೧೪ ರಂದು ಶನಿವಾರ ಸ್ಫರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಕುರಿತು ಮಾಹಿತಿ ಮೇಳ

ಕೋಲಾರ: ನಗರದ ವಿವೇಕ್ ಇನ್ಫೋಟೆಕ್, ಸ್ಫರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಯ ವತಿಯಿಂದಜ.೧೪ ರ ಶನಿವಾರ ಬೆಳಿಗ್ಗೆ ೯.೩೦ ಗಂಟೆಗೆ ಇಲ್ಲಿನ ಟಿ.ಚನ್ನಯ್ಯ ರಂಗಮoದಿರದಲ್ಲಿ, ಸ್ಫರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಕುರಿತು ಮಾಹಿತಿ ಮೇಳ, ಸಾಧಕರಿಗೆ ಸನ್ಮಾನ ಹಾಗೂ ಸಂವಾದ, ಸಂಸ್ಥೆಯ ೫ನೇ ವರ್ಷದ ವಾರ್ಷಿಕೋತ್ಸವ ಮತ್ತು ಒಂದು ದಿನದ ವಿಶೇಷ ಕಾರ್ಯಾಗಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ. ಪ್ರಮೋದ್ ಕುಮಾರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವಿಶೇಷ ಕಾರ್ಯಕ್ರಮಕ್ಕೆ ಕೆ.ಎ.ಎಸ್. ಅಧಿಕಾರಿಗಳಾದ ಎಂ. ಬಾಬು, ಕೆ.ಎನ್.ಚೈತ್ರ, ನವೀನ್ ಪ್ರಸಾದ್ ಕಟ್ಟೀಮನಿ, ರಾಜೇಶ್ವರಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಸ್.ಗಣೇಶ್ ಅವರು ಭಾಗವಹಿಸಲಿದ್ದಾರೆ. ಕರ್ನಾಟಕದ ಪ್ರಸಿದ್ದ ಇತಿಹಾಸ ಉಪನ್ಯಾಸಕ ಧಾರವಾಡದಮೋಹನ್‌ಶಿಂಧೆ ಅವರು ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಇವರೊಂದಿಗೆ ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳಾದ ಧಾರವಾಡದ ಮಹ್ಮದ್ ಇಲಿಯಾಸ್, ಅಮರೇಶ್ ರಾಥೋಡ್, ಕಿಶೋರ್ ಕುಮಾರ್, ಕೋಲಾರದ ಎಸ್.ಆರ್.ರಾಕೇಶ್, ಎಸ್.ಕಿರಣ್ ಕುಮಾರ್ ಸೇರಿದಂತೆ ಇತರರು ಮಾರ್ಗದರ್ಶನ ನೀಡಲಿದ್ದಾರೆ ಎಂದರು.
ಕಾರ್ಯಾಗಾರದಲ್ಲಿ ಈ ಹಿಂದಿನ ನೇಮಕಾತಿಗಳು ಮತ್ತು ಮುಂದಿನ ನೇಮಕಾತಿಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಇದರ ಜೊತೆಗೆ ಕೆ.ಎ.ಎಸ್, ಪಿ.ಎಸ್.ಐ, ಪಿ.ಡಿ.ಓ, ಎಚ್.ಎಸ್.ಟಿ.ಆರ್, ಎಫ್.ಡಿ.ಎ, ಎಸ್.ಡಿ.ಎ, ಗ್ರೂಪ್-ಸಿ, ಟಿ.ಇ.ಟಿ, ಸಿ.ಇ.ಟಿ ಮತ್ತು ಪಿ.ಸಿ. ಸೇರಿದಂತೆ ವಿವಿಧ ಪರೀಕ್ಷೆಗಳ ಪಠ್ಯಕ್ರಮನ್ನು ನೀಡಲಾಗುತ್ತದೆ. ಇದರೊಂದಿಗೆ ಸಂಪನ್ಮೂಲ ವ್ಯಕ್ತಿಗಳು ಪರೀಕ್ಷಾ ದೃಷ್ಠಿಕೋನದಿಂದ ಅತ್ಯವಶ್ಯಕ ಮಾಹಿತಿಗಳ ಕುರಿತು ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿದರು.
ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಜಿ.ಮುರಳಿ ಅವರು ಮಾತನಾಡಿ, ಸಂಸ್ಥೆಯಲ್ಲಿ ನೂರಾರು ಸ್ಫರ್ಧಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದು, ಇದರಲ್ಲಿ ಸಂಸ್ಥೆಯ ಇಬ್ಬರು ಸಂಪನ್ಮೂಲ ವ್ಯಕ್ತಿಗಳು ಕೆ.ಎ.ಎಸ್,ಅದರಂತೆ ಸಂಸ್ಥೆಯ ವಿದ್ಯಾರ್ಥಿಗಳು ಜಿ.ಪಿ.ಎಸ್.ಟಿ.ಆರ್ ಶಿಕ್ಷಕರಾಗಿ,ಪೋಲಿಸ್ ಪೇದೆಗಳಾಗಿ, ಅನೇಕ ಮಂದಿ ಟಿ.ಇ.ಟಿ ಅರ್ಹತೆ ಪಡೆದಿದ್ದಾರೆ. ಇನ್ನುಳಿದಂತೆ ಹಲವರು ಪ್ರಗತಿ ಹಾದಿಯಲ್ಲಿದ್ದು ಈಗಾಗಲೆ ವಿವಿಧ ಪರಿಕ್ಷೆಯನ್ನು ಎದುರಿಸಿದ್ದು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ ಎಂದು ವಿವರಿಸಿದರು.
ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಗೊಂದಲಗಳು ಉಂಟಾದಾಗ ವಿವೇಕ್ ಇನ್ಪೋಟೆಕ್ ಸಂಸ್ಥೆಯು ವಿದ್ಯಾರ್ಥಿಗಳ ಪರವಾಗಿ ನಿಂತು ಸಾಕಷ್ಟು ಹೋರಾಟಗಳನ್ನು ನಡೆಸಿದ್ದು, ಇದರ ಭಾಗವಾಗಿ ೨೦೨೨ ಪೋಲಿಸ್ ಕಾನ್ಸಟೇಬಲ್ ನೇಮಾಕಾತಿಯಲ್ಲಿ ವಯೋಮಿತಿ ಹೆಚ್ಚಳಕ್ಕೆ ಒತ್ತಾಯಿಸಿದಾಗ ನಮ್ಮ ಮನವಿಗೆ ಸ್ಪಂದಿಸಿದ ಸರ್ಕಾರ ಮುಂದಿನ ನೇಮಾಕತಿಯಲ್ಲಿ ವಯೋಮಾನ ಹೆಚ್ಚಳ ಮಾಡಲಾಯಿತು. ೨೦೨೧ ಎಫ್.ಡಿ.ಎ ಪರೀಕ್ಷಾ ಅಕ್ರಮದ ಕುರಿತು ಪ್ರತಿಭಟನೆ ಮರು ಪರೀಕ್ಷೆಗೆ ಆಗ್ರಹಿಸಿ ಗಾಂಧೀವನದಲ್ಲಿ ಮೌನ ಧರಣಿ ಹಾಗೂ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು ಎಂದರು.
೨೦೨೦ರ ಸಿವಿಲ್ ಪೋಲಿಸ್ ಕಾನ್ಸಟೇಬಲ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕಂಗ್ಲೀಷ್ ಬಳಕೆ (ಇಂಗ್ಲಿಷ್ ಪದಗಳನ್ನು ಕನ್ನಡ ಲಿಪಿಯಲ್ಲಿ ಮುದ್ರಿತ) ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ, ನಂತರ ನಡೆಯುವ ಪರೀಕ್ಷೆಗಳಲ್ಲಿ ತಿದ್ದಿಕೊಳ್ಳಲಾಗುವುದೆಂದು ಪೋಲಿಸ್ ಪರೀಕ್ಷಾ ಪ್ರಾಧಿಕಾರ ವತಿಯಿಂದ ಸಂಸ್ಥೆಗೆ ಪತ್ರ ಬಂದಿದ್ದು ನಂತರದ ಪರೀಕ್ಷೆಗಳಲ್ಲಿ ಆಗಿದ್ದ ಪ್ರಮಾಧವನ್ನು ಸರಿಪಡಿಸಿದ್ದಾರೆ ಎಂದು ತಿಳಿಸಿದರು.
ಸಂಸ್ಥೆಯ ಮುಖ್ಯ ಸಂಪನ್ಮೂಲವ್ಯಕ್ತಿ ಎಸ್.ಆರ್.ರಾಖೇಶ್ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಸಾಕಷ್ಟು ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು ಪ್ರತಿಯೊಬ್ಬ ಸ್ಪರ್ಧಾರ್ಥಿಗಳು ಇದಕ್ಕೆ ಸಿದ್ದತೆಯನ್ನು ನಡೆಸಿಕೊಳ್ಳಬೇಕಾಗಿರುತ್ತದೆ. ಅದರಂತೆ ಸಂಸ್ಥೆಯ ವಿದ್ಯಾರ್ಥಿಗಳಿಗೆ ಧಾರವಾಡ ಮತ್ತು ಬೆಂಗಳೂರಿನಿoದ ವಿವಿಧ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿ ಬೋಧನೆ ಮಾಡಿಸಲಾಗುತ್ತಿದೆ. ಅದರಂತೆ ಪ್ರತಿ ಶನಿವಾರ ಮಾದರಿ ಪರೀಕ್ಷೆಗಳನ್ನು ಸಂಸ್ಥೆಯಲ್ಲಿ ನಡೆಸಲಾಗುತ್ತಿದೆ. ಇದರ ಜೊತೆಗೆ ಪ್ರತಿ ದಿನದ ಪ್ರಚಲಿತ ಘಟನೆಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಎಸ್.ಕಿರಣ್ ಕುಮಾರ್ ಮಾತನಾಡಿ, ಸಂಸ್ಥೆಯಿoದ ಕಡುಬಡತನ ಹಾಗೂ ವಿಶೇಷಚೇತನ ಸ್ಫರ್ಧಾಥಿಗಳಿಗೆ ವಿಶೇಷ ರಿಯಾಯಿತಿ ಮತ್ತು ತೃತೀಯ ಲಿಂಗಿಗಳಿಗೆ ಸಂಪೂರ್ಣ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತಿದೆ. ಇದರನ್ನು ಪ್ರತಿಯೊಬ್ಬರೂ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಎಸ್.ಶಿವರಾಜ್, ಎನ್.ನವೀನ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *