ಕೋಲಾರ: ಮುಂದಿನ ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಖಚಿತ ಅವರೊಟ್ಟಿಗೆ ಎಲ್ಲರೂ ಜೊತೆಯಾಗಿ ಜಿಲ್ಲೆಯನ್ನು ಅಭಿವೃದ್ಧಿ ಮಾಡೋಣ ಎಂದು ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ತಿಳಿಸಿದರು
ತಾಲೂಕಿನ ಹುತ್ತೂರು ಹೋಬಳಿಯ ರಾಮಸಂದ್ರ ಗ್ರಾಮದಲ್ಲಿ ಸೋಮವಾರ ವಿವಿಧ ಅನುದಾನದಲ್ಲಿ ಸುಮಾರು ೪೦ ಲಕ್ಷ ವೆಚ್ಚದ ಸಿಸಿ ರಸ್ತೆಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಜಿಲ್ಲೆಯನ್ನು ವಿಶೇಷವಾಗಿ ಮಾದರಿಯಾಗಿ ಅಭಿವೃದ್ಧಿಯ ಮಾಡುವ ದೃಷ್ಟಿಯಿಂದ ಬರಡು ಭೂಮಿಗೆ ೧೪೦೦ ಕೋಟಿ ಖರ್ಚು ಮಾಡಿ ಕೆ.ಸಿ ವ್ಯಾಲಿ ನೀರು ತಂದಿದ್ದು ಸಿದ್ದರಾಮಯ್ಯ ಅದರಿಂದಾಗಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಪಕ್ಷದ ನಾಯಕರ ಪ್ರಮಾಣಿಕ ಪ್ರಯತ್ನಕ್ಕೆ ಸಿದ್ದರಾಮಯ್ಯ ಸ್ಪರ್ಧೆಗೆ ಒಪ್ಪಿಗೆ ನೀಡಿದ್ದಾರೆ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಜನ ಪಕ್ಷತೀತವಾಗಿ ಅವರನ್ನು ಬೆಂಬಲಿಸಿ ಮತ್ತಷ್ಟು ಅಭಿವೃದ್ಧಿಗೆ ಸಹಕರಿಸಬೇಕಾಗಿದೆ ಎಂದರ
ರಾಜ್ಯದಲ್ಲಿ ಬಿಜೆಪಿ ಸರಕಾರ ಕೇವಲ ಹಣದಿಂದ ಮತದಾರರನ್ನು ಕೊಂಡುಕೊಳ್ಳುಬಹುದು ಎಂಬ ಭ್ರಮೆಯಿಂದ ಅಭಿವೃದ್ಧಿಯ ಕಡೆ ಗಮನಹರಿಸಿಲ್ಲ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಹಣ ಪಡೆದು ಮತ ಕಾಂಗ್ರೆಸ್ ಪಕ್ಷಕ್ಕೆ ಹಾಕುತ್ತಾರೆ ಕಾಂಗ್ರೆಸ್ ಪಕ್ಷದಿಂದ ಸರ್ವ ಧರ್ಮ ಜಾತಿಗಳ ಅಭಿವೃದ್ಧಿ ಸಾಧ್ಯ ಬಿಜೆಪಿಯಿಂದ ಕೇವಲ ಆಯ್ದ ಜಾತಿಗಳಿಗೆ ಮಾತ್ರ ಸೀಮಿತವಾಗಿದ್ದು ಜನ ಬುದ್ಧಿವಂತರಿAದ್ದು ಬಿಜೆಪಿಗೆ ಪಾಠ ಕಲಿಸುತ್ತಾರೆ ಎಂದರು
ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ಬಿಜೆಪಿ ಪಕ್ಷಕ್ಕೆ ೪೦% ಕಮಿಷನ್ ಚಿಂತೆಯಾದರೆ ಕಾಂಗ್ರೆಸ್ ಪಕ್ಷಕ್ಕೆ ಅಭಿವೃದ್ಧಿಯ ಚಿಂತೆಯಾಗಿದೆ ಸರಕಾರಕ್ಕೆ ವಿರೋಧ ಪಕ್ಷದ ಶಾಸಕರು ಕೂಡ ಕಮಿಷನ್ ಕೊಟ್ಟು ಅನುದಾನವನ್ನು ತೆಗೆದುಕೊಂಡು ಬರಬೇಕಾದ ಪರಿಸ್ಥಿತಿ ಇದೆ ಆಸೆ ಆಮಿಷಗಳಿಗಾಗಿ ಅಧಿಕಾರಕ್ಕೆ ಬಂದ ಸರ್ಕಾರದಿಂದ ಒಂದೇ ಒಂದು ಅಭಿವೃದ್ಧಿ ಕೆಲಸವಾದರೂ ಮಾಡಿದ್ದರಾ ಎಂದು ಮತದಾರರು ಯೋಚಿಸಬೇಕಾಗಿದೆ ಎಂದರು.
ರಾಜ್ಯ ಮತ್ತು ಕೇಂದ್ರದಲ್ಲಿ ಡಬಲ್ ಇಂಜಿನ್ ಸರಕಾರ ಬಂದರೆ ಮಾತ್ರ ಎಂದು ಅಧಿಕಾರಕ್ಕೆ ಬಂದರು ಅವರ ಪ್ರಣಾಳಿಕೆಯಲ್ಲಿನ ಒಂದಾದರೂ ಜಾರಿ ಮಾಡಿದ್ದರಾ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ ಪ್ರಶ್ನೆ ಮಾಡಿದರೆ ಜಾತಿ ಧರ್ಮಗಳ ಮಧ್ಯೆ ಘರ್ಷಣೆ ಉಂಟುಮಾಡಿ ಲಾಭ ಪಡೆಯುವುದಾಗಿದೆ ಶಾಸಕರು ೯ ವರ್ಷಗಳ ಅಧಿಕಾರಾವಧಿಯಲ್ಲಿ ಜನರ ನಿರೀಕ್ಷೆಗೂ ಮೀರಿ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದು ಮುಂದಿನ ಬಾರಿಯೂ ನಿಮ್ಮಗಳ ಆಶೀರ್ವಾದ ಕಾಂಗ್ರೆಸ್ ಪಕ್ಷಕ್ಕೆ ಇರಬೇಕಾಗಿದೆ ಎಂದರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಹೊಳಲಿ ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೀಸಂದ್ರ ಗೋಪಾಲಗೌಡ,ಯುವ ಮುಖಂಡರಾದ ರಾಜು ಶ್ರೀನಿವಾಸಪ್ಪ, ನಂದಿನಿ ಪ್ರವೀಣ್,ಮುಖಂಡರಾದ ಸಿಎಂ ನಾರಾಯಣಸ್ವಾಮಿ, ಅಬ್ಬಣಿ ಸಂಪತ್, ಹರಳಕುಂಟೆ ವೆಂಕಟೇಶ್, ಮಲ್ಲಂಡಹಳ್ಳಿ ಬಾಬು, ದೊಡ್ನಹಳ್ಳಿ ರಾಮಕೃಷ್ಣೇಗೌಡ, ಕೃಷ್ಣೇಗೌಡ, ಶಶಿಕಲಾ, ಕೋದಂಡಪ್ಪ, ಯಾರಂಘಟ್ಟ ಮುನಿರಾಜು, ಯುವರಾಜ್, ಗಿರೀಶ, ಅಬ್ಬಣಿ ನಾಗರಾಜ್, ಮುಂತಾದವರು ಇದ್ದರು.