೨,೦೦೦ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಆದಾಗ್ಯೂ, ಕರೆನ್ಸಿ ನೋಟುಗಳು ಸೆಪ್ಟೆಂಬರ್ ೩೦ ರವರೆಗೆ ಕಾನೂನುಬದ್ಧವಾಗಿ ಮುಂದುವರಿಯುತ್ತದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಸೆಪ್ಟೆಂಬರ್ ೩೦, ೨೦೨೩ ರವರೆಗೆ ೨,೦೦೦ ರೂ ನೋಟುಗಳಿಗೆ ಠೇವಣಿ ಮತ್ತು/ಅಥವಾ ವಿನಿಮಯ ಸೌಲಭ್ಯವನ್ನು ಒದಗಿಸುವಂತೆ RBI ಬ್ಯಾಂಕ್‌ಗಳನ್ನು ಕೇಳಿದೆ.
ತಕ್ಷಣವೇ ಜಾರಿಗೆ ಬರುವಂತೆ ೨,೦೦೦ ರೂಪಾಯಿ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಕೇಂದ್ರೀಯ ಬ್ಯಾಂಕ್ ಕೂಡ ಬ್ಯಾಂಕ್‌ಗಳಿಗೆ ಸೂಚಿಸಿದೆ. ಆರ್‌ಬಿಐನ “ಕ್ಲೀನ್ ನೋಟ್ ನೀತಿ”ಗೆ ಅನುಗುಣವಾಗಿ ಈ ಬದಲಾವಣೆಯನ್ನು ತರಲಾಗಿದೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
೨೦೦೦ ರೂ. ನೋಟು ನೀಡದಂತೆ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ.
ಹಾಲಿ ಇರುವ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಸಲಹೆ ನೀಡಲಾಗಿದೆ
ಬ್ಯಾಂಕುಗಳಲ್ಲಿ ೨೦೦೦ ರೂ. ನೋಟುಗಳ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
೨೦೧೮ ರಲ್ಲಿ ೨೦೦೦ ನೋಟು ಮುದ್ರಣ ಸ್ಥಗಿತಗೊಳಿಸಲಾಗಿತ್ತು.
೨೦೦೦ ನೋಟು ಚಲಾವಣೆಯನ್ನು ಆರ್ಬಿಐ ವಾಪಸ್ ಪಡೆದುಕೊಂಡಿದೆ.
೨೦೧೬ರ ನವೆಂಬರ್ ನಲ್ಲಿ ೨೦೦೦ ರೂ. ನೋಟು ಚಲಾವಣೆಗೆ ತರಲಾಗಿತ್ತು.
ಸೆಪ್ಟೆಂಬರ್ ೩೦ರವರೆಗೆ ನೋಟು ಬದಲಾವಣೆಗೆ ಅವಕಾಶ ನೀಡಲಾಗಿದೆ.
೨೦,೦೦೦ ರೂ.ವರೆಗೆ ಖಾತೆಗೆ ಜಮಾ ಮಾಡಬಹುದಾಗಿದೆ.
ಬ್ಯಾಂಕುಗಳಲ್ಲಿ ೨೦೦೦ ರೂ. ನೋಟು ಬದಲಾವಣೆ ಮಾಡಿಕೊಳ್ಳಬಹುದಾಗಿದ್ದು, ಸೆ. ೩೦ರವರೆಗೂ ಅವಕಾಶ ಕಲ್ಪಿಸಲಾಗಿದೆ.