ಶ್ರೀನಿವಾಸಪುರ ರಾಜಕಾರಣದಲ್ಲಿ ನಾಲ್ಕು ದಶಕಗಳಿಂದ ಒಬ್ಬರು ಆದ ನಂತರ ಮತ್ತೊಬ್ಬರು ರಾಜಕೀಯವನ್ನುತನ್ನ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ವಿನಹ ಯಾವುದೇ ರೈತರ ಹಾಗೂ ಯುವಕರ ಉದ್ಯೋಗದ ಕಡೆ ಗಮನಹರಿಸುತ್ತಿಲ್ಲ ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ನೂತನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗುಂಜೂರು ಶ್ರೀನಿವಾಸ್ ರೆಡ್ಡಿ ಕಿಡಿ ಕಾರಿದ್ದಾರೆ.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಿಂದ ಮುದುವಾಡಿ ತಾಲೂಕು ಪಂಚಾಯಿತಿ ವ್ಯಾಪ್ತಿಯ ಮಾಜಿ ಸದಸ್ಯರು ಹಾಗೂ ಜೆಡಿಎಸ್ ಪಕ್ಷದ ಪ್ರಭಾವಿ ಮುಖಂಡರು ಆಗಿರುವ ಮುಧುವಾಡಿ ಮಂಜುನಾಥ್ ಹಾಗೂ ಗಟ್ಟಹಳ್ಳಿ ವಿಶ್ವನಾಥ್ ಅವರನ್ನು ಗುಂಜೂರು ಶ್ರೀನಿವಾಸ್ ರೆಡ್ಡಿ ರವರು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡು ನಂತರ ಮಾತನಾಡಿದ ಅವರುವಿಧಾನಸಭಾ ಕ್ಷೇತ್ರದಲ್ಲಿ 40 ವರ್ಷಗಳಿಂದ ರಾಜಕಾರಣ ಮಾಡುತ್ತಿರುವ ಹಿರಿಯರು ಈ ಕ್ಷೇತ್ರದಲ್ಲಿ ಯಾವುದೇ ಕೈಗಾರಿಕೆಗಳನ್ನು ಹಾಗೂ ರೈತರಿಗೆ ಅನುಕೂಲವಾಗುವ ಉತ್ಪನ್ನ ಮಾರುಕಟ್ಟೆಗಳನ್ನು ತೆರೆಯದೆ ಮೀನಾವೇಶ ನಡೆಸುತ್ತಿದ್ದಾರೆ.
ಮಹಿಳೆಯರಿಗೆ ತನ್ನದ್ದೇ ಆದಂತಹ ಕೌಶಲ್ಯ ಅಭಿವೃದ್ಧಿಗೆ ಸ್ವಾವಲಂಬನೆ ಬದುಕನ್ನು ಕಟ್ಟಿಕೊಡಬೇಕಾದಂತಹ ಇಲ್ಲಿನ ಆಡಳಿತ ಪಕ್ಷದ ರಾಜಕಾರಣಿಗಳು ಡಿಸಿಸಿ ಬ್ಯಾಂಕ್ ವತಿಯಿಂದ ಸಾಲ ನೀಡುತ್ತೇವೆ ಎಂದು ಜನರನ್ನು ಸೇರಿಸಿಕೊಂಡು ಮತಗಳನ್ನು ಸೆಳೆಯಲು ತಮ್ಮ ವಾಕ್ಚಾತುರ್ಯವನ್ನು ಬಳಸಿಕೊಳ್ಳುತ್ತಿದ್ದಾರೆ ಮತ್ತು ಡಿಸಿಸಿ ಬ್ಯಾಂಕ್ ಅನ್ನು ಬಳಕೆ ಮಾಡಿಕೊಂಡು ತಮ್ಮ ಅಭಿವೃದ್ಧಿಗೆ ಆದ್ಯತೆ ನೀಡಿ ಅವರು ಜನರಿಗೆ ಮರಳು ಮಾಡುತ್ತಿದ್ದಾರೆ.
