ಕೋಲಾರ ಜಿಲ್ಲೆಯಲ್ಲಿ ವೋಟ್ ಫ್ರಂ ಹೋಮ್‌ಗೆ ಉತ್ತಮ ಪ್ರತಿಕ್ರಿಯೆ.

ಕೋಲಾರ, ಜಿಲ್ಲೆಯಲ್ಲಿ ವೋಟ್ ಫ್ರಂ ಹೊಂ (ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ)ಗೆ ಅಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೆಂಕಟ್‌ರಾಜಾ ರವರು ತಿಳಿಸಿದ್ದಾರೆ.
ನಮೂನೆ ೧೨-ಡಿ ಯಲ್ಲಿ ನೊಂದಾಯಿಸಿಕೊoಡಿರುವ ೮೦ ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರಿಗೆ ಇಂದು ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಇದರನ್ವಯ ಚುನಾವಣಾ ಆಯೋಗವು ಮತದಾನದಿಂದ ವಂಚಿತರಾಗುತ್ತಿದ್ದ ೮೦ ವರ್ಷ ದಾಟಿದ ಹಿರಿಯ ನಾಗರಿಕರಿಗೆ ಮನೆಗೆ ಮತಗಟ್ಟೆ ಕಳುಹಿಸಿ ಮತದಾನ ಮಾಡುವ ಅಪೂರ್ವ ವ್ಯವಸ್ಥೆಯನ್ನು ಕಲ್ಪಿಸಿತ್ತು. ಅದರಂತೆ ಜಿಲ್ಲೆಯಲ್ಲಿ ೮೦ ವರ್ಷ ಮೇಲ್ಪಟ್ಟ ೮೨೭ ಮತದಾರರಯ ಪೋಸ್ಟಲ್ ವೋಟಿಂಗ್ ಮಾಡಲು ನೋಂದಾಯಿಸಿ ಕೊಂಡಿದ್ದರು ಹಾಗೂ ೧೯೧ ವಿಶೇಷ ಚೇತನ ಮತದಾರರು ಪೋಸ್ಟಲ್ ವೋಟಿಂಗ್ ಮೂಲಕ ಮತ ಚಲಾಯಿಸಲು ನೋಂದಾಯಿಸಿಕೊoಡಿದ್ದರು. ಇವರಿಗೆ ಮತದಾನ ಮಾಡಲು ಜಿಲ್ಲೆಯಲ್ಲಿ ೧೦೦ ತಂಡಗಳನ್ನು ೯೩ ವಿವಿಧ ಮಾರ್ಗಗಳಲ್ಲಿ ಮಾತದಾನಕ್ಕಾಗಿ ಕಳುಹಿಸಿಕೊಡಲಾಗಿತ್ತು.

ಮತ ಕ್ಷೇತ್ರವಾರು ಮತದಾನದ ವಿವರ:
೧೪೪- ಶ್ರೀನಿವಾಸಪುರ ವಿಧಾನ ಸಭಾ ಮತ ಕ್ಷೇತ್ರದಲ್ಲಿ ೮೦ ವರ್ಷ ಮೇಲ್ಪಟ್ಟ ೨೫೬ ಮತದಾರರು ಪೋಸ್ಟಲ್ ವೋಟಿಂಗ್‌ಗಾಗಿ ನೋಂದಾಯಿಸಿಕೊoಡಿದ್ದು ಇವರಲ್ಲಿ ಇಂದು ಮತದಾನದ ಅಂತ್ಯದ ವೇಳೆಗೆ ೨೩೮ ಮತದಾರರು ಮತ ಚಲಾಯಿಸಿದ್ದಾರೆ ಹಾಗೂ ೩೬ ವಿಶೇಷ ಚೇತನ ಮತದಾರರು ನೋಂದಾಯಿಸಿಕೊoಡಿದ್ದು ಇಂದು ೩೩ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ.

೧೪೫- ಮುಳಬಾಗಿಲು ವಿಧಾನಸಭಾ ಮತ ಕ್ಷೇತ್ರದಲ್ಲಿ ೮೦ ವರ್ಷ ಮೇಲ್ಪಟ್ಟ ೮೨ ಮತದಾರರು ಪೋಸ್ಟಲ್ ವೋಟಿಂಗ್‌ಗಾಗಿ ನೋಂದಾಯಿಸಿಕೊoಡಿದ್ದು ಇವರಲ್ಲಿ ಇಂದು ಮತದಾನದ ಅಂತ್ಯದ ವೇಳೆಗೆ ೭೮ ಮತದಾರರು ಮತ ಚಲಾಯಿಸಿದ್ದಾರೆ ಹಾಗೂ ೨೧ ವಿಶೇಷ ಚೇತನ ಮತದಾರರು ನೋಂದಾಯಿಸಿಕೊoಡಿದ್ದು ಇಂದು ೨೧ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ.

