ಆಕರ್ಷಕ ಚಿತ್ತಾರದಿಂದ ಗಮನ ಸೆಳೆಯುತ್ತಿವೆ ಸಖಿ ಮತಗಟ್ಟೆಗಳು

ಕೋಲಾರ, ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಚುನಾವಣಾ ಆಯೋಗ ಬಿರುಸಿನ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಮೇ ೧೦ ರಂದು ನಡೆಯುವ ಮತದಾನದ ದಿನದಂದು ಎಲ್ಲರೂ ತಪ್ಪದೇ ಮತದಾನ ಮಾಡಲು ಜನರಲ್ಲಿ ಅರಿವು ಮೂಡಿಸಲು ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಮಹಿಳೆಯರಲ್ಲಿ ಮತದಾನ ಜಾಗೃತಿ ಮತ್ತು ಮಹಿಳಾ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಜಿಲ್ಲಾದ್ಯಂತ ಸಖಿ ಪಿಂಕ್ ಬೂತ್‌ಗಳನ್ನು ತೆರೆಯಲಾಗಿದೆ. ಈ ಮತಗಟ್ಟೆಗಳು ಬೇರೆ ಮತಗಟ್ಟೆಗಳಿಗಿಂತ ಬಿನ್ನವಾಗಿ ಸಿಂಗರಿಸಲ್ಪಟ್ಟು, ವಿಶೇಷವಾಗಿ ಮಹಿಳೆಯರನ್ನು ಆಕರ್ಷಿಸುವಂತೆ ನಿರ್ಮಿಸಲಾಗಿದ್ದು, ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕ ಕಾವಲು ಸಿಬ್ಬಂದಿವರೆಗೂ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತದೆ ಎಂದು ತಿಳಿಸಿದರು.
ಸಖಿ ಮತಗಟ್ಟೆಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮಾಡಿಸುವ ಘೋಷಣೆಗಳನ್ನು ಬರೆಸಲಾಗಿದೆ. . ಈ ಕೇಂದ್ರಗಳು ಮತದಾರರ ಗಮನ ಸೆಳೆಯುವಂತಿವೆ ಮತಗಟ್ಟೆಯಲ್ಲಿನ ಚಿತ್ತಾರಗಳು ಚಿತ್ತಾಕರ್ಷಕವಾಗಿ ಮೂಡಿಬಂದಿವೆ ಮತ್ತು ಮತದಾರರನ್ನು ಆಕರ್ಷಸುತ್ತಿವೆ. ಆಕರ್ಷಕ ಬಳ್ಳಿಗಳು ಹಾಗೂ ಈ ಮತಗಟ್ಟೆಗಳು ಗುಲಾಬಿ ಬಣ್ಣದಿಂದ ಮೂಡಿದ್ದು, ಮಹಿಳೆಯರ ಆಕರ್ಷಣೆಯ ಕೇಂದ್ರವಾಗಲಿದೆ. ಈ ಮತ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಕರ್ಯಗಳು ಲಭ್ಯವಿರುವಂತೆ ಖಾತ್ರಿ ಪಡಿಸಿಕೊಳ್ಳಲಾಗಿದೆ.
ಈ ಬಾರಿ ರಾಜ್ಯಾದ್ಯಂತ ೧೩೨೦ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ ಕೋಲಾರ ಜಿಲ್ಲೆಯ ೩೦ ಮತಗಟ್ಟೆಗಳು ಸಖಿ ಮತಗಟ್ಟೆಗಳಾಗಿವೆ. ಮತದಾನದ ದಿನದಂದು ಅರ್ಹ ಮತದಾರರೆಲ್ಲರೂ ತಪ್ಪದೇ ಮತದಾನ ಮಾಡಿದರೆ, ಈವರೆಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಪಟ್ಟಿರುವ ಶ್ರಮಕ್ಕೆ ಸಾರ್ಥಕತೆ ಸಿಗುತ್ತದೆ. ಶೇ.೧೦೦% ರಷ್ಟು ಮತದಾನ ಮಾಡುವ ಮೂಲಕ ರಾಜ್ಯದಲ್ಲಿ ಕೋಲಾರ ಜಿಲ್ಲೆಯನ್ನು ಉತ್ತುಂಗಕ್ಕೆ ಏರುಸುವಲ್ಲಿ ಮತದಾತರ ಸಹಕಾರ ಅತ್ಯಗತ್ಯ ಎಂದರು.

ತಾಲ್ಲೂಕುವಾರು ಸಖಿ ಪಿಂಕ್ ಮತಗಟ್ಟೆಗಳು:-
೧೪೪- ಶ್ರೀನಿವಾಸಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ-೧೦೧ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದಿಂಬಾಲ, ೧೪೧-ಸರ್ಕಾರಿ ಪ್ರೌಢ ಶಾಲೆ ಸರೋಜಿನಿ ರಸ್ತೆ ಶ್ರೀನಿವಾಸಪುರ, ೧೪೦-ತ್ಯಾಗರಾಜು ಬಡಾವಣೆ ಶ್ರೀನಿವಾಸಪುರ, ೪೮-ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜಿಂಕಲವಾರಿಪಲ್ಲಿ, ರಾಯಲಪಾಡು ಹಾಗೂ ೩೯-ಸರ್ಕಾರಿ ಜ್ಯೂನಿಯರ್ ಕಾಲೇಜು ಗೌನಿಪಲ್ಲಿ, ಇಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
೧೪೫- ಮುಳಬಾಗಿಲು ವಿಧಾನಸಭಾ ಮತಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ: ೧೪೪-ಹಿರಿಯ ಪ್ರಾಥಮಿಕ ಶಾಲೆ, ಪಳ್ಳಿಗರ ಪಾಳ್ಯ, ೨೨೫- ಹಿರಿಯ ಪ್ರಾಥಮಿಕ ಶಾಲೆ, ಎಮ್ಮೆನತ್ತ ೫೮- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಡಿಯನೂರು ೧೬೬- ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸೊನ್ನವಾಡಿ ೧೩೨-ತೋಟಗಾರಿಕಾ ಇಲಾಖೆ, ಮುಳಬಾಗಿಲು ಇಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
೧೪೬- ಕೆ.ಜಿ.ಎಫ್ ವಿಧಾನಸಭಾ ಮತಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ: ೮೩ ಬೆಮೆಲ್ ಪ್ರೆಮರಿ ಶಾಲೆ, ೩೭- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಮ್ಮಸಂದ್ರ, ೧೫೮- ಪುರಸಭಾ ವಾಚನಾಲಯ ಕೆ.ಜಿ.ಎಫ್, ೪- ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಡಮಾಕನಹಳ್ಳಿ, ೧೨- ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಟ್ಟಹಳ್ಳಿ. ಇಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
೧೪೭- ಬಂಗಾರಪೇಟೆ ವಿಧಾನಸಭಾ ಮತಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ: ೧೧೪ ಐ ಬಿ ಎಂ ಕಾಲೇಜು ಬಂಗಾರಪೇಟೆ, ೧೬೨-ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೀಲುಕೊಪ್ಪ, ೬೦-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾದಮುತ್ತನಹಳ್ಳಿ, ೮೫- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರಮಂಗಲ, ೧೩೦- ಬಿ ಇ ಓ ಕಚೇರಿ ಬಂಗಾರಪೇಟೆ ಇಲ್ಲಿ ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ.
೧೪೮-ಕೋಲಾರ ವಿಧಾನಸಭಾ ಮತಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ: ೨೫೯- ಸರ್ಕಾರಿ ಪ್ರೌಢಶಾಲೆ ಬೆಗ್ಲಿಹೊಸಹಳ್ಳಿ, ೨೬೧- ಸರ್ಕಾರಿ ಪ್ರೌಢಶಾಲೆ ಬೆಗ್ಲಿಹೊಸಹಳ್ಳಿ, ೧೨೭- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೇಟೆ ಚಾಮನಹಳ್ಳಿ, ೫೭- ಸರ್ಕಾರಿ ಜ್ಯೂನಿಯರ್ ಕಾಲೇಜು ಕೊಠಡಿ ಸಂಖ್ಯೆ-೨ ವೇಮ್‌ಗಲ್, ೧೪೧- ಕೊಠಡಿ ಸಂಖ್ಯೆ-೧ ಬಿ.ಇ.ಓ ಕಚೇರಿ ಕೋಲಾರ, ಇಲ್ಲಿ ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ.
೧೪೯- ಮಾಲೂರು ವಿಧಾನಸಭಾ ಮತಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ: ೭೩-ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಕ್ತಿನಗರ, ೩೦-ಸರ್ಕಾರಿ ಪ್ರೌಢಶಾಲೆ ದೊಡ್ಡಶಿವಾರ, ೬೮-ಜಿ.ಜಿ.ಪಿ.ಎಸ್ ಮಾಲೂರು, ೨೧೫-ಕಿರಿಯ ಪ್ರಾಥಮಿಕ ಶಾಲೆ ಕಲ್ಕೆರೆ, ೧೩೨- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಚ್ ಹೊಸಕೋಟೆ, ಇಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

Leave a Reply

Your email address will not be published. Required fields are marked *