ಕೋಲಾರ, ವಿಧಾನಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಭಾರತ ಚುನಾವಣಾ ಆಯೋಗವು ಕೋಲಾರ ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳಿಗೆ ೪ ಐ.ಆರ್.ಎಸ್ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ತಿಳಿಸಿದರು.
ಕೋಲಾರ ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಖರ್ಚುವೆಚ್ಚಗಳ ಪರಿವೀಕ್ಷಣೆಗೆ ಚುನಾವಣಾ ವೀಕ್ಷಕರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ೧೪೪ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಅಮಿತ್ ಕುಮಾರ್ ಮೊ.ಸಂ. ೯೪೧೯೧೫೪೬೫೦, ೧೪೫ ಮುಳಬಾಗಿಲು ಮತ್ತು ೧೪೬ ಕೆ.ಜಿ.ಎಫ್ ವಿದಾನಸಭಾ ಕ್ಷೇತ್ರಗಳಿಗೆ ಜಿ.ಅಜಯ್ ರಾಬಿನ್‌ಸಿಂಗ್ ಮೊ.ಸಂ. ೯೪೪೫೫೯೯೫೮೩, ೧೪೭ ಬಂಗಾರಪೇಟೆ ಮತ್ತು ೧೪೯ ಮಾಲೂರು ವಿಧಾನಸಭಾ ಕ್ಷೇತ್ರಗಳಿಗೆ ಶಿವನಾರಾಯಣ್ ಮೊ.ಸಂ. ೯೯೧೨೫೯೧೪೭೫ ಮತ್ತು ೧೪೮ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ತಗಡಿ ಮಂಜುನಾಥ್ ಮೊ.ಸಂ. ೭೫೦೭೭೩೭೭೭೬ ಅಧಿಕಾರಿಗಳನ್ನು ನೆಮಿಸಲಾಗಿದೆ.
ಇವರುಗಳಿಗೆ ಸಮನ್ವಯಾಧಿಕಾರಿಗಳಾಗಿ ರೇಷ್ಮೆ ಇಲಾಖೆಯ ಉಪ ನಿರ್ದೆಶಕರಾದ ಕಾಳಪ್ಪ (ಶ್ರೀನಿವಾಸಪುರ), ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಉಪ ನಿರ್ದೇಶಕರಾದ ಎನ್.ರವಿಚಂದ್ರ (ಮುಳಬಾಗಲು ಮತ್ತು ಕೆ.ಜಿ.ಎಫ್), ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರವಿ (ಬಂಗಾರಪೇಟೆ ಮತ್ತು ಮಾಲೂರು) ಹಾಗೂ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಹರಿಕೃಷ್ಣ (ಕೋಲಾರ) ರವರುಗಳನ್ನು ನೇಮಿಸಲಾಗಿದೆ ಎಂದರು.