೧೪೬- ಕೆ.ಜಿ.ಎಫ್ ವಿಧಾನಸಭಾ ಮತ ಕ್ಷೇತ್ರದಲ್ಲಿ ೮೦ ವರ್ಷ ಮೇಲ್ಪಟ್ಟ ೧೨೬ ಮತದಾರರು ಪೋಸ್ಟಲ್ ವೋಟಿಂಗ್‌ಗಾಗಿ ನೋಂದಾಯಿಸಿಕೊoಡಿದ್ದು ಇವರಲ್ಲಿ ಇಂದು ಮತದಾನದ ಅಂತ್ಯದ ವೇಳೆಗೆ ೧೧೬ ಮತದಾರರು ಮತ ಚಲಾಯಿಸಿದ್ದಾರೆ ಹಾಗೂ ೩೭ ವಿಶೇಷ ಚೇತನ ಮತದಾರರು ನೋಂದಾಯಿಸಿಕೊoಡಿದ್ದು ಇಂದು ೩೪ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ.

೧೪೭- ಬಂಗಾರಪೇಟೆ ವಿಧಾನಸಭಾ ಮತ ಕ್ಷೇತ್ರದಲ್ಲಿ ೮೦ ವರ್ಷ ಮೇಲ್ಪಟ್ಟ ೭೩ ಮತದಾರರು ಪೋಸ್ಟಲ್ ವೋಟಿಂಗ್‌ಗಾಗಿ ನೋಂದಾಯಿಸಿಕೊoಡಿದ್ದು ಇವರಲ್ಲಿ ಇಂದು ಮತದಾನದ ಅಂತ್ಯದ ವೇಳೆಗೆ ೬೨ ಮತದಾರರು ಮತ ಚಲಾಯಿಸಿದ್ದಾರೆ ಹಾಗೂ ೦೪ ವಿಶೇಷ ಚೇತನ ಮತದಾರರು ನೋಂದಾಯಿಸಿಕೊoಡಿದ್ದು ಇಂದು ೦೪ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ. ೧೪೮- ಕೋಲಾರ ವಿಧಾನಸಭಾ ಮತ ಕ್ಷೇತ್ರದಲ್ಲಿ ೮೦ ವರ್ಷ ಮೇಲ್ಪಟ್ಟ ೧೦೯ ಮತದಾರರು ಪೋಸ್ಟಲ್ ವೋಟಿಂಗ್‌ಗಾಗಿ ನೋಂದಾಯಿಸಿಕೊoಡಿದ್ದು ಇವರಲ್ಲಿ ಇಂದು ಮತದಾನದ ಅಂತ್ಯದ ವೇಳೆಗೆ ೧೦೪ ಮತದಾರರು ಮತ ಚಲಾಯಿಸಿದ್ದಾರೆ ಹಾಗೂ ೨೩ ವಿಶೇಷ ಚೇತನ ಮತದಾರರು ನೋಂದಾಯಿಸಿಕೊoಡಿದ್ದು ಇಂದು ೨೧ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ. ೧೪೯- ಮಾಲೂರು ವಿಧಾನಸಭಾ ಮತ ಕ್ಷೇತ್ರದಲ್ಲಿ ೮೦ ವರ್ಷ ಮೇಲ್ಪಟ್ಟ ೧೮೧ ಮತದಾರರು ಪೋಸ್ಟಲ್ ವೋಟಿಂಗ್‌ಗಾಗಿ ನೋಂದಾಯಿಸಿಕೊoಡಿದ್ದು ಇವರಲ್ಲಿ ಇಂದು ಮತದಾನದ ಅಂತ್ಯದ ವೇಳೆಗೆ ೧೬೫ ಮತದಾರರು ಮತ ಚಲಾಯಿಸಿದ್ದಾರೆ ಹಾಗೂ ೭೦ ವಿಶೇಷ ಚೇತನ ಮತದಾರರು ನೋಂದಾಯಿಸಿಕೊoಡಿದ್ದು ಇಂದು ೬೨ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ.