ಈ ಕ್ಷೇತ್ರದಲ್ಲಿ ನೂತನವಾಗಿ ಜನರು ಆಶೀರ್ವಾದ ಮಾಡ ಲು ನನ್ನತ್ತ ಜನ ಸೇರ್ಪಡೆಗೊಳ್ಳುತ್ತಿದ್ದಾರೆ ಇದರಿಂದ ನನ್ನ ರಾಜಕೀಯ ಬೆಳವಣಿಗೆ ಮತ್ತಷ್ಟು ಅಭಿವೃದ್ಧಿಯಾಗುತ್ತಿದೆ ಎಂದು ತಮ್ಮ ಆಶಾಭಾವವನ್ನು ವ್ಯಕ್ತಪಡಿಸಿದರು.
ಗುಂಜೂರು ಶ್ರೀನಿವಾಸ್ ರೆಡ್ಡಿ ಬಣಕ್ಕೆ ಸೇರ್ಪಡೆಯಾದ ನಂತರ ಮುದುವಾಡಿ ಮಂಜುನಾಥ್ ಮಾತನಾಡಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ನಾಯಕತ್ವದ ಕೊರತೆ ಇದೆ ಇದುವರೆಗೂ ನಡೆಯುತ್ತಿದ್ದಂತಹ ರಾಜಕಾರಣಕ್ಕೆ ಸಂಜೆ ವೇಳೆ ಆಗುತ್ತಾ ಬಂದಿದೆ ಇನ್ನು ಸೂರ್ಯೋದಯವಾಗಬೇಕಾಗಿದೆ.
ಯುವಕರಂತೆ ಕೆಲಸ ಮಾಡುತ್ತಿರುವ ಗುಂಜೂರು ಶ್ರೀನಿವಾಸ್ ರೆಡ್ಡಿ ಈ ಕ್ಷೇತ್ರದ ಅಭಿವೃದ್ಧಿಗೆ ತನ್ನದೇ ಆದಂತಹ ಹಣವನ್ನು ವ್ಯಯ ಮಾಡಿ ಅಭಿವೃದ್ಧಿ ಪಡಿಸಲುಬಂದಿರುವ ಗುಂಜೂರು ಶ್ರೀನಿವಾಸ್ ರೆಡ್ಡಿ ಬಣಕ್ಕೆ ನಾವು ಹಗಲಿರಲು ದುಡಿಯುತ್ತೇವೆ ಮತ್ತು ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ನಮ್ಮ ಪಕ್ಷದ ಕಾರ್ಯಕರ್ತರನ್ನು ಸಹ ಗುಂಜೂರು ಶ್ರೀನಿವಾಸ ರೆಡ್ಡಿ ಬಣಕ್ಕೆ ನಿಲ್ಲಿಸುವುದಾಗಿ ತಮ್ಮ ಶಪತವನ್ನು ಮಾಡಿದರು.
ಈ ಸಂದರ್ಭ ಗುಂಜೂರು ಶ್ರೀನಿವಾಸ್ ರೆಡ್ಡಿ ಬಣದ ಮುಖಂಡರಾದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಜಶೇಖರ ರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಅಲಿಯಾಸ್ ಪೆದ್ದ ರೆಡ್ಡಿ, ಮಾಜಿ ಪುರಸಭಾ ಅಧ್ಯಕ್ಷರಾದ ಬಿ ಎಲ್ ಪ್ರಕಾಶ್, ವಾಲ್ಮೀಕಿ ಗುರುಕುಲ ಪೀಠ ಜಿಲ್ಲಾಧ್ಯಕ್ಷರಾದ ಹರೀಶ್ ನಾಯಕ್, ಮಾಜಿ ಪುರಸಭಾ ಸದಸ್ಯ ಮಹಮ್ಮದ್ ಅಲಿ, ಯುವ ಮುಖಂಡರಾದ ಶ್ರೀರಾಮ್ , ಶಂಶೀರ್, ಪಟೇಲ್ ಶೆ ಪೀ, ಹೆಬ್ಬಟ ರಫೀಕ್ ಬಂಗವಾದಿ ನಾಗರಾಜ ಗೌಡ ಸೇರಿದಂತೆ ಮುಂತಾದವರು ಈ ಸಮಯದಲ್ಲಿ ಉಪಸ್ಥಿತರಿದ್ದರು