದವರ ಬಗ್ಗೆ ಆಗಲೀ ಸಾಮಾಜಿಕ ನ್ಯಾಯವನ್ನು ನೀಡಲಿಲ್ಲ. ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಬದ್ಧವಾಗಿ ಕೊಟ್ಟಿರುವಂತಹ ಮೀಸಲಾತಿಯಲ್ಲಿ ಯಾವುದೇ ಜೆ.ಡಿ.ಎಸ್, ಕಾಂಗ್ರೆಸ್ ರಾಜ್ಯ ಸರ್ಕಾರಗಳು ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾಗಿ ಸರ್ಕಾರಗಳನ್ನು ನಡೆಸಿದ್ದವು ಮತ್ತು ಪಾರದರ್ಶಕವಾಗಿ ನ್ಯಾಯವನ್ನು ಕೊಟ್ಟಿಲ್ಲ.
ಬಡಬಗ್ಗರಾದ ಮಾದಿಗ ಮತ್ತು ಉಪ ಜಾತಿಗಳಿಗೆ ರಾಜಕೀಯವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಯಾವುದೇ ನ್ಯಾಯ ಸಿಕ್ಕಿಲ್ಲ. ಒಳಮೀಸಲಾತಿಯನ್ನು ಜಾರಿಗೆ ತಂದರೆ ನಮ್ಮ ಸರ್ಕಾರಗಳು ಎಲ್ಲಿ ಉರಳಿಹೋಗುತ್ತವೋ ಎಂದು ಭಯಪಟ್ಟು ನಮ್ಮ ಸಮಾಜಕ್ಕೆ ಮೋಸ ಮಾಡಿದರು.
ಇವೆಲ್ಲವನ್ನು ಮನಗಂಡು ಮಾದಿಗ ಸಮುದಾಯ ಮತ್ತು ಉಪಜಾತಿಗಳ ಭವಿಷ್ಯವನ್ನು ನಿರ್ಧರಿಸಿ ಈ ಸಮುದಾಯಗಳು ಎಲ್ಲಾ ರಂಗಗಳಲ್ಲಿ ಮುಂದುವರೆಯಬೇಕೆoದು ರಾಜ್ಯ ಬಿಜೆಪಿ ಸರ್ಕಾರವು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟದಲ್ಲಿ ಅಂಗೀಕರಿಸಿ ಅನುಷ್ಟಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸನ್ನು ಮಾಡಿ ನಮ್ಮ ಸಮುದಾಗಳಿಗೆ ನ್ಯಾಯವನ್ನು ಒದಗಿಸಿದೆ.
ಆದ್ದರಿಂದ ಕೋಲಾರ ಜಿಲ್ಲೆ ಮತ್ತು ರಾಜ್ಯದಲ್ಲಿ ಎಲ್ಲಾ ಮಾದಿಗ ಬಂಧುಗಳು ಬಿಜೆಪಿ ಪಕ್ಷಕ್ಕೆ ತಮ್ಮ ಮತ ನೀಡುವ ಮೂಲಕ ತಮ್ಮ ಋಣವನ್ನು ತೀರಿಸಿಕೊಳ್ಳಬೇಕೆಂದು ಕರ್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಕಾನೂನು ಘಟಕದ ರಾಜ್ಯಾಧ್ಯಕ್ಷ ಹಾರೋಹಳ್ಳಿ ವೆಂಕಟೇಶ್, ರಾಜ್ಯ ಸಮಿತಿಯ ಸಾಹುಕಾರ್ ಶಂಕರಪ್ಪ, ಕಾನೂನು ಘಟಕದ ಜಿಲ್ಲಾಧ್ಯಕ್ಷ ಕಮ್ಮಸಂದ್ರ ದೇವರಾಜ್, ಜಿಲ್ಲಾ ಹಿರಿಯ ಉಪಾಧ್ಯಕ್ಷ ಟಮಕ ರಮೇಶ್, ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ವಿ.ಶ್ರೀನಿವಾಸ್, ಜಿಲ್ಲಾ ಕಾರ್ಯಾಧ್ಯಕ್ಷ ಮುಳ್ಳಹಳ್ಳಿ ವೆಂಕಟಸ್ವಾಮಿ, ಜಿಲ್ಲಾ ಕಾರ್ಯದರ್ಶಿ ವಿ.ವೆಂಕಟರಮಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬೆಟ್ಟಗೇರಹಳ್ಳಿ ಮುನಿಯಪ್ಪ, ತಾಲೂಕು ಕಾರ್ಯಾಧ್ಯಕ್ಷ ರಾಜಕಲ್ಲಹಳ್ಳಿ ವೆಂಕಟೇಶ್, ಕೋಲಾರ ತಾಲೂಕು ಅಧ್ಯಕ್ಷ ರಾಜೇಶ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವೆಂಕಟರತ್ನಮ್ಮ, ತಾಲೂಕು ಉಪಾಧ್ಯಕ್ಷ ನರಸಿಂಹ ಸೇರಿದಂತೆ ಇನ್ನಿತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.