ಇನ್ನೂ ಅತ್ಯಗತ್ಯ ಸೇವೆಗಳಯಡಿಯಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ನಮೂನೆ ೧೨ ಡಿ ಮೂಲಕ ನೋಂದಾಯಿಸಿಕೊoಡಿದ್ದು ೧೪೪- ಶ್ರೀನಿವಾಸಪುರ ವಿಧಾನಸಭಾ ಮತ ಕ್ಷೇತ್ರದಲ್ಲಿ ನೋಂದಾಯಿಸಿಕೊAಡಿರುವ ೧೭೬ ಮತದಾರರ ಪೈಕಿ ಇಂದು ೨೫ ಮತದಾರರು ಮತ ಚಲಾಯಿಸಿದರು. ೧೪೫- ಮುಳಬಾಗಿಲು ವಿಧಾನಸಭಾ ಮತ ಕ್ಷೇತ್ರದಲ್ಲಿ ನೋಂದಾಯಿಸಿಕೊoಡಿರುವ ೮೪ ಮತದಾರರ ಪೈಕಿ ಇಂದು ೦೩ ಮತದಾರರು ಮತ ಚಲಾಯಿಸಿದರು. ೧೪೬- ಕೆ.ಜಿ.ಎಫ್ ವಿಧಾನಸಭಾ ಮತ ಕ್ಷೇತ್ರದಲ್ಲಿ ನೋಂದಾಯಿಸಿಕೊoಡಿರುವ ೬೪ ಮತದಾರರ ಪೈಕಿ ಇಂದು ೧೨ ಮತದಾರರು ಮತ ಚಲಾಯಿಸಿದರು. ೧೪೭- ಬಂಗಾರಪೇಟೆ ವಿಧಾನಸಭಾ ಮತ ಕ್ಷೇತ್ರದಲ್ಲಿ ನೋಂದಾಯಿಸಿಕೊAಡಿರುವ ೧೦೮ ಮತದಾರರ ಪೈಕಿ ಇಂದು ೨೪ ಮತದಾರರು ಮತ ಚಲಾಯಿಸಿದರು. ೧೪೮- ಕೋಲಾರ ವಿಧಾನಸಭಾ ಮತ ಕ್ಷೇತ್ರದಲ್ಲಿ ನೋಂದಾಯಿಸಿಕೊoಡಿರುವ ೧೫೦ ಮತದಾರರ ಪೈಕಿ ಇಂದು ೩೨ ಮತದಾರರು ಮತ ಚಲಾಯಿಸಿದರು. ೧೪೯- ಮಾಲೂರು ವಿಧಾನಸಭಾ ಮತ ಕ್ಷೇತ್ರದಲ್ಲಿ ನೋಂದಾಯಿಸಿಕೊAಡಿರುವ ೭೭ ಮತದಾರರ ಪೈಕಿ ಇಂದು ೪ ಮತದಾರರು ಮತ ಚಲಾಯಿಸಿದರು.
ಮೇ ೦೩ ಹಾಗೂ ೦೪ ರಂದು ಸಹ ಅತ್ಯಗತ್ಯ ಸೇವೆಗಳಯಡಿಯಲ್ಲಿ ನೋಂದಾಯಿಸಿಕೊoಡಿರುವ ಮತದಾರರಿಗೆ ಆಯಾ ಮತ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪೋಸ್ಟಲ್ ವೋಟಿಂಗ್ ಕೇಂದ್ರವನ್ನು ತೆರೆಯಲಾಗಿದ್ದು ಇಂದು ಮತದಾನ ಮಾಡಲಾಗದ ಮತದಾರರು ಮತಚಲಾಯಿಸಬಹುದಾಗಿದೆ. 
ಒಟ್ಟಾರೆ ಜಿಲ್ಲಯಲ್ಲಿ ೮೦ ವರ್ಷ ಮೇಲ್ಪಟ್ಟ ೮೨೭ ಮತದಾರರಲ್ಲಿ ಇಂದು ೭೬೩ (ಶೇ. ೯೨.೨೬) ಮತದಾರರು ಮತ ಚಲಾಯಿಸಿದ್ದಾರೆ.  ೧೯೧ ನೋಂದಾಯಿತ ವಿಶೇಷ ಚೇತನರ ಪೈಕಿ ೧೭೫ (ಶೇ. ೯೧.೬೨) ಮತದಾರರು ಇಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಅತ್ಯಗತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ೬೫೯ ಮತದಾರರ ಪೈಕಿ ಇಂದು ೧೦೦ (ಶೇ. ೧೫.೧೭) ಮತದಾರರು ಮತ ಚಲಾಯಿಸಿದ್ದಾರೆ.
ವೋಟ್ ಫ್ರಂ ಹೋಮ್ ಅಡಿ ನೋಂದಾಯಿಸಿಕೊoಡಿರುವ ಮತದಾರರಿಗೆ ಹಾಗೂ ಇಂದು ಮತದಾನ ಮಾಡಲಾಗದ ಮತದಾರರಿಗೆ ಮೇ ೦೩ ರಂದು ಪೂನಃ ಚುನಾವಣಾಧಿಕಾರಿಗಳು ಮನೆಗೆ ಮತಗಟ್ಟೆಗಳನ್ನು ಕಳುಹಿಸಲಿದ್ದಾರೆ ಆದ್ದರಿಂದ ತಪ್ಪದೆ ಮತದಾನವನ್ನು ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *